ಬುಧವಾರದ ಅಹ್ಮದಾಬಾದ್ ಮುಖಾ ಮುಖೀಯಲ್ಲಿ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಗುಜರಾತ್ 17.3 ಓವರ್‌ಗಳಲ್ಲಿ ಜುಜುಬಿ 89 ರನ್ನಿಗೆ ಕುಸಿಯಿತು.
Advertisement
ಇದು ಐಪಿಎಲ್‌ನಲ್ಲಿ ಗುಜರಾತ್ ದಾಖಲಿಸಿದ ಕನಿಷ್ಠ ಗಳಿಕೆ ಹಾಗೂ ನೂರರೊಳಗೆ ಆಲೌಟ್ ಆದ ಮೊದಲ ನಿದರ್ಶನ. ಕಳೆದ ವರ್ಷ ಡೆಲ್ಲಿ ವಿರುದ್ಧವೇ 6ಕ್ಕೆ 125 ರನ್ ಮಾಡಿದ್ದು ಗುಜರಾತ್ ತಂಡದ ಈವರೆಗಿನ ಕನಿಷ್ಠ ಸ್ಕೋರ್ ಆಗಿತ್ತು. ಇದು ಐಪಿಎಲ್‌ನಲ್ಲಿ ಡೆಲ್ಲಿ ವಿರುದ್ಧ ತಂಡವೊಂದು ದಾಖಲಿಸಿದ ಅತೀ ಕಡಿಮೆ ಮೊತ್ತವೂ ಆಗಿದೆ. 2012ರಲ್ಲಿ ಮುಂಬೈ ಇಂಡಿಯನ್ಸ್ “ವಾಂಖೇಡೆ’ ಪಂದ್ಯದಲ್ಲಿ 92 ರನ್ ಮಾಡಿದ್ದು ಈವರೆಗಿನ ಕನಿಷ್ಠ ಸ್ಕೋರ್ ಆಗಿತ್ತು.
ಬೌಲಿಂಗ್ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ ನಿರೀಕ್ಷೆಗೂ ಮೀರಿದ ಯಶಸ್ಸು ಸಾಧಿಸಿತು. ಪವರ್ ಪ್ಲೇಯಲ್ಲಿ ಗುಜರಾತ್ ತಂಡದ 4 ಪ್ರಮುಖ ವಿಕೆಟ್‌ಗಳನ್ನು ಉಡಾಯಿಸಿ ಒತ್ತಡ ಹೇರಿತು. ಈ ಸೀಸನ್‌ನ ಪವರ್ ಪ್ಲೇಯಲ್ಲಿ ತಂಡವೊಂದು 4 ವಿಕೆಟ್ ಕಳೆದುಕೊಂಡ 4ನೇ ನಿದರ್ಶನ ಇದಾಗಿದೆ. ರಾಜಸ್ಥಾನ್ ವಿರುದ್ಧ ಮುಂಬೈ, ಕೆಕೆಆರ್ ವಿರುದ್ಧ ಡೆಲ್ಲಿ ಕೂಡ ಇದೇ ಸಂಕಟಕ್ಕೆ ಸಿಲುಕಿತ್ತು. ಚೇಸಿಂಗ್ ವೇಳೆ ಡೆಲ್ಲಿ ಕೂಡ ಈ ಅವಧಿಯಲ್ಲಿ 4 ವಿಕೆಟ್ ಕಳೆದುಕೊಂಡಿತು.
Related Articles
Advertisement
ಪಂದ್ಯದ ದ್ವಿತೀಯ ಓವರ್‌ನಲ್ಲಿ ನಾಯಕ ಶುಭಮನ್ ಗಿಲ್ ಅವರ ವಿಕೆಟ್ ಉದುರುವ ಮೂಲಕ ಗುಜರಾತ್ ಕುಸಿತ ಮೊದಲ್ಗೊಂಡಿತು. ಗಿಲ್ ಗಳಿಕೆ ಕೇವಲ 8 ರನ್. ಈ ಯಶಸ್ಸು ಇಶಾಂತ್ ಪಾಲಾಯಿತು. ವೃದ್ಧಿಮಾನ್ ಸಾಹಾ ಕೂಡ ಪರದಾಡಿದರು. 10 ಎಸೆತಗಳಲ್ಲಿ ಬರೀ 2 ರನ್ ಮಾಡಿ ಮುಕೇಶ್ ಎಸೆತದಲ್ಲಿ ಬೌಲ್ಡ್ ಆದರು. 12 ರನ್ ಮಾಡಿದ ಸಾಯಿ ಸುದರ್ಶನ್ ರನೌಟ್ ಸಂಕಟಕ್ಕೆ ಸಿಲುಕಿದರು. ಡೇವಿಡ್ ಮಿಲ್ಲರ್ ಗಳಿಕೆ ಎರಡೇ ರನ್.
47 ರನ್ನಿಗೆ ಗುಜರಾತ್‌ನ 5 ವಿಕೆಟ್ ಬಿತ್ತು. ಇದು ಈ ಸೀಸನ್‌ನಲ್ಲಿ 5 ವಿಕೆಟ್ ಪತನದ ವೇಳೆ ದಾಖಲಾದ ಕನಿಷ್ಠ ಗಳಿಕೆ.ಅಭಿನವ್ ಮನೋಹರ್ ಮತ್ತು ಶಾರುಖ್ ಖಾನ್ ಅವರನ್ನು ಟ್ರಿಸ್ಟನ್ ಸ್ಟಬ್ಸ್ ಸತತ ಎಸೆತಗಳಲ್ಲಿ ಉದುರಿಸಿದರು. ಇಬ್ಬರೂ ಸ್ಟಂಪ್ಡ್ ಔಟ್ ಆದದ್ದು ಕಾಕತಾಳೀಯ. 31 ರನ್ ಮಾಡಿದ ರಶೀದ್ ಖಾನ್ ಗುಜರಾತ್ ಸರದಿಯ ಟಾಪ್ ಸ್ಕೋರರ್. ಅವರು 2 ಫೋರ್ ಹಾಗೂ ಗುಜರಾತ್ ಸರದಿಯ ಏಕೈಕ ಸಿಕ್ಸರ್ ಹೊಡೆದರು.