ಹೊಸದಿಲ್ಲಿ: ಅಂಕಪಟ್ಟಿ ಯಲ್ಲಿ ಕೊನೆಯ ಎರಡು ಸ್ಥಾನವನ್ನು ಗಟ್ಟಿ ಮಾಡಿಕೊಂಡಂತಿರುವ ಡೆಲ್ಲಿ ಮತ್ತು ಹೈದರಾಬಾದ್ ತಂಡಗಳು ಐದೇ ದಿನಗಳ ಅಂತರದಲ್ಲಿ ದ್ವಿತೀಯ ಸುತ್ತಿನ ಐಪಿಎಲ್ ಪಂದ್ಯವಾಡಲು ಇಳಿಯಲಿವೆ.
ಇತ್ತಂಡಗಳಿಗೂ ಇದು 8ನೇ ಹಾಗೂ ಮಹತ್ವದ ಪಂದ್ಯ. ಎರಡೂ ತಂಡಗಳು ಐದರಲ್ಲಿ ಸೋತು, ಎರಡ ರಲ್ಲಷ್ಟೇ ಜಯ ಸಾಧಿಸಿವೆ. ರನ್‌ರೇಟ್‌ನಲ್ಲಿ ಹೈದರಾಬಾದ್ ತುಸು ಮುಂದಿದೆ.
ಸೋಮವಾರ ಹೈದರಾಬಾದ್‌ನಲ್ಲಿ ನಡೆದ ಪಂದ್ಯವನ್ನು ಡೆಲ್ಲಿ 7 ರನ್ನುಗಳಿಂದ ರೋಚಕವಾಗಿ ಗೆದ್ದಿತ್ತು. ನಿರಂತರ 5 ಪಂದ್ಯಗಳನ್ನು ಸೋತ ವಾರ್ನರ್ ಪಡೆಗೆ ಒಲಿದ ಸತತ 2ನೇ ಗೆಲುವು ಇದಾಗಿತ್ತು. ಅನಂತರ ಎರಡೂ ತಂಡಗಳಿಗೆ ಎದುರಾಗಿರುವ ಮೊದಲ ಪಂದ್ಯ ಇದಾಗಿದೆ.
ಸೋಮವಾರದ ಮುಖಾಮುಖೀ ಯಲ್ಲಿ ಮೊದಲು ಬ್ಯಾಟಿಂಗ್ ನಡೆ ಸಿದ ಡೆಲ್ಲಿಗೆ ಗಳಿಸಲು ಸಾಧ್ಯವಾದದ್ದು 9 ವಿಕೆಟಿಗೆ 144 ರನ್ ಮಾತ್ರ. ಹೈದರಾ ಬಾದ್ 6 ವಿಕೆಟಿಗೆ 137 ರನ್ ಮಾಡಿ ಅಚ್ಚರಿಯ ಸೋಲನುಭವಿಸಿತ್ತು.
ಡೆಲ್ಲಿಯ ಸಮಸ್ಯೆ ಓಪನಿಂಗ್‌ನಿಂದಲೇ ಆರಂಭವಾಗುತ್ತದೆ. ಪೃಥ್ವಿ ಶಾ ವೈಫಲ್ಯ, ಇವರ ಬದಲು ಇನ್ನಿಂಗ್ಸ್ ಆರಂಭಿಸಿದ ಫಿಲ್ ಸಾಲ್ಟ್ ಕೂಡ ಸೊನ್ನೆ ಸುತ್ತಿರುವುದು ಡೆಲ್ಲಿಯ ದುರಂತಕ್ಕೆ ಸಾಕ್ಷಿ. ಮಿಚೆಲ್ ಮಾರ್ಷ್ ಕೂಡ ಮಿಂಚುತ್ತಿಲ್ಲ. 5 ಇನ್ನಿಂಗ್ಸ್ ಗಳಲ್ಲಿ ಗಳಿಸಿದ್ದು 31 ರನ್ ಮಾತ್ರ ಎಂಬುದು ಮಿಚೆಲ್ ಕತೆಯನ್ನು ಹೇಳುತ್ತದೆ. ನಾಯಕ ವಾರ್ನರ್ ಕ್ರೀಸ್ ಆಕ್ರಮಿಸಿಕೊಂಡರೂ ಇದಕ್ಕೆ ತಕ್ಕಂತೆ ರನ್ ಗಳಿಸುತ್ತಿಲ್ಲ.
ಡೆಲ್ಲಿಗೆ ಹೋಲಿಸಿದರೆ ಹೈದರಾಬಾದ್ ಬ್ಯಾಟಿಂಗ್ ಸರದಿಯೇ ವಾಸಿ. ಆದರೂ ಅದು ಡೆಲ್ಲಿ ವಿರುದ್ಧ 145 ರನ್ ಗಳಿಸಲು ಪರದಾಡಿತ್ತು. ಡೆಲ್ಲಿ ಬೌಲಿಂಗ್ ಹರಿತವಾಗಿದ್ದುದೇ ಇದಕ್ಕೆ ಕಾರಣ. ಇಶಾಂತ್ ಶರ್ಮ, ನೋರ್ಜೆ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮುಕೇಶ್ ಕುಮಾರ್ ಅವರೆಲ್ಲ ಪರಿಣಾಮಕಾರಿ ದಾಳಿ ಸಂಘಟಿಸುತ್ತಿದ್ದಾರೆ.
ಶತಕದ ಬಳಿಕ ಹ್ಯಾರಿ ಬ್ರೂಕ್ ಬ್ಯಾಟ್ ಮುಷ್ಕರ ಹೂಡಿದೆ (13, 3, 9, 18, 7). ಅಗರ್ವಾಲ್, ತ್ರಿಪಾಠಿ, ಮಾರ್ಕ್‌ರಮ್, ಅಭಿಷೇಕ್ ಶರ್ಮ, ಕ್ಲಾಸೆನ್ ಪ್ರಯತ್ನ ಸಾಲದು. ರನ್ ಗಳಿಸದೆ ಹೈದರಾಬಾದ್‌ಗೆ ಸೇಡು ತೀರಿಸಲು ಸಾಧ್ಯವಿಲ್ಲ ಎಂಬುದು ಸದ್ಯದ ಸ್ಥಿತಿ.