ಮುಂಬೈ: ಮೊದಲೆರಡು ಪಂದ್ಯಗಳಲ್ಲಿ ಸೋತು ಕಳೆದ ವರ್ಷದ ಕಳಪೆ ಪ್ರದರ್ಶನದ ಪುನರಾವರ್ತನೆಯ ಹಾದಿಯಲ್ಲಿದ್ದ ಸನ್‌ರೈಸರ್ ಹೈದರಾಬಾದ್ ದಿಢೀರ್ ಚೇತರಿಕೆ ಕಂಡಿದೆ. ಹ್ಯಾಟ್ರಿಕ್ ಗೆಲುವಿನೊಂದಿಗೆ ಮುಂದಡಿ ಇರಿಸಿದೆ. ಶುಕ್ರವಾರವಷ್ಟೇ ಕೆಕೆಆರ್‌ಗೆ ಸೋಲುಣಿಸಿದ ಹುಮ್ಮಸ್ಸಿನಲ್ಲಿರುವ ಕೇನ್ ವಿಲಿಯಮ್ಸನ್ ಪಡೆ ಒಂದೇ ದಿನದ ವಿರಾಮದ ಬಳಿಕ ಪಂಜಾಬ್ ಕಿಂಗ್ಸ್ ವಿರುದ್ಧ ಅಂಗಳಕ್ಕಿಳಿಯಲಿದೆ. ಪಂಜಾಬ್‌ಗೂ ಅದು ಪಂಚ್ ಕೊಟ್ಟೀತೇ ಎಂಬ ನಿರೀಕ್ಷೆಯಲ್ಲಿದ್ದಾರೆ ಕ್ರಿಕೆಟ್ ಅಭಿಮಾನಿಗಳು.
ನವೀ ಮುಂಬೈನ ಡಿವೈ ಪಾಟೀಲ್ ಮೈದಾನದಲ್ಲಿ ನಡೆಯುವ ಪಂದ್ಯದಲ್ಲಿ ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದೆ.
ಇದನ್ನೂ ಓದಿ:ಆ ಒಂದು ಕನಸಿಗಾಗಿ ಎಲ್ಲಾ ಪ್ರಯತ್ನ ಮಾಡುತ್ತಿದ್ದೇನೆ..: ದಿನೇಶ್ ಕಾರ್ತಿಕ್
ನಾಯಕ ಮಯಾಂಕ್ ಅಗರ್ವಾಲ್ ಇಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದು, ಪಂಜಾಜ್ ಕಿಂಗ್ಸ್ ತಂಡವನ್ನು ಶಿಖರ್ ಧವನ್ ಮುನ್ನಡೆಸುತ್ತಿದ್ದಾರೆ. ಹೈದರಾಬಾದ್ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ.
ಎರಡೂ ತಂಡಗಳು ತಲಾ ಮೂರು ಪಂದ್ಯ ಗೆದ್ದು ಆರು ಅಂಕಗಳನ್ನು ಪಡೆದುಕೊಂಡಿವೆ. ಇಂದಿನ ಪಂದ್ಯವನ್ನು ಗೆದ್ದು ಕೂಟದಲ್ಲಿ ಮುಂದುವರಿಯುವ ತಯಾರಿ ನಡೆಸಿವೆ.
ತಂಡಗಳು
ಹೈದರಾಬಾದ್: ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್(ನಾ), ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಂ, ನಿಕೋಲಸ್ ಪೂರನ್(ವಿ.ಕೀ), ಶಶಾಂಕ್ ಸಿಂಗ್, ಜಗದೀಶ ಸುಚಿತ್, ಭುವನೇಶ್ವರ್ ಕುಮಾರ್, ಮಾರ್ಕೊ ಜಾನ್ಸೆನ್, ಉಮ್ರಾನ್ ಮಲಿಕ್, ಟಿ ನಟರಾಜನ್
ಪಂಜಾಬ್: ಶಿಖರ್ ಧವನ್(ನಾ), ಜಾನಿ ಬೈರ್‌ಸ್ಟೋವ್, ಪ್ರಭಾಸಿಮ್ರಾನ್ ಸಿಂಗ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ(ವಿ.ಕೀ), ಶಾರುಖ್ ಖಾನ್, ಓಡಿಯನ್ ಸ್ಮಿತ್, ಕಗಿಸೊ ರಬಾಡ, ರಾಹುಲ್ ಚಾಹರ್, ವೈಭವ್ ಅರೋರಾ, ಅರ್ಶ್‌ದೀಪ್ ಸಿಂಗ್