Advertisement
10 ಮಾಮೂಲು ಮೈದಾನಗಳೆಂದರೆ ಮುಂಬಯಿ, ಹೊಸದಿಲ್ಲಿ, ಚೆನ್ನೈ, ಕೋಲ್ಕತಾ, ಚಂಡೀಗಢ, ಹೈದರಾಬಾದ್, ಬೆಂಗಳೂರು, ಲಕ್ನೋ, ಅಹ್ಮದಾಬಾದ್ ಮತ್ತು ಜೈಪುರ. ಹೆಚ್ಚುವರಿ ಮೈದಾನಗಳೆಂದರೆ ಗುವಾಹಟಿ, ವಿಶಾಖಪಟ್ಟಣ ಮತ್ತು ಧರ್ಮಶಾಲಾ.
Related Articles
Advertisement
ಟ್ರ್ಯಾವಿಸ್ ಹೆಡ್ ಐಪಿಎಲ್ ಸೀಸನ್ ಒಂದರ ಪ್ಲೇ ಆಫ್ನಲ್ಲಿ 2 ಸೊನ್ನೆ ಸುತ್ತಿದ 4ನೇ ಆಟಗಾರ. ಲಸಿತ ಮಾಲಿಂಗ (2013), ಶ್ರೀವತ್ಸ ಗೋಸ್ವಾಮಿ (2020) ಮತ್ತು ಶಕಿಬ್ ಅಲ್ ಹಸನ್ (2021) ಉಳಿದ ಮೂವರು.
ಹೆಡ್ 567 ರನ್ ಹೊಡೆದರು. ಸ್ಟ್ರೈಕ್‌ರೇಟ್ 191.55. ಇದು ಐಪಿಎಲ್ ಸೀಸನ್ ಒಂದರಲ್ಲಿ 500 ಪ್ಲಸ್ ರನ್ ಬಾರಿಸಿದ ಆಟಗಾರನ 2ನೇ ಅತ್ಯಧಿಕ ಸ್ಟ್ರೈಕ್‌ರೇಟ್ ಆಗಿದೆ. ದಾಖಲೆ ಆ್ಯಂಡ್ರೆ ರಸೆಲ್ ಹೆಸರಲ್ಲಿದೆ. 2019ರಲ್ಲಿ ಅವರು 204.81ರ ಸ್ಟ್ರೈಕ್‌ರೇಟ್‌ನಲ್ಲಿ 510 ರನ್ ಹೊಡೆದಿದ್ದರು.
ಸುನೀಲ್ ನಾರಾಯಣ್ ಐಪಿಎಲ್ ಋತುವೊಂದರಲ್ಲಿ 400 ಪ್ಲಸ್ ರನ್ (488) ಹಾಗೂ 17 ವಿಕೆಟ್ ಸಂಪಾದಿಸಿದ 2ನೇ ಆಲ್‌ರೌಂಡರ್ ಆಗಿ ಮೂಡಿಬಂದರು. 2008ರಲ್ಲಿ ಶೇನ್ ವಾಟ್ಸನ್ 472 ರನ್ ಹಾಗೂ 17 ವಿಕೆಟ್‌ಗಳ ಸಾಧನೆಗೈದಿದ್ದರು.
ಸುನೀಲ್ ನಾರಾಯಣ್ ಐಪಿಎಲ್ ಸೀಸನ್‌ನಲ್ಲಿ 2 ಸಲ 300 ರನ್ ಹಾಗೂ 15 ವಿಕೆಟ್ ಸಾಧನೆಗೈದ 2ನೇ ಕ್ರಿಕೆಟಿಗನೆನಿಸಿದರು. ಅವರು 2018ರಲ್ಲೂ ಅತ್ಯುತ್ತಮ ಆಲ್‌ರೌಂಡ್ ಪ್ರದರ್ಶನ ನೀಡಿದ್ದರು (375 ರನ್, 17 ವಿಕೆಟ್). ಜಾಕ್ ಕ್ಯಾಲಿಸ್ ಮೊದಲಿಗ (2012 ಮತ್ತು 2013).
ವೆಂಕಟೇಶ್ ಅಯ್ಯರ್ ಐಪಿಎಲ್ ಪ್ಲೇಆಫ್ನಲ್ಲಿ 4 ಸಲ 50 ಪ್ಲಸ್ ರನ್ ಬಾರಿಸಿ ಡ್ವೇನ್ ಸ್ಮಿತ್, ಮೈಕಲ್ ಹಸ್ಸಿ ಮತ್ತು ಶೇನ್ ವಾಟ್ಸನ್ ಅವರೊಂದಿಗೆ ಜಂಟಿ ದ್ವಿತೀಯ ಸ್ಥಾನಿಯಾದರು. ದಾಖಲೆ ಸುರೇಶ್ ರೈನಾ ಹೆಸರಲ್ಲಿದೆ (7).
ಪ್ಯಾಟ್ ಕಮಿನ್ಸ್ ಐಪಿಎಲ್ ಸೀಸನ್‌ನಲ್ಲಿ 2ನೇ ಅತ್ಯಧಿಕ ವಿಕೆಟ್ ಉರುಳಿಸಿದ ನಾಯಕರೆನಿಸಿದರು (18). 2008ರಲ್ಲಿ ಶೇನ್ ವಾರ್ನ್ 19 ವಿಕೆಟ್ ಕೆಡವಿದ್ದು ದಾಖಲೆ.
ಸುನೀಲ್ ನಾರಾಯಣ್ ಅತ್ಯಧಿಕ 3 ಸಲ ಮೋಸ್ಟ್ ವ್ಯಾಲ್ಯುಯೇಬಲ್ ಪ್ಲೇಯರ್ ಪ್ರಶಸ್ತಿಗೆ ಭಾಜನರಾದರು. 2012ರ ಪದಾರ್ಪಣ ಪಂದ್ಯಾವಳಿ ಹಾಗೂ 2018ರಲ್ಲೂ ಅವರಿಗೆ ಈ ಪ್ರಶಸ್ತಿ ಒಲಿದಿತ್ತು.