Advertisement

ಡೆಲ್ಲಿ ಡೇರ್‌ ಡೆವಿಲ್ಸ್‌ಗೆ ಗಂಭೀರ್‌ ನಾಯಕನಾಗುವ ಸಾಧ್ಯತೆ

06:15 AM Jan 29, 2018 | Team Udayavani |

ಬೆಂಗಳೂರು: ಹನ್ನೊಂದನೇ ಆವೃತ್ತಿ ಪಿಎಲ್‌ನಲ್ಲಿ ಕೋಲ್ಕತಾ ನೈಟ್‌ ರೈಡರ್ ತಂಡದಿಂದ ಹೊರಬಿದ್ದು ಇದೀಗ ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡವನ್ನು ಕೂಡಿಕೊಂಡಿರುವ ಗೌತಮ್‌ ಗಂಭೀರ್‌ ಡೆಲ್ಲಿ ತಂಡಕ್ಕೆ ನಾಯಕರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.

Advertisement

ಗಂಭೀರ್‌ 2.80 ಕೋಟಿ ರೂ.ಗೆ ಡೆಲ್ಲಿ ತಂಡಕ್ಕೆ ಬಿಕರಿಯಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಡೆಲ್ಲಿ ತಂಡದ ಕೋಚ್‌ ರಿಕಿ ಪಾಂಟಿಂಗ್‌ ಹೇಳಿರುವುದು ಹೀಗೆ. ಗಂಭೀರ್‌ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ. ಅವರೊಂದಿಗೆ ನಾಯಕನ ಸ್ಥಾನ ವಹಿಸಿಕೊಳ್ಳುವಂತೆ ಮಾತುಕತೆ ನಡೆಸಿದ್ದೇವೆ. ಅವರ ನಿರ್ಧಾರ ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ ಎಂದು ಪಾಂಟಿಂಗ್‌ ತಿಳಿಸಿದರು. 2012 ಹಾಗೂ 2014ರ ಐಪಿಎಲ್‌ನಲ್ಲಿ ಗಂಭೀರ್‌ ನೇತೃತ್ವದಲ್ಲಿ ಕೋಲ್ಕತಾ ನೈಟ್‌ರೈಡರ್ ಚಾಂಪಿಯನ್‌ ಆಗಿತ್ತು. ಹೀಗಿದ್ದರು ತಂಡದ ಫ್ರಾಂಚೈಸಿ ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರನ್ನು ತಂಡದಿಂದ ಹೊರಗೆ ಬಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next