Advertisement
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಮುಂಬೈ 9 ವಿಕೆಟಿಗೆ 159 ರನ್ ಗಳಿಸಿದರೆ, ಆರ್‌ಸಿಬಿ ಡೆತ್ ಓವರ್‌ಗಳ ಒತ್ತಡವನ್ನು ಮೆಟ್ಟಿನಿಂತು ಅಂತಿಮ ಎಸೆತದಲ್ಲಿ ಗುರಿ ಮುಟ್ಟಿತು.
Related Articles
ರೋಹಿತ್ ಶರ್ಮ ಹಾಗೂ ಇದೇ ಮೊದಲ ಸಲ ಮುಂಬೈ ತಂಡವನ್ನು ಪ್ರತಿನಿಧಿಸಿದ ಆಸ್ಟ್ರೇಲಿಯದ ಕ್ರಿಸ್ ಲಿನ್ ನಿರೀಕ್ಷಿತ ಆರಂಭ ನೀಡಲು ವಿಫಲರಾದರು. 4 ಓವರ್‌ಗಳಿಂದ ಕೇವಲ 24 ರನ್ ಒಟ್ಟುಗೂಡಿಸಿದರು. ಆಗ ಲಿನ್ ಜತೆ ಮಿಕ್ಸಪ್ ಮಾಡಿಕೊಂಡ ರೋಹಿತ್ ರನೌಟಾದರು. ಮುಂಬೈ ಕಪ್ತಾನನ ಗಳಿಕೆ 19 ರನ್ (15 ಎಸೆತ, 1 ಬೌಂಡರಿ, 1 ಸಿಕ್ಸರ್). ಇದರೊಂದಿಗೆ ರೋಹಿತ್ ಶರ್ಮ ಐಪಿಎಲ್‌ನಲ್ಲಿ 11 ಸಲ ರನೌಟ್ ಆದಂತಾಯಿತು. ಜತೆಗೆ ಅತ್ಯಧಿಕ 36 ರನೌಟ್‌ಗಳಲ್ಲಿ ಕಾಣಿಸಿಕೊಂಡರು.
Advertisement
ವನ್‌ಡೌನ್‌ನಲ್ಲಿ ಬಂದ ಸೂರ್ಯಕುಮಾರ್ ಯಾದವ್ ಮೊದಲ ಎಸೆತವನ್ನೇ ಬೌಂಡರಿಗೆ ಬಡಿದಟ್ಟಿ ಆಕ್ರಮಣಕಾರಿ ಆಟದ ಸೂಚನೆಯಿತ್ತರು. ಪವರ್ ಪ್ಲೇ ಅವಧಿಯಲ್ಲಿ ಮುಂಬೈ ಒಂದು ವಿಕೆಟಿಗೆ 41 ರನ್ ಮಾಡಿತು.
ಪವರ್ ಪ್ಲೇ ಬಳಿಕ ಬಿರುಸುಪವರ್ ಪ್ಲೇ ಬಳಿಕ ಮುಂಬೈ ಆಟ ಬಿರುಸುಗೊಂಡಿತು. ಅರ್ಧ ಹಾದಿ ಕ್ರಮಿಸುವ ವೇಳೆ ಮುಂಬೈ ಒಂದು ವಿಕೆಟಿಗೆ 86 ರನ್ ಮಾಡಿತ್ತು. ಆಗಲೇ ಆರ್‌ಸಿಬಿ 6 ಬೌಲರ್‌ಗಳನ್ನು ದಾಳಿಗಿಳಿಸಿತ್ತು. ಲಿನ್-ಸೂರ್ಯಕುಮಾರ್ ಭರ್ತಿ 7 ಓವರ್ ನಿಭಾಯಿಸಿ ದ್ವಿತೀಯ ವಿಕೆಟಿಗೆ ಹತ್ತರ ಸರಾಸರಿಯಲ್ಲಿ 70 ರನ್ ಪೇರಿಸಿದರು. ಆಗ ಜಾಮೀಸನ್ ಮೊದಲ ಐಪಿಎಲ್ ವಿಕೆಟ್ ಬೇಟೆಯಾಡಿದರು. 31 ರನ್ ಮಾಡಿದ ಸೂರ್ಯಕುಮಾರ್, ಎಬಿಡಿಗೆ ಕ್ಯಾಚಿತ್ತು ವಾಪಸಾದರು. ಅವರ 23 ಎಸೆತಗಳ ಆಟದಲ್ಲಿ 4 ಫೋರ್, ಒಂದು ಸಿಕ್ಸರ್ ಸೇರಿತ್ತು. ಅರ್ಧ ಶತಕದ ಹಾದಿಯಲ್ಲಿದ್ದ ಕ್ರಿಸ್ ಲಿನ್ ಓಟ 49 ರನ್ನಿಗೇ ಕೊನೆಗೊಂಡಿತು. ವಾಷಿಂಗ್ಟನ್ ಸುಂದರ್ ತಮ್ಮ ಮೊದಲ ಓವರಿನಲ್ಲೇ ಈ ವಿಕೆಟ್ ಉಡಾಯಿಸಿದರು. 35 ಎಸೆತ ಎದುರಿಸಿದ ಲಿನ್ 4 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ ಅಬ್ಬರಿಸಿದರು. ಮುಂಬೈ ಸರದಿಯಲ್ಲಿ ಲಿನ್ ಅವರದೇ ಸರ್ವಾಧಿಕ ಸ್ಕೋರ್. 15 ಓವರ್ ಅಂತ್ಯಕ್ಕೆ ಮುಂಬೈ ಸ್ಕೋರ್ 3 ವಿಕೆಟಿಗೆ 128ಕ್ಕೆ ಏರಿತ್ತು.
ಡೆತ್ ಓವರ್ ವೇಳೆ ಸಿಡಿಯಲು ಸ್ಕೆಚ್ ಹಾಕಿದ್ದ ಹಾರ್ದಿಕ್ ಪಾಂಡ್ಯ (13) ಅವರಿಗೆ ಹರ್ಷಲ್ ಪಟೇಲ್ ಅಡ್ಡಗಾಲಿಕ್ಕಿದರು. ಇಶಾನ್ ಕಿಶನ್ ಗಳಿಕೆ 28 ರನ್ (19 ಎಸೆತ, 2 ಫೋರ್, 1 ಸಿಕ್ಸರ್). ಈ ವಿಕೆಟ್ ಕೂಡ ಪಟೇಲ್ ಪಾಲಾಯಿತು. ಪೊಲಾರ್ಡ್, ಕೃಣಾಲ್ ಸಿಡಿಯಲು ವಿಫಲರಾದರು. ಸ್ಕೋರ್ ಪಟ್ಟಿ
ಮುಂಬೈ ಇಂಡಿಯನ್ಸ್
ರೋಹಿತ್ ಶರ್ಮ ರನೌಟ್ 19
ಕ್ರಿಸ್ ಲಿನ್ ಸಿ ಮತ್ತು ಬಿ ಸುಂದರ್ 49
ಸೂರ್ಯಕುಮಾರ್ ಸಿ ಎಬಿಡಿ ಬಿ ಜಾಮೀಸನ್ 31
ಇಶಾನ್ ಕಿಶನ್ ಎಲ್‌ಬಿಡಬ್ಲ್ಯು ಬಿ ಹರ್ಷಲ್ 28
ಹಾರ್ದಿಕ್ ಪಾಂಡ್ಯ ಎಲ್‌ಬಿಡಬ್ಲ್ಯು ಬಿ ಹರ್ಷಲ್ 13
ಪೊಲಾರ್ಡ್ ಸಿ ಸುಂದರ್ ಬಿ ಹರ್ಷಲ್ 7
ಕೃಣಾಲ್ ಪಾಂಡ್ಯ ಸಿ ಕ್ರಿಸ್ಟಿಯನ್ ಬಿ ಹರ್ಷಲ್ 7
ಮಾರ್ಕೊ ಜಾನೆÕನ್ ಬಿ ಹರ್ಷಲ್ 0
ರಾಹುಲ್ ಚಹರ್ ರನೌಟ್ 0
ಜಸ್‌ಪ್ರೀತ್ ಬುಮ್ರಾ ಔಟಾಗದೆ 1
ಇತರ 4
ಒಟ್ಟು (20 ಓವರ್‌ಗಳಲ್ಲಿ 9ವಿಕೆಟಿಗೆ) 159
ವಿಕೆಟ್ ಪತನ:1-24, 2-94, 3-105, 4-135, 5-145, 6-158, 7-158, 8-158, 9-159.
ಬೌಲಿಂಗ್:
ಮೊಹಮ್ಮದ್ ಸಿರಾಜ್ 4-0-22-0
ಕೈಲ್ ಜಾಮೀಸನ್ 4-0-27-1
ಯಜುವೇಂದ್ರ ಚಹಲ್ 4-0-41-0
ಶಾಬಾಜ್ ಅಹ್ಮದ್ 1-0-14-0
ಹರ್ಷಲ್ ಪಟೇಲ್ 4-0-27-5
ಡೇನಿಯಲ್ ಕ್ರಿಸ್ಟಿಯನ್ 2-0-21-0
ವಾಷಿಂಗ್ಟನ್ ಸುಂದರ್ 1-0-7-1
ರಾಯಲ್ ಚಾಲೆಂಜರ್ ಬೆಂಗಳೂರು
ಸುಂದರ್ ಸಿ ಲಿನ್ ಬಿ ಕೃಣಾಲ್ 10
ವಿರಾಟ್ ಕೊಹ್ಲಿ ಎಲ್‌ಬಿಡಬ್ಲ್ಯು ಬಿ ಬುಮ್ರಾ 33
ರಜತ್ ಪಾಟೀದರ್ ಬಿ ಬೌಲ್ಟ್ 8
ಗ್ಲೆನ್ ಮ್ಯಾಕ್ಸ್‌ವೆಲ್ ಸಿ ಲಿನ್ ಬಿ ಜಾನ್ಸೆನ್ 39
ಎಬಿ ಡಿ ವಿಲಿಯರ್ ರನೌಟ್ 48
ಶಾಬಾಜ್ ಅಹ್ಮದ್ ಸಿ ಕೃಣಾಲ್ ಬಿ ಜಾನ್ಸೆನ್ 1
ಕ್ರಿಸ್ಟಿಯನ್ ಸಿ ಚಹರ್ ಬಿ ಬುಮ್ರಾ 1
ಕೈಲ್ ಜಾಮೀಸನ್ ರನೌಟ್ 4
ಹರ್ಷಲ್ ಪಟೇಲ್ ಔಟಾಗದೆ 4
ಮೊಹಮ್ಮದ್ ಸಿರಾಜ್ ಔಟಾಗದೆ 0
ಇತರ 12
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 160
ವಿಕೆಟ್ ಪತನ:1-36, 2-46, 3-98, 4-103, 5-106, 6-122, 7-152.
ಬೌಲಿಂಗ್: ಟ್ರೆಂಟ್ ಬೌಲ್ಟ್ 4-0-36-1
ಜಸ್‌ಪ್ರೀತ್ ಬುಮ್ರಾ 4-0-26-2
ಮಾರ್ಕೊ ಜಾನ್ಸೆನ್ 4-0-28-2
ಕೃಣಾಲ್ ಪಾಂಡ್ಯ 4-0-25-1
ರಾಹುಲ್ ಚಹರ್ 4-0-43-0