Advertisement
ಹೇಳಿ ಕೇಳಿ ಮೊಹಾಲಿ ಪಂಜಾಬ್ ತಂಡದ ತವರಿನ ಅಂಗಳ. ಇಲ್ಲಿ ಆಡಲಾದ ಕೆಕೆಆರ್ ಎದುರಿನ ಮೊದಲ ಪಂದ್ಯವನ್ನು ಪಂಜಾಬ್ ಡಿ-ಎಲ್ ನಿಯಮದಂತೆ 7 ರನ್ನುಗಳಿಂದ ಜಯಿಸಿತ್ತು. ಹೋಮ್ ಗ್ರೌಂಡ್‌ನಲ್ಲಿ ಗೆಲುವಿನ ಲಯವನ್ನು ಮುಂದು ವರಿಸಿಕೊಂಡು ಹೋಗುವುದು ಪಂಜಾಬ್ ಗುರಿ ಯಾದರೆ, ಸೋಲಿನ ಸುಳಿಯಿಂದ ಹೊರಬಂದು ಮತ್ತೆ ಗೆಲುವಿನ ಹಳಿ ಏರುವುದು ಗುಜರಾತ್ ಯೋಜನೆ.
ಕೆಕೆಆರ್ ವಿರುದ್ಧ ಅಹ್ಮದಾಬಾದ್‌ನಲ್ಲಿ ಆಡಲಾದ ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್, ನಾಯಕ ಹಾರ್ದಿಕ್ ಪಾಂಡ್ಯ ಸೇವೆಯಿಂದ ವಂಚಿತವಾಗಿತ್ತು. ಅನಾರೋಗ್ಯದಿಂದ ಅವರು ಹೊರಗುಳಿದಿದ್ದರು. ಇವರ ಬದಲು ತಂಡವನ್ನು ಮುನ್ನಡೆಸಿದ ರಶೀದ್ ಖಾನ್ ಹ್ಯಾಟ್ರಿಕ್ ಹೀರೋ ಎನಿಸಿಕೊಂಡು ಯಶಸ್ಸಿನ ಹಾದಿಯಲ್ಲಿದ್ದರು. ಆದರೆ ರಿಂಕು ಸಿಂಗ್ ಎಲ್ಲವನ್ನೂ ಬುಡಮೇಲು ಮಾಡಿಬಿಟ್ಟರು. ಪಂಜಾಬ್ ವಿರುದ್ಧ ಆಡುವಾಗ ಗುಜರಾತ್ ಮೊದಲು “ರಿಂಕು ಸಿಂಗ್ ಭೀತಿ”ಯನ್ನು ಹೊಡೆ ದೋಡಿಸಬೇಕು. ಹಾರ್ದಿಕ್ ಪಾಂಡ್ಯ ಮರಳುವುದರಿಂದ ಗುಜರಾತ್ ಪೂರ್ಣ ಸಾಮರ್ಥ್ಯದೊಂದಿಗೆ ಹಾಗೂ ಆತ್ಮವಿಶ್ವಾಸದೊಂದಿಗೆ ಆಡ ಬಹುದಾಗಿದೆ.
Related Articles
Advertisement
ಚೇತರಿಸಬೇಕಿದೆ ಪಂಜಾಬ್ ಪಂಜಾಬ್ ಕಳೆದ ಪಂದ್ಯದಲ್ಲಿ ಶೋಚನೀಯ ಬ್ಯಾಟಿಂಗ್ ನಡೆಸಿ ಹೈದರಾಬಾದ್‌ಗೆ ಮೊದಲ ಗೆಲುವನ್ನು ಕೊಡಿಸಿತ್ತು. 143ರ ಮೊತ್ತದಲ್ಲಿ ನಾಯಕ ಧವನ್ ಒಬ್ಬರೇ 99 ರನ್ ಮಾಡಿ ಹೋರಾಟ ನಡೆಸಿದ್ದರು. ಆದರೆ ಬ್ಯಾಟಿಂಗ್ ಸುಧಾರಣೆ ಆಗದ ಹೊರತು ಪಂಜಾಬ್ ಗೆಲುವಿನ ನಿರೀಕ್ಷೆ ಮಾಡುವುದರಲ್ಲಿ ಅರ್ಥವಿಲ್ಲ. ಒಂದು ವೇಳೆ ಲಿಯಮ್ ಲಿವಿಂಗ್‌ಸ್ಟೋನ್ ಸೇರ್ಪಡೆಯಾದರೆ ತಂಡಕ್ಕೆ ಹೆಚ್ಚಿನ ಬಲ ಲಭಿಸುವುದು ಖಂಡಿತ. ಪಂಜಾಬ್ ಬೌಲಿಂಗ್ ಕೂಡ ಸಾಕಷ್ಟು ಸುಧಾರಣೆ ಕಾಣಬೇಕಿದೆ. ಈವರೆಗೆ ಪರಿಣಾಮ ಬೀರಿದ್ದು ಅರ್ಷದೀಪ್ ಸಿಂಗ್ ಮಾತ್ರ.