Advertisement

IPL 2025; ರಾಜಸ್ಥಾನ ರಾಯಲ್ಸ್ ತಂಡಕ್ಕೆ ದಿಗ್ಗಜ ಮುಖ್ಯ ಕೋಚ್ ಆಗುವುದು ಖಚಿತ

03:51 PM Sep 04, 2024 | Team Udayavani |

ಹೊಸದಿಲ್ಲಿ: ಭಾರತದ ಟಿ20 ವಿಶ್ವಕಪ್ ವಿಜಯದ ಮಾಸ್ಟರ್ ಮೈಂಡ್ ರಾಹುಲ್ ದ್ರಾವಿಡ್ ಐಪಿಎಲ್ ನಲ್ಲಿ(IPL 2025) ರಾಜಸ್ಥಾನ ರಾಯಲ್ಸ್(Rajasthan Royals)ತಂಡದ ಮುಖ್ಯ ಕೋಚ್ ಪಾತ್ರವನ್ನು ವಹಿಸಿಕೊಳ್ಳಲಿರುವುದು ಖಚಿತವಾಗಿದೆ. ಮಾತುಕತೆಗಳು ಅಂತಿಮ ಹಂತವನ್ನು ತಲುಪಿದ್ದು,ದ್ರಾವಿಡ್ ಶೀಘ್ರದಲ್ಲೇ ಮುಖ್ಯ ಕೋಚ್ ಹುದ್ದೆಗೆ ಕಾಲಿಡಲಿದ್ದಾರೆ, ”ಎಂದು ಬೆಳವಣಿಗೆಯ ಹತ್ತಿರದ ಮೂಲವು ಪಿಟಿಐಗೆ ತಿಳಿಸಿದೆ.

Advertisement

ಜೂನ್‌ನಲ್ಲಿ ಬಾರ್ಬಡೋಸ್‌ನಲ್ಲಿ ಭಾರತದ ಟಿ20 ವಿಶ್ವಕಪ್ವಿ ಜಯದ ನಂತರ ವೃತ್ತಿಜೀವನದ ಅಲ್ಪ ವಿರಾಮ ನೀಡಿರುವ ದ್ರಾವಿಡ್, ಈ ವರ್ಷದ ಹರಾಜಿನ ಮೊದಲು ಆಟಗಾರರನ್ನು ಉಳಿಸಿಕೊಳ್ಳುವ ಪ್ರಮುಖ ವಿಷಯಗಳ ಕುರಿತು ಫ್ರಾಂಚೈಸಿಯೊಂದಿಗೆ ಶೀಘ್ರದಲ್ಲೇ ಕೆಲಸ ಪ್ರಾರಂಭಿಸುತ್ತಾರೆ ಎಂದು ಹೇಳಲಾಗಿದೆ.

content-img

2021 ರಿಂದ ರಾಜಸ್ಥಾನ್ ರಾಯಲ್ಸ್ ಕ್ರಿಕೆಟ್ ನಿರ್ದೇಶಕರಾಗಿರುವ ಕುಮಾರ್ ಸಂಗಕ್ಕರ ಅವರು ಮುಂದುವರಿಯಲಿದ್ದು, ಬಾರ್ಬಡೋಸ್ ರಾಯಲ್ಸ್ (ಸಿಪಿಎಲ್) ಮತ್ತು ಪಾರ್ಲ್ ರಾಯಲ್ಸ್ (ಎಸ್‌ಎ 20) ರೊಂದಿಗೆ ಹೆಚ್ಚು ಕರ್ತವ್ಯ ನಿರತರಾಗುವ ಸಾಧ್ಯತೆ ಇದೆ.

2012 ಮತ್ತು 2013 ರ ಎರಡು ಋತುಗಳಲ್ಲಿ ರಾಜಸ್ಥಾನ್ ತಂಡದ ನಾಯಕನಾಗಿ ದ್ರಾವಿಡ್ ಹಳೆಯ ಒಡನಾಟವನ್ನು ಹೊಂದಿದ್ದು, ಆ ಬಳಿಕ ಎರಡು ವರ್ಷಗಳ ಕಾಲ ಮಾರ್ಗದರ್ಶಕರಾಗಿದ್ದರು. 2016 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮೆಂಟರ್ ಆಗಿದ್ದರು. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ಪಾತ್ರವನ್ನು ವಹಿಸಿಕೊಳ್ಳುವವರೆಗೂ ಡೆಲ್ಲಿ ತಂಡದಲ್ಲಿ ಮುಂದುವರೆದಿದ್ದರು.2021 ರಲ್ಲಿ, ರವಿಶಾಸ್ತ್ರಿ ಅವರಿಂದ ತೆರವಾದ ಭಾರತ ತಂಡದ ಮುಖ್ಯ ಕೋಚ್ ಪಾತ್ರ ವಹಿಸಿಕೊಂಡಿದ್ದರು.

Advertisement

ರಾಜಸ್ಥಾನ್ ರಾಯಲ್ಸ್‌ನಲ್ಲಿ, ದ್ರಾವಿಡ್ ಅವರು ಸಂಜು ಸ್ಯಾಮ್ಸನ್‌ರೊಂದಿಗೆ ಮತ್ತೆ ಒಂದಾಗಲಿದ್ದಾರೆ, ನಾಯಕನಾಗಿ ಉಳಿದುಕೊಳ್ಳಲು ಸ್ಯಾಮ್ಸನ್ ಸಿದ್ಧರಾಗಿದ್ದಾರೆ.

ದ್ರಾವಿಡ್ ಅವಧಿಯಲ್ಲಿ ಭಾರತದ ಬ್ಯಾಟಿಂಗ್ ಕೋಚ್ ಆಗಿದ್ದ ವಿಕ್ರಮ್ ರಾಥೋರ್ ಅವರನ್ನು ರಾಜಸ್ಥಾನ್ ತನ್ನ ಸಹಾಯಕ ಕೋಚ್ ಆಗಿ ನೇಮಿಸಿಕೊಳ್ಳಬಹುದು ಎಂದು ESPNCricinfo ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.