Advertisement

ಐಪಿಎಲ್ ಮಹಾಹರಾಜಿಗೆ ಸಿದ್ದತೆ: ನಾಲ್ವರು ಆಟಗಾರರನ್ನು ಉಳಿಸಲು ಮಾತ್ರ ಅವಕಾಶ,ಹೀಗಿದೆ ನಿಯಮಗಳು

03:55 PM Jul 05, 2021 | Team Udayavani |

ಮುಂಬೈ: ಕೋವಿಡ್ ಕಾರಣದಿಂದ ಅರ್ಧಕ್ಕೆ ನಿಂತಿರುವ ಈ ಬಾರಿಯ ಐಪಿಎಲ್ ಕೂಟ ಸಪ್ಟೆಂಬರ್ ತಿಂಗಳಲ್ಲಿ ಮತ್ತೆ ಮುಂದುವರಿಯಲಿದೆ. ಆದರೆ ಅದಾಗಲೇ ಮುಂದಿನ ಮಹಾ ಹರಾಜು ಪ್ರಕ್ರಿಯೆಗೆ ಬಿಸಿಸಿಐ ಸಿದ್ದತೆ ನಡೆಸುತ್ತಿದೆ.

Advertisement

ಹೌದು, ಉನ್ನತ ಮೂಲಗಳ ಪ್ರಕಾರ 2022ರ ಐಪಿಎಲ್ ಗೂ ಬಿಸಿಸಿಐ ರಣತಂತ್ರ ಈಗಾಗಲೇ ಸಿದ್ದವಾಗುತ್ತಿದೆ. ಮುಂದಿನ ಎಪ್ರಿಲ್ ನಲ್ಲಿ ಭಾರತದಲ್ಲೇ ಐಪಿಎಲ್ ನಡೆಸಲು ಬಿಸಿಸಿಐ ಯೋಜನೆ ಸಿದ್ದಪಡಿಸುತ್ತಿದೆ.

2022ರ ಐಪಿಎಲ್ ನ ಹೈಲೈಟ್ ಎಂದರೆ ಎರಡು ಹೆಚ್ಚುವರಿ ತಂಡಗಳ ಸೇರ್ಪಡೆ. ಆಗಸ್ಟ್ ತಿಂಗಳಿನಿಂದ ಇದರ ಕೆಲಸ ಆರಂಭವಾಗಲಿದ್ದು, ಅಕ್ಟೋಬರ್ ನಲ್ಲಿ ಎರಡು ತಂಡಗಳ ಬಗ್ಗೆ ಅಧಿಕೃತ ಘೋಷಣೆಯಾಗಲಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ:‘ಪಕ್ಕದ  ಮನೆಯವನ ಪತ್ನಿ…’ ಹೇಳಿಕೆಗೆ ಕ್ಷಮೆ ಕೇಳಿದ ದಿನೇಶ್ ಕಾರ್ತಿಕ್

ಅದಲ್ಲದೆ ಮಹಾ ಹರಾಜ ಪ್ರಕ್ರಿಯೆಯು ಮುಂದಿನ ಡಿಸೆಂಬರ್ ನಲ್ಲಿ ನಡೆಯಲಿದೆ. ಈ ಬಾರಿ ಪ್ರತಿ ತಂಡ ತನ್ನಲ್ಲಿರು ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ಮೂವರು ಭಾರತೀಯರು ಮತ್ತು ಓರ್ವ ವಿದೇಶಿ ಆಟಗಾರ ಅಥವಾ ಇಬ್ಬರು ಭಾರತೀಯರು ಮತ್ತು ಇಬ್ಬರು ವಿದೇಶಿ ಆಟಗಾರರು ಎಂಬ ಲೆಕ್ಕದಲ್ಲಿ ಆಟಗಾರರನ್ನು ತಂಡಗಳು ಉಳಿಸಿಕೊಳ್ಳಬಹುದಾಗಿದೆ ಎಂದು ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next