ಅಹಮದಾಬಾದ್: ಇಂದು ಅಹಮದಾಬಾದ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 2023 ರ ಫೈನಲ್ ಪಂದ್ಯ ನಡೆಯಲಿದೆ. ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಲಿದೆ. ಎಂಎಸ್ ಧೋನಿಯ ಸಿಎಸ್‌ಕೆಗೆ ಇದು 10 ನೇ ಐಪಿಎಲ್ ಫೈನಲ್ ಆಗಿದ್ದು, 5 ನೇ ಬಾರಿಗೆ ಗೆದ್ದು ದಾಖಲೆ ಸಮಗೊಳಿಸುವ ಪ್ರಯತ್ನದಲ್ಲಿದೆ. ಮತ್ತೊಂದೆಡೆ, ಗುಜರಾತ್ ಸತತವಾಗಿ ಎರಡನೇ ಬಾರಿಗೆ ಪ್ರಶಸ್ತಿಯನ್ನು ಗೆಲ್ಲಲು ಯೋಜನೆ ರೂಪಿಸುತ್ತಿದೆ.
ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಚೆನ್ನೈ ಸುಲಭದಲ್ಲಿ ಸೋಲಿಸಿತ್ತು, ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗಿಲ್ ಶತಕದ ನೆರವಿನಿಂದ ಗುಜರಾತ್ ತಂಡವು ಮುಂಬೈ ವಿರುದ್ಧ ಗೆದ್ದು ಫೈನಲ್ ಪ್ರವೇಶ ಪಡೆದಿತ್ತು.
ಇದನ್ನೂ ಓದಿ:ಸಂಸತ್ ಭವನದ ಉದ್ಘಾಟನೆಯನ್ನು ಮೋದಿ ಪಟ್ಟಾಭಿಷೇಕವೆಂದು ಪರಿಗಣಿಸಿದ್ದಾರೆ: Rahul Gandhi ಟೀಕೆ
ಇಂದಿನ ಫೈನಲ್ ಪಂದ್ಯ ವರ್ಣರಂಜಿತವಾಗಿ ನಡೆಯಲಿದೆ. ಖ್ಯಾತ ಸಂಗೀತಗಾರರು ಪ್ರದರ್ಶನ ನೀಡಲಿದ್ದಾರೆ. ಆದರೆ ಇಂದಿನ ಪಂದ್ಯಕ್ಕೆ ವರುಣರಾಯ ಸಮಸ್ಯೆ ನೀಡುವ ಸಾಧ್ಯತೆಯೂ ಇದೆ.
ಅಕ್ಯುವೆದರ್ ಪ್ರಕಾರ, ಅಹಮದಾಬಾದ್ ನಲ್ಲಿ ಭಾನುವಾರ ಸಂಜೆ ತುಂತುರು ಮಳೆಯಾಗುವ ನಿರೀಕ್ಷೆಯಿದೆ. ಸಂಜೆ ವೇಳೆಗೆ ಶೇ.40 ರಷ್ಟು ಮಳೆಯಾಗುವ ಸಾಧ್ಯತೆಗಳಿದ್ದು, ನಗರದಲ್ಲಿ ಒಟ್ಟು 2 ಗಂಟೆಗಳ ಕಾಲ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಸಂಜೆಯ ವೇಳೆಗೆ 50 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ, ನಂತರ ಮಳೆಯು ಪ್ರಾರಂಭವಾಗಬಹುದು.