Advertisement

IPL 2023 LSG vs RCB: ಲಕ್ನೋ ವಿರುದ್ಧ ಆರ್‌ಸಿಬಿ​ಗೆ ರೋಚಕ ಜಯ

01:34 AM May 02, 2023 | Team Udayavani |

ಲಕ್ನೋ: ಬೌಲರ್‌ಗಳ ಮೇಲಾಟವಾಗಿ ಪರಿಣಮಿಸಿದ ಸೋಮವಾರದ ಐಪಿಎಲ್‌ ಪಂದ್ಯದಲ್ಲಿ ಆರ್‌ಸಿಬಿ ತಂಡವು ಲಕ್ನೋ ವಿರುದ್ಧ 18 ರನ್‌ಗಳ ರೋಚಕ ಜಯ ದಾಖಲಿಸಿದೆ. ಇದರೊಂದಿಗೆ ಮೊದಲ ಸುತ್ತಿನಲ್ಲಿ ಅನುಭವಿಸಿದ ಒಂದು ವಿಕೆಟ್‌ ಸೋಲಿಗೆ ಸೇಡು ತೀರಿಸಿಕೊಂಡಿತು.

Advertisement

ಬ್ಯಾಟಿಂಗ್‌ ಆಯ್ದುಕೊಂಡ ಆರ್‌ಸಿಬಿ 9 ವಿಕೆಟಿಗೆ 126 ರನ್‌ ಗಳಿಸಿದರೆ, ಲಕ್ನೋ 19.5 ಓವರ್‌ಗಳಲ್ಲಿ ಕೇವಲ 108 ರನ್‌ಗಳಿಗೆ ಆಲೌಟ್‌ ಆಯಿತು. ಆರ್‌ಸಿಬಿ ಇನ್ನಿಂಗ್ಸ್‌ನ ಎರಡನೇ ಓವರ್‌ನ ವೇಳೆ ಬೌಂಡರಿ ತಡೆಯುವ ಯತ್ನದಲ್ಲಿ ಬಲ ಕಾಲಿನ ಸೆಳೆತಕ್ಕೆ ಒಳಗಾಗಿದ್ದ ನಾಯಕ ಕೆ.ಎಲ್‌. ರಾಹುಲ್‌ ಕೊನೆಯ ಆಟಗಾರನಾಗಿ ಅಂಗಣಕ್ಕೆ ಇಳಿದಿದ್ದರು. ಅವರ ಅನುಪಸ್ಥಿತಿ ಕೂಡ ಲಕ್ನೋವನ್ನು ಕಾಡಿತು.

ಪವರ್‌ ಪ್ಲೇ ಒಳಗೆ ಲಕ್ನೋದ 4 ವಿಕೆಟ್‌ ಕೆಡವಿದ ಆರ್‌ಸಿಬಿ ಬೌಲರ್ ಕೂಡ ತಿರುಗೇಟು ನೀಡತೊಡದರು. 38 ರನ್‌ ಆಗುವಷ್ಟರಲ್ಲಿ 5 ವಿಕೆಟ್‌ ಹಾರಿ ಹೋಯಿತು. 6ನೇ ವಿಕೆಟಿಗೆ ಜತೆಗೂಡಿದ ಸ್ಟೋಯಿನಿಸ್‌-ಗೌತಮ್‌ ಜೋಡಿ 27 ರನ್‌ ಗಳಿಸಿದ್ದೇ ಅತ್ಯುತ್ತಮ ಜತೆಯಾಟ. ಸ್ಟೋಯಿನಿಸ್‌ ಎಚ್ಚರಿಕೆಯ ಆಟವಾಡಿ 19 ಎಸೆತಗಳಲ್ಲಿ 13 ರನ್‌ ಗಳಿಸಿದರು. ಗೌತಮ್‌ 13 ಎಸೆತಗಳಲ್ಲಿ 23 ರನ್‌ ಸಂಪಾದಿಸಿದರು. ಅದರಲ್ಲಿ ಎರಡು ಸಿಕ್ಸರ್‌ಗಳು ಒಳಗೊಂಡಿದ್ದವು. ಇಡೀ ಇನ್ನಿಂಗ್ಸ್‌ನಲ್ಲಿ ನಾಲ್ಕು ಸಿಕ್ಸರ್‌ಗಳು ಸಿಡಿದಿದ್ದವು. ತಂಡದಲ್ಲಿ ಎರಡನೇ ಅತ್ಯಧಿಕ ಸ್ಕೋರ್‌ ಎಂದರೆ ಅಮಿತ್‌ ಮಿಶ್ರಾ ಅವರ 19 ರನ್‌. ಆದರೆ ಅದಕ್ಕಾಗಿ ಅವರು ಎದುರಿಸಿದ್ದು 30 ಎಸೆತಗಳನ್ನು.

ಮೂವರ ಎರಡಂಕಿ
ಫಾ ಡು ಪ್ಲೆಸಿಸ್‌ (44), ವಿರಾಟ್‌ ಕೊಹ್ಲಿ (31) ಮತ್ತು ದಿನೇಶ್‌ ಕಾರ್ತಿಕ್‌ (16) ಹೊರತುಪಡಿಸಿ ಉಳಿದವರ್ಯಾರೂ ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿಯಲ್ಲಿ ಎರಡಂಕೆಯ ಮೊತ್ತ ಗಳಿಸಲಿಲ್ಲ. ಆರ್‌ಸಿಬಿ ಸರದಿಯಲ್ಲಿ ಸಿಡಿದದ್ದು 6 ಬೌಂಡರಿ ಹಾಗೂ 2 ಸಿಕ್ಸರ್‌ ಮಾತ್ರ. ಕೊಹ್ಲಿ-ಡು ಪ್ಲೆಸಿಸ್‌ ಪವರ್‌ ಪ್ಲೇಯಲ್ಲಿ ಅಬ್ಬರಿಸಲು ವಿಫ‌ಲರಾದರು. ನಿಧಾನ ಗತಿಯ ಬ್ಯಾಟಿಂಗ್‌ ಪ್ರದರ್ಶಿಸಿ 42 ರನ್‌ ಕಲೆಹಾಕಿದರು. ಆರಂಭಿಕ ಜೋಡಿ ಭರ್ತಿ 9 ಓವರ್‌ಗಳನ್ನು ನಿಭಾಯಿಸಿತಾದರೂ ಗಳಿಸಿದ್ದು 62 ರನ್‌ ಮಾತ್ರ. ಆಗ ವಿರಾಟ್‌ ಕೊಹ್ಲಿ, ಬಿಷ್ಣೋಯಿ ಎಸೆತವನ್ನು ಮುನ್ನುಗ್ಗಿ ಬಾರಿಸಲು ಹೋಗಿ ಸ್ಟಂಪ್ಡ್ ಆದರು. 31 ರನ್‌ ಮಾಡಿದ ಕೊಹ್ಲಿ ಇದಕ್ಕೆ 30 ಎಸೆತ ತೆಗೆದುಕೊಂಡರು. ಹೊಡೆದದ್ದು ಮೂರೇ ಬೌಂಡರಿ.

ಈ ಹಿಂದೆ ಸಾಕಷ್ಟು ಸಲ ಅವಕಾಶ ಪಡೆದು ವಿಫ‌ಲರಾದ ಅನುಜ್‌ ರಾವತ್‌ ಇಲ್ಲಿ 9 ರನ್ನಿಗೆ ಆಟ ಮುಗಿಸಿ ಹೋದರು. 11 ಎಸೆತಗಳನ್ನು ಎದುರಿಸಿದ ರಾವತ್‌ ಬೌಂಡರಿ ಹೊಡೆತದಿಂದ ದೂರವೇ ಉಳಿದಿದ್ದರು. ರಾವತ್‌ ಈ ಸೀಸನ್‌ನಲ್ಲಿ ವನ್‌ಡೌನ್‌ನಲ್ಲಿ ಆಡಲಿಳಿದ ಆರ್‌ಸಿಬಿಯ 6ನೇ ಆಟಗಾರ.

Advertisement

ಬಿಗ್‌ ಹಿಟ್ಟರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ (4), ಸುಯಶ್‌ ಪ್ರಭುದೇಸಾಯಿ (6) ಯಶಸ್ಸು ಕಾಣಲಿಲ್ಲ. 15 ರನ್‌ ಅಂತರದಲ್ಲಿ 3 ವಿಕೆಟ್‌ ಉರುಳಿತು.

ಡೆತ್‌ ಓವರ್‌ ಆರಂಭಗೊಂಡು 2 ಎಸೆತ ಕಾಣುವಷ್ಟರಲ್ಲಿ ಮಳೆ ಸುರಿಯತೊಡಗಿತು. ಸುಮಾರು 25 ನಿಮಿಷಗಳ ಆಟ ನಷ್ಟವಾಯಿತು. ಅನಂತರವೂ ಆರ್‌ಸಿಬಿಯಿಂದ ಬ್ಯಾಟಿಂಗ್‌ ಅಬ್ಬರವೇನೂ ಕಂಡುಬರಲಿಲ್ಲ.

ಸ್ಕೋರ್‌ ಪಟ್ಟಿ
ರಾಯಲ್‌ ಚಾಲೆಂಜರ್ ಬೆಂಗಳೂರು
ವಿರಾಟ್‌ ಕೊಹ್ಲಿ ಸ್ಟಂಪ್ಡ್ ಪೂರಣ್‌ ಬಿ ಬಿಷ್ಣೋಯಿ 31
ಫಾ ಡು ಪ್ಲೆಸಿಸ್‌ ಸಿ ಪಾಂಡ್ಯ ಬಿ ಮಿಶ್ರಾ 44
ಅನುಜ್‌ ರಾವತ್‌ ಸಿ ಮೇಯರ್ ಬಿ ಗೌತಮ್‌ 9
ಗ್ಲೆನ್‌ ಮ್ಯಾಕ್ಸ್‌ವೆಲ್‌ ಎಲ್‌ಬಿಡಬ್ಲ್ಯು ಬಿಷ್ಣೋಯಿ 4
ಪ್ರಭುದೇಸಾಯಿ ಸಿ ಗೌತಮ್‌ ಬಿ ಮಿಶ್ರಾ 6
ದಿನೇಶ್‌ ಕಾರ್ತಿಕ್‌ ರನೌಟ್‌ 16
ಎಂ. ಲೊನ್ರೋರ್‌ ಎಲ್‌ಬಿಡಬ್ಲ್ಯು ಹಕ್‌ 3
ವನಿಂದು ಹಸರಂಗ ಔಟಾಗದೆ 8
ಕಣ್‌ì ಶರ್ಮ ಸಿ ಗೌತಮ್‌ ಬಿ ಹಕ್‌ 2
ಮೊಹಮ್ಮದ್‌ ಸಿರಾಜ್‌ ಸಿ ಪೂರಣ್‌ ಬಿ ಹಕ್‌ 0
ಜೋಶ್‌ ಹೇಝಲ್‌ವುಡ್‌ ಔಟಾಗದೆ 1
ಇತರ 2
ಒಟ್ಟು (20 ಓವರ್‌ಗಳಲ್ಲಿ 9 ವಿಕೆಟಿಗೆ) 126
ವಿಕೆಟ್‌ ಪತನ: 1-62, 2-75, 3-80, 4-90, 5-109, 6-114, 7-117, 8-121, 9-121.
ಬೌಲಿಂಗ್‌: ಕೃಣಾಲ್‌ ಪಾಂಡ್ಯ 4-0-21-0
ಮಾರ್ಕಸ್‌ ಸ್ಟೋಯಿನಿಸ್‌ 1-0-11-0
ನವೀನ್‌ ಉಲ್‌ ಹಕ್‌ 4-0-30-3
ರವಿ ಬಿಷ್ಣೋಯಿ 4-0-21-2
ಅಮಿತ್‌ ಮಿಶ್ರಾ 3-0-21-2
ಯಶ್‌ ಠಾಕೂರ್‌ 2-0-12-0
ಕೆ. ಗೌತಮ್‌ 2-0-10-1

ಲಕ್ನೋ ಸೂಪರ್‌ ಜೈಂಟ್ಸ್‌
ಕೈಲ್‌ ಮೇಯರ್ ಸಿ ರಾವತ್‌ ಬಿ ಸಿರಾಜ್‌ 0
ಆಯುಷ್‌ ಬದೋನಿ ಸಿ ಕೊಹ್ಲಿ ಬಿ ಹೇಝಲ್‌ವುಡ್‌ 4
ಕೃಣಾಲ್‌ ಪಾಂಡ್ಯ ಸಿ ಕೊಹ್ಲಿ ಬಿ ಮ್ಯಾಕ್ಸ್‌ವೆಲ್‌ 14
ದೀಪಕ್‌ ಹೂಡಾ ಸ್ಟಂಪ್ಡ್ ಕಾರ್ತಿಕ್‌ ಬಿ ಹಸರಂಗ 1
ಮಾರ್ಕಸ್‌ ಸ್ಟೋಯಿನಿಸ್‌ ಸಿ ಸುಯೇಶ್‌ ಬಿ ಕಣ್‌ì 13
ನಿಕೋಲಸ್‌ ಪೂರಣ್‌ ಸಿ ಲೊನ್ರೋರ್‌ ಬಿ ಕಣ್‌ì 9
ಕೆ. ಗೌತಮ್‌ ರನೌಟ್‌ 23
ಬಿಷ್ಣೋಯಿ ರನೌಟ್‌ 5
ಅಮಿತ್‌ ಮಿಶ್ರಾ ಸಿ ದಿನೇಶ್‌ ಕಾರ್ತಿಕ್‌ ಬಿ ಪಟೇಲ್‌ 19
ನವೀನ್‌ ಉಲ್‌ ಹಕ್‌ ಸಿ ದಿನೇಶ್‌ ಬಿ ಜೋಶ್‌ 13
ಕೆ ಎಲ್‌ ರಾಹುಲ್‌ ಔಟಾಗದೆ 0
ಇತರ 7
ಒಟ್ಟು (19.5 ಓವರ್‌ಗಳಲ್ಲಿ 10 ವಿಕೆಟ್‌ಗೆ) 108
ವಿಕೆಟ್‌ ಪತನ: 1-0, 2-19, 3-21, 4-27, 5-38, 6-65, 7-66, 8-77, 9-103, 10-108
ಬೌಲಿಂಗ್‌: ಮೊಹಮ್ಮದ್‌ ಸಿರಾಜ್‌ 3-0-24-1
ಜೋಶ್‌ ಹೇಝಲ್‌ವುಡ್‌ 3-0-15-2
ಗ್ಲೆನ್‌ ಮ್ಯಾಕ್ಸ್‌ವೆಲ್‌ 1-0-3-1
ವನಿಂದು ಹಸರಂಗ 4-0-20-1
ಕಣ್‌ì ಶರ್ಮ 4-0-20-2
ಹರ್ಷಲ್‌ ಪಟೇಲ್‌ 3.5-0-20-1
ಮಹಿಪಾಲ್‌ ಲೊನ್ರೋರ್‌ 1-0-4-0

Advertisement

Udayavani is now on Telegram. Click here to join our channel and stay updated with the latest news.

Next