ಗುವಾಹಟಿ: ಐಪಿಎಲ್ ನ ಶನಿವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 57 ರನ್‌ಗಳಿಂದ ಸೋಲಿಸಿದೆ. ಡೆಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ರಾಜಸ್ಥಾನ್ ಮೂರು ಪಂದ್ಯಗಳಲ್ಲಿ ಎರಡನೇ ಜಯ ತನ್ನದಾಗಿಸಿಕೊಂಡಿತು.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು.
ಬ್ಯಾಟಿಂಗ್‌ಗೆ ಇಳಿದ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು 199 ರನ್ ಗಳಿಸಿತು. ಇನ್ನಿಂಗ್ಸ್ ಆರಂಭಿಸಿದ ಯುವ ಬ್ಯಾಟ್ಸ್ ಮ್ಯಾನ್ ಯಶಸ್ವಿ ಜೈಸ್ವಾಲ್ ಮತ್ತು ಜೋಸ್ ಬಟ್ಲರ್ ಕೇವಲ 8.3 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 98 ರನ್‌ಗಳನ್ನು ಕಲೆ ಹಾಕುವ ಮೂಲಕ ಆರ್‌ಆರ್ ಅತ್ಯಮೋಘ ಆರಂಭವನ್ನು ನೀಡಿದರು.
ಜೈಸ್ವಾಲ್ 31 ಎಸೆತಗಳಲ್ಲಿ 60 ರನ್ ಗಳಿಸಿದರೆ, ಅನುಭವಿ ಬಟ್ಲರ್ 51 ಎಸೆತಗಳಲ್ಲಿ 79 ರನ್ ಗಳಿಸಿದರು. ನಂತರ ಶಿಮ್ರಾನ್ ಹೆಟ್ಮೆಯರ್ 21 ಎಸೆತಗಳಲ್ಲಿ 39 ರನ್ ಗಳಿಸಿ ಔಟಾಗದೆ ಉಳಿದರು. ಡೆಲ್ಲಿ ಪರ ಮುಖೇಶ್ ಕುಮಾರ್ 36 ರನ್‌ಗಳಿಗೆ ಎರಡು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.
ಟ್ರೆಂಟ್ ಬೌಲ್ಟ್ ಬೌಲ್ ಮಾಡಿದ ಮೊದಲ ಓವರ್‌ನಲ್ಲಿ ಡೆಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು, ನಾಲ್ಕು ಓವರ್‌ಗಳಲ್ಲಿ ಬೌಲ್ಟ್ 3/29 ರ ಅತ್ಯುತ್ತಮ ಪ್ರದರ್ಶನ ತೋರಿದರು.
ಪ್ರತ್ಯುತ್ತರವಾಗಿ ಡೆಲ್ಲಿ ಒಂಬತ್ತು ವಿಕೆಟ್‌ಗೆ 142 ರನ್‌ಗಳಿಗೆ ಸೀಮಿತವಾಗಿ ಸೋಲು ಅನುಭವಿಸಿತು. ಡೆಲ್ಲಿ ಪರ ನಾಯಕ ವಾರ್ನರ್ 49 ಎಸೆತಗಳಲ್ಲಿ 61 ರನ್ ಗಳಿಸಿದರು. ಐಪಿಎಲ್‌ನಲ್ಲಿ ಆಸೀಸ್ ದಿಗ್ಗಜ 6000 ರನ್‌ಗಳನ್ನು ಪೂರ್ಣಗೊಳಿಸಿದರು. ಲಲಿತ್ ಯಾದವ್ 38 ರನ್, ರಿಲೀ ರೋಸೌ 14 ರನ್ ಹೊರತು ಪಡಿಸಿದರೆ ಉಳಿದ ಆಟಗಾರರು ಒಂದಂಕಿ ದಾಟಲಿಲ್ಲ.
ಸಂಕ್ಷಿಪ್ತ ಸ್ಕೋರ್
ರಾಜಸ್ಥಾನ್ ರಾಯಲ್ಸ್: 20 ಓವರ್‌ಗಳಲ್ಲಿ 4 ವಿಕೆಟ್‌ಗೆ
199 (ಯಶಸ್ವಿ ಜೈಸ್ವಾಲ್ 60, ಜೋಸ್ ಬಟ್ಲರ್ 79, ಶಿಮ್ರಾನ್ ಹೆಟಿಮರ್ ಔಟಾಗದೆ 39; ಮುಖೇಶ್ ಕುಮಾರ್ 2/36).
ಡೆಲ್ಲಿ ಕ್ಯಾಪಿಟಲ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗೆ
142 (ಡೇವಿಡ್ ವಾರ್ನರ್ 65, ಟ್ರೆಂಟ್ ಬೌಲ್ಟ್ 3/29).