Advertisement

IPL 2024; ಸಿಎಸ್‌ಕೆ ಆರಂಭಿಕ ಪಂದ್ಯಗಳಿಗೆ ಲಂಕಾ ವೇಗಿ ಅಲಭ್ಯ?

10:43 AM Mar 17, 2024 | Team Udayavani |

ಚೆನ್ನೈ: ಐಪಿಎಲ್‌ 17ನೇ ಸೀಸನ್ ಆರಂಭಕ್ಕಿನ್ನು ಒಂದು ವಾರವಷ್ಟೇ ಬಾಕಿ ಉಳಿದಿದೆ. ಈ ಮಧ್ಯೆ ಹಾಲಿ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಗೆ ಆಘಾತಕಾರಿ ಸಂಗತಿಯೊಂದು ಎದುರಾಗಿದೆ. ತಂಡದ ಪ್ರಮುಖ ವೇಗಿ, ಶ್ರೀಲಂಕಾದ ಮತೀಶ ಪತಿರಾಣ ತೊಡೆನೋವಿಗೆ ತುತ್ತಾಗಿದ್ದು, ಆರಂಭಿಕ ಕೆಲವು ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದೆ.

Advertisement

ಮಾರ್ಚ್‌ 6ರಂದು ಸಿಲ್ಹೆಟ್ ನಲ್ಲಿ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಮತೀಶ ಪತಿರಾಣ ಗಾಯಕ್ಕೀಡಗಿದ್ದರು. ಅಲ್ಲಿಂದ ಪತಿರಾಣ ಯಾವುದೇ ಪಂದ್ಯಗಳನ್ನು ಆಡಿಲ್ಲ. ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಇನ್ನೂ 4-5 ವಾರಗಳು ಬೇಕಾಗಬಹುದು ಎಂದು ತಂಡದ ಮೂಲಗಳು ತಿಳಿಸಿವೆ.

ಕಳೆದ ಬಾರಿ ಎಂ.ಎಸ್‌.ಧೋನಿ ನಾಯಕತ್ವದ ಚೆನ್ನೈ, ದಾಖಲೆಯ ಐದನೇ ಪ್ರಶಸ್ತಿ ಗೆಲ್ಲುವಲ್ಲಿ ಪತಿರಾಣ ಪ್ರಮುಖ ಪಾತ್ರ ವಹಿಸಿದ್ದರು. ಆಡಿದ 12 ಪಂದ್ಯಗಳನ್ನು ಅವರು 19 ವಿಕೆಟ್‌ಗಳನ್ನು ಉರುಳಿಸಿದ್ದರು.

ಮಾರ್ಚ್ 22ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಡಲಿದೆ. ಈ ಪಂದ್ಯವು ಚೆನ್ನೈನಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next