ಹೊಸದಿಲ್ಲಿ: ಮುಂಬರುವ 2021ರ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಗಾಗಿ ಆಟಗಾರರ ದೊಡ್ಡ ಮಟ್ಟದ ಹರಾಜು ನಡೆಯಲಿದೆ. ಆಗ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ತನ್ನಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡಬಾರದು ಎಂದು ಭಾರತದ ಮಾಜಿ ಆಟಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ.
“ಒಂದುವೇಳೆ ಸಿಎಸ್‌ಕೆ ಫ್ರಾಂಚೈಸಿ ಧೋನಿಯನ್ನು ಉಳಿಸಿಕೊಂಡರೆ 15 ಕೋ.ರೂ. ಕಳೆದುಕೊಳ್ಳಬೇಕಾಗುತ್ತದೆ. ಅದರ ಬದಲು ಧೋನಿಯನ್ನು ಆಕ್ಷನ್ ಪೂಲ್‌ಗೆ
ಇಳಿಸಿ ರೈಟ್ ಟು ಮ್ಯಾಚ್ ಕಾರ್ಡ್ ಮುಖಾಂತರ ಮತ್ತೆ ಖರೀದಿಸುವುದು ಒಳ್ಳೆಯದು’ ಎಂದು ಆಕಾಶ್ ಚೋಪ್ರಾ
ಸಲಹೆ ನೀಡಿದ್ದಾರೆ.
“ಮೆಗಾ ಆಕ್ಷನ್‌ಗಾಗಿ ಧೋನಿ ಅವರನ್ನು ಚೆನ್ನೈ ಬಿಟ್ಟುಕೊಡಬೇಕು. ಮೆಗಾ ಆಕ್ಷನ್ ನಡೆಯುವುದೇ ಹೌದಾದರೆ ನೀವು ಆ ಆಟಗಾರನ ಜತೆ ಮೂರು ವರ್ಷಗಳ ಕಾಲ ಇರಬೇಕಾಗುತ್ತದೆ. ಆದರೆ ಧೋನಿ ನಿಮ್ಮ ಜತೆ ಅಷ್ಟು ವರ್ಷಗಳ ಕಾಲ ಇರುತ್ತಾರಾ? ಧೋನಿಯನ್ನು ತಂಡದಲ್ಲಿ ಉಳಿಸಿಕೊಳ್ಳಬೇಡಿ ಎಂದು ನಾನು ಹೇಳುತ್ತಿಲ್ಲ, ಆದರೆ ನೀವು ಅವರನ್ನು ಉಳಿಸಿಕೊಂಡರೆ 15 ಕೋ.ರೂ. ಕಳೆದುಕೊಳ್ಳುವಿರಿ’ ಎಂದು ಚೋಪ್ರಾ ಹೇಳಿದು.