ಮೊಹಾಲಿ: ಸತತ ಸೋಲಿನಿಂದ ಕಂಗಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಗೆಲುವಿನ ಹಳಿಗೇರುವ ತವಕದಲ್ಲಿದೆ. ಇಂದು ಮೊಹಾಲಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಕಳೆದ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಬೌಲರ್ ಗಳು ದುಬಾರಿಯಾಗಿದ್ದರು. ಹೀಗಾಗಿ ಬೌಲಿಂಗ್ ವಿಭಾಗದಲ್ಲಿ ಆರ್ ಸಿಬಿ ಬದಲಾವಣೆಯ ನಿರೀಕ್ಷೆಯಲ್ಲಿದೆ.
ಗಾಯದಿಂದ ಚೇತರಿಕೆ ಹೊಂದಿರುವ ಸೀಮರ್ ಜೋಶ್ ಹೇಜಲ್ ವುಡ್ ಅವರು ತಮ್ಮ ಈ ಸೀಸನ್ ನಲ್ಲಿ ಮೊದಲ ಪಂದ್ಯವನ್ನು ಆಡಲು ಎದುರು ನೋಡುತ್ತಿದ್ದಾರೆ. ಹೇಜಲ್ ವುಡ್ ನೆಟ್ ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ.
ಇದನ್ನೂ ಓದಿ:ಪುತ್ತೂರು: ಬೃಹತ್ ಮೆರವಣಿಗೆ- ಭ್ರಷ್ಟಾಚಾರ ಮುಕ್ತ ಆಡಳಿತ -ಅಶೋಕ್ ಕುಮಾರ್ ರೈ
ಹೇಜಲ್ ವುಡ್ ಆರ್‌ಸಿಬಿಯ ಮೊದಲ ಆಯ್ಕೆಯ ಬೌಲರ್‌ಗಳಲ್ಲಿ ಒಬ್ಬರು. ಕಳೆದ ವರ್ಷ 12 ಪಂದ್ಯಗಳಲ್ಲಿ 20 ವಿಕೆಟ್‌ಗಳನ್ನು ಪಡೆದ ನಂತರ 2023 ರ ಆವೃತ್ತಿಗೆ ಅವರನ್ನು ರಿಟೈನ್ ಮಾಡಲಾಗಿತ್ತು. ಆದರೆ ಅಕಿಲ್ಸ್ ಗಾಯದ ಕಾರಣ ಬಲಗೈ ಸೀಮರ್ ಜೋಶ್ ಜನವರಿಯಿಂದ ಯಾವುದೇ ಸ್ಪರ್ಧಾತ್ಮಕ ಆಟವನ್ನು ಆಡಿಲ್ಲ.
5 ಪಂದ್ಯಗಳಲ್ಲಿ ಎರಡನ್ನಷ್ಟೇ ಗೆದ್ದಿರುವ ಬೆಂಗಳೂರು ತಂಡ ಸದ್ಯ ಕೆಳಗಿನಿಂದ 3ನೇ ಸ್ಥಾನದಲ್ಲಿದೆ. ಪಂಜಾಬ್ ಐದರಲ್ಲಿ ಮೂರನ್ನು ಜಯಿಸಿದ್ದು, 5ನೇ ಸ್ಥಾನಿಯಾಗಿದೆ.