Advertisement

ಕ್ರಿಕೆಟರ್‌ ಆಗುವ ನಿರೀಕ್ಷೆಯೇ ಇರಲಿಲ್ಲ: ಮುಕೇಶ್‌ ಚೌಧರಿ

11:14 PM Apr 22, 2022 | Team Udayavani |

ಮುಂಬಯಿ: ಮುಂಬೈ ಇಂಡಿಯನ್ಸ್‌ ತಂಡವನ್ನು ಸತತ 7ನೇ ಸೋಲಿನ ಸುಳಿಗೆ ತಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಚೆನ್ನೈ ಸೂಪರ್‌ ಕಿಂಗ್ಸ್‌ನ ಎಡಗೈ ಪೇಸರ್‌ ಮುಕೇಶ್‌ ಚೌಧರಿ. ಅವರು ಮೊದಲ ಓವರ್‌ನಲ್ಲೇ ಆರಂಭಿಕರಾದ ರೋಹಿತ್‌ ಶರ್ಮ ಮತ್ತು ಇಶಾನ್‌ ಕಿಶನ್‌ ಅವರನ್ನು ಶೂನ್ಯಕ್ಕೆ ಕೆಡವಿ ಘಾತಕವಾಗಿ ಗೋಚರಿಸಿದರು. ಈ ಆಘಾತದಿಂದ ಮುಂಬೈ ಚೇತರಿಸಿಕೊಳ್ಳಲೇ ಇಲ್ಲ. ನೂರೈವತ್ತರ ಗಡಿ ದಾಟಿದರೂ ಇದನ್ನು ಉಳಿಸಿ ಕೊಳ್ಳುವಲ್ಲಿ ಯಶಸ್ವಿ ಯಾಗಲಿಲ್ಲ.

Advertisement

ಕೇವಲ 3 ಓವರ್‌ ಎಸೆದ ಮುಕೇಶ್‌ ಚೌಧರಿ ಸಾಧನೆ 19 ರನ್ನಿಗೆ 3 ವಿಕೆಟ್‌. ಅಪಾಯಕಾರಿ ಡಿವಾಲ್ಡ್‌ ಬ್ರೇವಿಸ್‌ ಅವರನ್ನೂ ಮುಕೇಶ್‌ ಪೆವಿಲಿಯನ್ನಿಗೆ ಅಟ್ಟಿದರು. ಈ ಸಾಧನೆಗಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದು ಬಂತು.

ಹೆಚ್ಚಿನ ಜವಾಬ್ದಾರಿ
25 ವರ್ಷದ ಮುಕೇಶ್‌ ಚೌಧರಿ ಮೂಲತಃ ರಾಜಸ್ಥಾನದ ಭಿಲ್ವಾರಾ ದವರು. ಆದರೆ ವಿದ್ಯಾಭ್ಯಾಸ ನಡೆಸಿದ್ದು ಪುಣೆಯಲ್ಲಿ. ಈ ವರ್ಷವಷ್ಟೇ ಐಪಿಎಲ್‌ ಪದಾರ್ಪಣೆ ಮಾಡಿದ್ದರು. ಚೆನ್ನೈ ತಂಡದ ಪ್ರಧಾನ ಬೌಲರ್‌, 14 ಕೋಟಿ ರೂ. ಮೌಲ್ಯದ ದೀಪಕ್‌ ಚಹರ್‌ ಗಾಯಾಳಾಗಿ ಐಪಿಎಲ್‌ನಿಂದ ಬೇರ್ಪಟ್ಟ ಕಾರಣ ಚೌಧರಿ ಹೆಗಲ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿದೆ. ಮುಂಬೈ ಎದುರಿನ ಸಾಧನೆಯ ಬಳಿಕ ಇದನ್ನು ನಿಭಾಯಿಸುವ ವಿಶ್ವಾಸ ಹೆಚ್ಚಿದೆ.

ಈ ಸಂದರ್ಭದಲ್ಲಿ ಮಾತಾಡಿದ ಮುಕೇಶ್‌ ಚೌಧರಿ, “ನಾನು ಕ್ರಿಕೆಟರ್‌ ಆಗುತ್ತೇನೆಂದು ಭಾವಿಸಿದವನೇ ಅಲ್ಲ. ಪುಣೆಯ ಬೋರ್ಡಿಂಗ್‌ ಸ್ಕೂಲ್‌ನಲ್ಲಿದ್ದಾಗ ಕ್ರೀಡೆಗಾಗಿ ದಿನವೂ ಒಂದು ಗಂಟೆಯ ಅವಧಿ ಇರುತ್ತಿತ್ತು. ಈ ವೇಳೆ ಎಲ್ಲ ಕ್ರೀಡೆಯಲ್ಲೂ ತೊಡಗಿಸಿಕೊಳ್ಳುತ್ತಿದ್ದೆ. ಕ್ರಿಕೆಟ್‌ ಕೂಡ ಆಡಲು ಪ್ರಯತ್ನಿಸಿದ್ದೆ…’ ಎಂದರು.

“ಐಪಿಎಲ್‌ನಲ್ಲಿ ಯಶಸ್ಸು ಕಾಣಬೇಕಾ ದರೆ ನಾನು ಪವರ್‌ ಪ್ಲೇ ಅವಧಿಯಲ್ಲಿ ಅತ್ಯುತ್ತಮ ನಿರ್ವಹಣೆ ನೀಡಬೇಕಿತ್ತು. ಇಲ್ಲಿ ಕನಿಷ್ಠ 3 ಓವರ್‌ ಎಸೆಯುವ ಅವಕಾಶ ನನಗೆ ಕಾದಿರುತ್ತಿತ್ತು. ಯಾವುದೇ ಒತ್ತಡ ನನ್ನ ಮೇಲಿಲ್ಲ. ತಂಡದಲ್ಲಿ ಇಂಥ ದೊಡ್ಡ ದೊಡ್ಡ ಆಟಗಾರರಿರುವಾಗ ಸಹಜವಾಗಿಯೇ ಒತ್ತಡ ದೂರಾಗುತ್ತದೆ. ಪ್ರತಿಯೊಂದು ಕ್ಷಣವನ್ನೂ ಸಂಭ್ರಮಿಸುತ್ತಿದ್ದೇನೆ’ ಎಂದರು ಮುಕೇಶ್‌ ಚೌಧರಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next