Advertisement

IPL 2023: ಮುಂಬೈ ವಿರುದ್ಧ ಚೆನ್ನೈಗೆ 6 ವಿಕೆಟ್‌ಗಳ ಜಯ

08:08 PM May 06, 2023 | Team Udayavani |

ಚೆನ್ನೈ: ಇಲ್ಲಿ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಆರು ವಿಕೆಟ್‌ಗಳ ಜಯ ಸಾಧಿಸಿದೆ.

Advertisement

ಮುಂಬೈ ಇಂಡಿಯನ್ಸ್ ಬ್ಯಾಟಿಂಗ್‌ಗೆ ಇಳಿದು 8 ವಿಕೆಟ್‌ಗೆ 139 ರನ್ ಗಳಿಸಿತು. ನಾಯಕ ರೋಹಿತ್ ಶರ್ಮಾ (0) ಸತತ ಎರಡನೇ ಬಾರಿ ರನ್ ಗಳಿಸಲು ವಿಫಲರಾದರು, ನೆಹಾಲ್ ವಧೇರಾ 51 ಎಸೆತಗಳಲ್ಲಿ 64 ರನ್ ಗಳಿಸಿದ್ದು ಮಾತ್ರ ಉತ್ತಮ ಸ್ಕೋರ್ ಆಗಿತ್ತು. ಸೂರ್ಯಕುಮಾರ್ ಯಾದವ್ 22 ಎಸೆತಗಳಲ್ಲಿ 26 ರನ್ ಗಳಿಸಿದ್ದು ಎರಡನೇ ಅತ್ಯುತ್ತಮ ಸ್ಕೋರ್.

ಸಿಎಸ್‌ಕೆ ಪರ ವೇಗಿಗಳಾದ ದೀಪಕ್ ಚಾಹರ್ (3 ಓವರ್‌ಗಳಲ್ಲಿ 2/18), ತುಷಾರ್ ದೇಶಪಾಂಡೆ (4 ಓವರ್‌ಗಳಲ್ಲಿ 2/26) ಮತ್ತು ಮಥೀಶ್ ಪತಿರಾನ (4 ಓವರ್‌ಗಳಲ್ಲಿ 3/15) ವಿಕೆಟ್‌ಗಳನ್ನು ಪಡೆದರು.

ಉತ್ತರವಾಗಿ ಸಿಎಸ್‌ಕೆ 17.4 ಓವರ್‌ಗಳಲ್ಲಿ ರನ್ ಗಳಿಸಿತು. ರುತುರಾಜ್ ಗಾಯಕ್ವಾಡ್ (16 ಎಸೆತಗಳಲ್ಲಿ 30) ಮತ್ತು ಡೆವೊನ್ ಕಾನ್ವೆ (42 ಎಸೆತಗಳಲ್ಲಿ 44) ಕೊಡುಗೆ ನೀಡಿದರು.

ಗೆಲುವಿನೊಂದಿದೆ 13 ಅಂಕಗಳೊಂದಿಗೆ ಚೆನ್ನೈ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಂದಿದೆ.

Advertisement

ಸಂಕ್ಷಿಪ್ತ ಸ್ಕೋರ್‌:

ಮುಂಬೈ ಇಂಡಿಯನ್ಸ್: 139/8 (ನೆಹಲ್ ವಧೇರಾ 64, ದೀಪಕ್ ಚಹಾರ್ 2/18, ತುಷಾರ್ ದೇಶಪಾಂಡೆ 2/26, ಮಥೀಶ ಪತಿರಾನ 3/15 ).

ಚೆನ್ನೈ ಸೂಪರ್ ಕಿಂಗ್ಸ್: 17.4 ಓವರ್‌ಗಳಲ್ಲಿ 140/4 (ಡೆವೊನ್ ಕಾನ್ವೆ 42 ಎಸೆತಗಳಲ್ಲಿ 44, ರುತುರಾಜ್ ಗಾಯಕ್ವಾಡ್ 16 ಎಸೆತಗಳಲ್ಲಿ 30 ಪಿಯೂಷ್ ಚಾವ್ಲಾ 2/25).

Advertisement

Udayavani is now on Telegram. Click here to join our channel and stay updated with the latest news.

Next