Advertisement

IPL 2025; ಡೆಲ್ಲಿ ಬಿಟ್ಟು ಹೋಗಲ್ವಂತೆ ರಿಷಭ್ ಪಂತ್..!; ರಾಹುಲ್ ಬಗ್ಗೆಯೂ ಸಿಕ್ತು ಅಪ್ಡೇಟ್

01:37 PM Jul 21, 2024 | Team Udayavani |

ಹೊಸದಿಲ್ಲಿ: ಐಪಿಎಲ್ 2025 ರ ಮೆಗಾ ಹರಾಜಿಗೆ ಮುಂಚಿತವಾಗಿ ರಿಷಭ್ ಪಂತ್ (Rishabh Pant) ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ನಿಂದ ಹೊರಬರುವ ಸಾಧ್ಯತೆಯಿದೆ ಎಂಬ ಊಹಾಪೋಹಗಳಿಗೆ ವಿರುದ್ಧವಾಗಿ, ವಿಕೆಟ್ ಕೀಪರ್-ಬ್ಯಾಟರ್ ಫ್ರಾಂಚೈಸಿಯಲ್ಲಿ ಉಳಿಯುತ್ತಾರೆ ಎಂದು ಮೂಲಗಳು ಐಎಎನ್‌ಎಸ್‌ ಗೆ ತಿಳಿಸಿವೆ.

Advertisement

ಶನಿವಾರ ಬೆಳಿಗ್ಗೆಯಿಂದ, ವಿವಿಧ ಮಾಧ್ಯಮ ವರದಿಗಳು ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಪಂತ್ ಅವರು ಫ್ರಾಂಚೈಸಿಯನ್ನು ತೊರೆಯುವ ಸಾಧ್ಯತೆಯಿದೆ ಎಂದು ಹೇಳಿಕೊಂಡಿವೆ. ಅವರು ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಲು ಯೋಚನೆ ಮಾಡಿದ್ದಾರೆ ಎನ್ನಲಾಗಿತ್ತು. ಮಹೇಂದ್ರ ಸಿಂಗ್ ಧೋನಿ ಅವರು ನಿವೃತ್ತಿ ಯೋಚನೆಯಲ್ಲಿರುವ ಕಾರಣ ಸಿಎಸ್ ಕೆ ಕೂಡಾ ಭಾರತೀಯ ವಿಕೆಟ್ ಕೀಪರ್ ಬ್ಯಾಟರ್ ಹುಡುಕಾಟದಲ್ಲಿದೆ.

ಆದರೆ ಮೂಲಗಳು ಐಎಎನ್‌ಎಸ್‌ಗೆ ತಿಳಿಸಿರುವ ಪ್ರಕಾರ, ಪಂತ್ ಇನ್ನೂ ಡೆಲ್ಲಿ ಕ್ಯಾಪಿಟಲ್ಸ್ ಜೊತೆಯಲ್ಲಿದ್ದಾರೆ.

ಡಿಸಿ ಫ್ರಾಂಚೈಸಿಯು ರಿಷಭ್ ಪಂತ್ ಜತೆಗೆ ಪ್ರಮುಖ ಆಟಗಾರರಾದ ಅಕ್ಸರ್ ಪಟೇಲ್ ಮತ್ತು ಕುಲದೀಪ್ ಯಾದವ್ ರನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಜೂನ್ 29 ರಂದು ಬಾರ್ಬಡೋಸ್‌ನಲ್ಲಿ ಟಿ20 ವಿಶ್ವಕಪ್ ಗೆದ್ದ ಭಾರತದ ತಂಡದಲ್ಲಿ ಈ ಮೂವರು ಸದಸ್ಯರಾಗಿದ್ದರು.

Advertisement

ರಾಹುಲ್ ಮರಳಿ ಆರ್ ಸಿಬಿ ಗೆ?

ಇದೇ ವೇಳೆ ಕೆ.ಎಲ್. ರಾಹುಲ್ ಅವರು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ (ಆರ್‌ಸಿಬಿ) ತೆರಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇದರ ಬಗೆಗಿನ ಮಾತುಕತೆ ಪ್ರಸ್ತುತ ಆರಂಭಿಕ ಹಂತದಲ್ಲಿದೆ. ಆದರೆ ಭವಿಷ್ಯದಲ್ಲಿ ಏನಾಗಬಹುದು ಎಂದು ಸದ್ಯಕ್ಕೆ ತಿಳಿದಿಲ್ಲ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next