ನವದೆಹಲಿ : ಐಪಿಎಲ್ 2023 ರ ವೇಳಾಪಟ್ಟಿಯನ್ನು ಶುಕ್ರವಾರ ಪ್ರಕಟಿಸಲಾಗಿದ್ದು, 16 ನೇ ಆವೃತ್ತಿಯು ಮಾರ್ಚ್ 31 ರಂದು ಪ್ರಾರಂಭವಾಗಿ ಮೇ 21 ರ ವರೆಗೆ ಲೀಗ್ ಪಂದ್ಯಗಳು ನಡೆಯಲಿದೆ. ಮಾರ್ಚ್ 26 ರಂದು ಉದ್ಘಾಟನಾ ಮಹಿಳಾ ಪ್ರೀಮಿಯರ್ ಲೀಗ್‌ನ ಫೈನಲ್‌ನ ಐದು ದಿನಗಳ ನಂತರ ಐಪಿಎಲ್ ಹಣಾಹಣಿ ಪ್ರಾರಂಭವಾಗಲಿದೆ.
ಬಿಸಿಸಿಐ ಪ್ಲೇಆಫ್ ಪಂದ್ಯಗಳ ದಿನಾಂಕಗಳನ್ನು ಬಹಿರಂಗಪಡಿಸಿಲ್ಲ. 18 ಡಬಲ್ ಹೆಡರ್ ಸೇರಿದಂತೆ ಒಟ್ಟು 70 ಲೀಗ್ ಪಂದ್ಯಗಳು ನಡೆಯಲಿವೆ.
ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಅಹಮದಾಬಾದ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಎದುರಿಸುತ್ತಿದೆ, ಫೈನಲ್ ಕೂಡ ಅಹಮದಾಬಾದ್‌ನಲ್ಲಿ ಮೇ 28 ರಂದು ನಡೆಯಲಿದೆ.
ಭಾನುವಾರ (ಏಪ್ರಿಲ್ 2) ಸಂಜೆ ಆರ್ ಸಿಬಿ ಮತ್ತು ಮುಂಬಯಿ ನಡುವೆ ಹಣಾಹಣಿ ನಡೆಯಲಿದೆ.
ಚೆನ್ನೈ, ಬೆಂಗಳೂರು, ಹೈದರಾಬಾದ್, ಮುಂಬೈ, ಕೋಲ್ಕತಾ, ಲಕ್ನೋ, ದೆಹಲಿ, ಅಹಮದಾಬಾದ್, ಜೈಪುರ ಮತ್ತು ಮೊಹಾಲಿ ,ಗುವಾಹಟಿ ಮತ್ತು ಧರ್ಮಶಾಲಾ ಸೇರಿ 12 ನಗರಗಳಲ್ಲಿ ಆಡಲಾಗುತ್ತದೆ.
ಸಂಜೆ ಪಂದ್ಯಗಳು 7:30 ಕ್ಕೆ ಪ್ರಾರಂಭವಾಗಲಿದ್ದು, ಡಬಲ್ ಹೆಡರ್‌ಗಳ ದಿನದಂದು ಮಧ್ಯಾಹ್ನದ ಪಂದ್ಯಗಳು ಮಧ್ಯಾಹ್ನ 3:30 ರಿಂದ ಪ್ರಾರಂಭವಾಗುತ್ತದೆ.
ಕಳೆದ ವರ್ಷ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ತನ್ನ ಚೊಚ್ಚಲ ಋತುವಿನಲ್ಲಿ ಅಹಮದಾಬಾದ್‌ನಲ್ಲಿ ನಡೆದ ಫೈನಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಅನ್ನು ಸೋಲಿಸಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.