Advertisement

IPL 2024; ಹಾರ್ದಿಕ್ ತಂಡ ತೊರೆದ ಬಗ್ಗೆ ಮೊದಲ ಬಾರಿ ಮಾತನಾಡಿದ ಟೈಟಾನ್ಸ್ ಕೋಚ್ ನೆಹ್ರಾ

05:32 PM Dec 21, 2023 | Team Udayavani |

ಮುಂಬೈ: ಗುಜರಾತ್ ಟೈಟಾನ್ಸ್ ತಂಡವನ್ನು ಸತತ ಎರಡು ವರ್ಷಗಳು ಫೈನಲ್ ತಲುಪಿಸಿ, ಒಂದು ವರ್ಷ ಚಾಂಪಿಯನ್ ಮಾಡಿದ ನಾಯಕ ಹಾರ್ದಿಕ್ ಪಾಂಡ್ಯ ಈ ಬಾರಿ ತಂಡ ತೊರೆದಿದ್ದಾರೆ. ತಮ್ಮ ಹಳೆಯ ಫ್ರಾಂಚೈಸಿಯಾದ ಮುಂಬೈ ಇಂಡಿಯನ್ಸ್ ತಂಡಕ್ಕೆ ಹಾರ್ದಿಕ್ ಮರಳಿದ್ದು, ಮುಂಬೈ ನಾಯಕತ್ವ ವಹಿಸಿದ್ದಾರೆ.

Advertisement

ಹಾರ್ದಿಕ್ ಅವರು ಗುಜರಾತ್ ತಂಡದಿಂದ ತೊರೆದಿದ್ದು ಹಲವರ ಅಚ್ಚರಿಗೆ ಕಾರಣವಾಗಿತ್ತು. ಇದೀಗ ಗುಜರಾತ್ ಟೈಟಾನ್ಸ್ ತಂಡದ ಮುಖ್ಯ ಕೋಚ್ ಆಶಿಶ್ ನೆಹ್ರಾ ಮೊದಲ ಬಾರಿಗೆ ಹಾರ್ದಿಕ್ ಬಗ್ಗೆ ಮಾತನಾಡಿದ್ದಾರೆ.

“ಹಾರ್ದಿಕ್ ಪಾಂಡ್ಯ ಅವರಂತಹ ಆಟಗಾರನನ್ನು ಬದಲಿಸುವುದು ಅವರ ಪ್ರತಿಭೆ ಮತ್ತು ಅನುಭವವನ್ನು ಪರಿಗಣಿಸುವುದು ಕಷ್ಟ. ಕಳೆದ ಮೂರು-ನಾಲ್ಕು ವರ್ಷಗಳಲ್ಲಿ ಶುಭಮನ್ ಗಿಲ್ ಹೇಗೆ ರೂಪುಗೊಂಡಿದ್ದಾರೆಂದು ನಾವು ನೋಡಿದ್ದೇವೆ. ಅವರು 24-25 ವರ್ಷ ವಯಸ್ಸಿನವರಾಗಿದ್ದರೂ ಅವರು ಉತ್ತಮ ತಲೆ ಹೊಂದಿದ್ದಾರೆ ” ಎಂದು ನೆಹ್ರಾ ಹೇಳಿದರು.

ನೆಹ್ರಾ ಅವರು ಗಿಲ್ ಅವರನ್ನು ನಾಯಕನಾಗಿ ಬೆಂಬಲಿಸಲಿದ್ದಾರೆ ಮತ್ತು ಫಲಿತಾಂಶ ಮಾತ್ರವೇ ಅವರನ್ನು ನಾಯಕನಾಗಿ ರೇಟ್ ಮಾಡುವ ಮಾಪಕವಾಗಿರುವುದಿಲ್ಲ ಎಂದು ಹೇಳಿದರು.

“ನಾವು ಅವರ ಮೇಲೆ ನಂಬಿಕೆ ಇಟ್ಟಿದ್ದೇವೆ. ಅದಕ್ಕಾಗಿಯೇ ನಾವು ಅವರನ್ನು ನಾಯಕನನ್ನಾಗಿ ಮಾಡಿದೆವು. ನಾನು ಯಾವಾಗಲೂ ಫಲಿತಾಂಶಗಳನ್ನು ಅನುಸರಿಸುವವನಲ್ಲ. ಹೌದು, ಫಲಿತಾಂಶಗಳು ಮುಖ್ಯ ಆದರೆ ನೀವು ನಾಯಕತ್ವಕ್ಕೆ ಬಂದಾಗ ನೀವು ಇತರ ವಿಷಯಗಳನ್ನು ಸಹ ನೋಡಬೇಕು. ಗಿಲ್ ಬಗ್ಗೆ ನಮಗೆ ವಿಶ್ವಾಸವಿದೆ. ಆತ ನಾಯಕತ್ವಕ್ಕೆ ಸರಿಯಾದ ವ್ಯಕ್ತಿ ” ಎಂದು ನೆಹ್ರಾ ಸೇರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next