Advertisement

IPL 2023: ಜೇಸನ್‌ ರಾಯ್‌ಗೆ ಬಲೆ ಬೀಸಿದ ಕೋಲ್ಕತ

09:00 PM Apr 05, 2023 | Team Udayavani |

ಕೋಲ್ಕತ: ಶ್ರೇಯಸ್‌ ಐಯ್ಯರ್‌, ಶಕಿಬ್‌ ಅಲ್‌ ಹಸನ್‌ ಅವರಂಥ ತಾರಾ ಕ್ರಿಕೆಟಿಗರನ್ನು ಕಳೆದುಕೊಂಡಿರುವ ಕೋಲ್ಕತ ನೈಟ್‌ರೈಡರ್ಗೆ ಈಗ ಹೊಸ ಶಕ್ತಿ ಬಂದಿದೆ. ಅದು ಇಂಗ್ಲೆಂಡಿನ ಖ್ಯಾತ ಆರಂಭಕಾರ ಜೇಸನ್‌ ರಾಯ್‌ ಅವರನ್ನು 2.8 ಕೋಟಿ ರೂ. ಮೊತ್ತಕ್ಕೆ ಖರೀದಿಸಿದೆ. ಆದರೆ ಗುರುವಾರದ ಆರ್‌ಸಿಬಿ ಎದುರಿನ ಪಂದ್ಯಕ್ಕೆ ರಾಯ್‌ ಲಭ್ಯರಾಗುವುದು ಖಚಿತಪಟ್ಟಿಲ್ಲ.

Advertisement

ಒಂದು ವೇಳೆ ಆಡುವುದೇ ಆದರೆ ಅಫ್ಘಾನ್‌ ಓಪನರ್‌-ಕೀಪರ್‌ ರೆಹಮಾನುಲ್ಲ ಗುರ್ಬಜ್‌ ಸ್ಥಾನಕ್ಕೆ ಬರಬಹುದು. ಆಗ ಎನ್‌.ಜಗದೀಶನ್‌ ಕೀಪಿಂಗ್‌ ಮಾಡಬೇಕಾಗುತ್ತದೆ. ಜೇಸನ್‌ ರಾಯ್‌ 1.5 ಕೋಟಿ ರೂ. ಮೂಲಬೆಲೆಯನ್ನು ಹೊಂದಿದ್ದ ಆಟಗಾರ. ಕಳೆದ ಹರಾಜಿನಲ್ಲಿ ಮಾರಾಟವಾಗದೇ ಉಳಿದಿದ್ದರು. ಈಗ ಕೆಕೆಆರ್‌ ಬಾಗಿಲು ತೆರೆದಿದೆ.

ಜೇಸನ್‌ ರಾಯ್‌ 2017ರಲ್ಲಿ ಮೊದಲ ಸಲ ಐಪಿಎಲ್‌ ಆಡಿದ್ದರು. ಅಂದಿನ ತಂಡ ಗುಜರಾತ್‌ ಲಯನ್ಸ್‌. 2021ರಲ್ಲಿ ಸನ್‌ರೈಸರ್ ಹೈದರಾಬಾದ್‌ ತಂಡವನ್ನು ಪ್ರತಿನಿಧಿಸಿದ್ದರು. ಒಂದು ಅರ್ಧಶತಕ ಸೇರಿದಂತೆ 150 ರನ್‌ ಹೊಡೆದದ್ದಿರು. 32 ವರ್ಷದ ಜೇಸನ್‌ ರಾಯ್‌ ಇಂಗ್ಲೆಂಡ್‌ ಪರ 64 ಟಿ20 ಪಂದ್ಯಗಳನ್ನು ಆಡಿದ್ದು, 137.61ರ ಸ್ಟ್ರೈಕ್‌ರೇಟ್‌ನಲ್ಲಿ 1,522 ರನ್‌ ಹೊಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next