ಬೆಂಗಳೂರು: ಊಹಾಪೋಹ ನಿಜವಾಗಿದೆ. ಆಸ್ಟ್ರೇಲಿಯಾದ ಆಲ್ ರೌಂಡರ್ ಕಳೆದ ಐಪಿಎಲ್ ಸೀಸನ್ ನಲ್ಲಿ ಮುಂಬೈ ಇಂಡಿಯನ್ಸ್ ಪರವಾಗಿ ಆಡಿದ್ದ ಕ್ಯಾಮರೂನ್ ಗ್ರೀನ್ ಅವರು ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದ್ದಾರೆ.
ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಟ್ರೇಡ್ ನಲ್ಲಿ ಖರೀದಿಸಿದ ಮುಂಬೈ ಇಂಡಿಯನ್ಸ್ ತಮ್ಮಲ್ಲಿದ್ದ ಆಲ್ ರೌಂಡರ್ ನನ್ನು ಬಿಟ್ಟುಕೊಟ್ಟಿದೆ.
ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಟ್ರೇಡ್ ಮಾಡಲಾಗಿದೆ. ಕಳೆದ ಡಿಸೆಂಬರ್ ನಲ್ಲಿ ನಡೆದ ಹರಾಜಿನಲ್ಲಿ ಬರೋಬ್ಬರಿ 17.50 ಕೋಟಿ ರೂ ಮೊತ್ತಕ್ಕೆ ಖರೀದಿಸಲ್ಪಟ್ಟಿದ್ದ ಗ್ರೀನ್, 16 ಪಂದ್ಯಗಳಲ್ಲಿ ಮುಂಬೈ ಪರ ಕಾಣಿಸಿಕೊಂಡಿದ್ದರು. ಅಜೇಯ ಶತಕ ಮತ್ತು ಎರಡು ಅರ್ಧ ಶತಕಗಳನ್ನು ಬಾರಿಸುವುದರ ಜೊತೆಗೆ ಆರು ವಿಕೆಟ್ಗಳನ್ನು ಪಡೆದಿದ್ದರು. ಸದ್ಯ ಅವರಿಗೆ ನೀಡಲಾಗಿದ್ದ 17.50 ಕೋಟಿ ರೂ ಬೆಲೆಗೆ ಆರ್ ಸಿಬಿಗೆ ಖರೀದಿ ಮಾಡಲಾಗಿದೆ.
ಸದ್ಯ ಆರ್ ಸಿಬಿಯಲ್ಲಿ 19 ಆಟಗಾರರಿದ್ದು, ಅದರಲ್ಲಿ ಐದು ಮಂದಿ ವಿದೇಶಿ ಆಟಗಾರರಿದ್ದಾರೆ. ಇನ್ನು ಮೂವರು ವಿದೇಶಿಯರನ್ನು ಖರೀದಿಸಬಹುದಾಗಿದ್ದು, 23.25 ಕೋಟಿ ರೂ ಬಾಕಿ ಉಳಿದಿದೆ.
ಉಳಿಸಿಕೊಂಡಿರುವ ಆಟಗಾರರು: ಆಕಾಶ್ ದೀಪ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ವೆಲ್, ಹಿಮಾಂಶು ಶರ್ಮಾ, ಕರ್ಣ್ ಶರ್ಮಾ, ಮಹಿಪಾಲ್ ಲೊಮ್ರೋರ್, ಮನೋಜ್ ಭಾಂಡಗೆ, ಮಯಾಂಕ್ ದಾಗರ್ (ಟ್ರೇಡ್), ಮೊಹಮ್ಮದ್ ಸಿರಾಜ್, ರಾಜನ್ ಕುಮಾರ್, ರಜತ್ ಪಾಟಿದಾರ್, ರೀಸ್ ಟೋಪ್ಲೆ, ಸುಯಶ್ ಪ್ರಭುದೇಸಾಯಿ, ವಿರಾಟ್ ಕೊಹ್ಲಿ, ವೈಶಾಕ್ ವಿಜಯ್ ಕುಮಾರ್, ವಿಲ್ ಜಾಕ್ಸ್, ಕ್ಯಾಮರೂನ್ ಗ್ರೀನ್ (ಟ್ರೇಡ್)