ಕೊಚ್ಚಿ: ಐಪಿಎಲ್ 2023ರ ಮಿನಿ ಹರಾಜಿನಲ್ಲಿ ನಿರೀಕ್ಷೆಯಂತೆ ಅಂತಾರಾಷ್ಟ್ರೀಯ ಆಲ್ ರೌಂಡರ್ ಗಳು ಭಾರೀ ಹಣ ಬಾಚಿದ್ದಾರೆ. ಸ್ಯಾಮ್ ಕರ್ರನ್ ಅವರು ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಬೆಲೆಗೆ ಮಾರಾಟವಾದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರೆ, ಸ್ಟೋಕ್ಸ್ ಮತ್ತು ಗ್ರೀನ್ ಕೂಡಾ ಉತ್ತಮ ಬೆಲೆ ಪಡೆದರು.
ಆಸೀಸ್ ನ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಮುಂಬೈ ಇಂಡಿಯನ್ಸ್ ತಂಡವು 17.5 ಕೋಟಿ ರೂ ನೀಡಿ ಖರೀದಿ ಮಾಡಿತು.
ಅನುಭವಿ ಆಟಗಾರ ಬೆನ್ ಸ್ಟೋಕ್ಸ್ ಅವರು ಚೆನ್ನೈ ಸೂಪರ್ ಕಿಂಗ್ಸ್ ಪಾಲಾದರು. ಸ್ಟೋಕ್ಸ್ ಗೆ ಆರ್ ಸಿಬಿ, ರಾಜಸ್ಥಾನ, ಹೈದರಾಬಾದ್, ಲಕ್ನೋ ತಂಡಗಳು ಬಿಡ್ ಮಾಡಿದ್ದವು. ಕೊನೆಗೆ 16.25 ಕೋಟಿ ರೂ ಗೆ ಸಿಎಸ್ ಕೆ ಪಾಲಾದರು.
ಇದನ್ನೂ ಓದಿ:ನಾಗ್ಪುರದಲ್ಲಿ ಸೈಕಲ್ ಪೋಲೊ ಆಟಗಾರ್ತಿ ದುರಂತ ಅಂತ್ಯ; ವಿಮಾನ ನಿಲ್ದಾಣದಲ್ಲಿ ಕುಸಿದುಬಿದ್ದ ತಂದೆ
ವೆಸ್ಟ್ ಇಂಡೀಸ್ ನ ಆಲ್ ರೌಂಡರ್ ಜೇಸನ್ ಹೋಲ್ಡರ್ ಅವರು 5.75 ಕೋಟಿ ರೂ ಗೆ ರಾಜಸ್ಥಾನ ಪಾಲಾದರು.
ಜಿಂಬಾಬ್ವೆ ಆಟಗಾರ ಸಿಕಂದರ್ ರಜಾ ಅವರು 50 ಲಕ್ಷ ರೂ ಗೆ ಪಂಜಾಬ್ ತಂಡಕ್ಕೆ, ಒಡೇನ್ ಸ್ಮಿತ್ 50 ಲಕ್ಷ ರೂ ಗೆ ಗುಜರಾತ್ ತಂಡದ ಪಾಲಾದರು.