Advertisement

ಬಯೋ ಬಬಲ್‌ ನೇರ ಪ್ರವೇಶಕ್ಕೆ ಅವಕಾಶ: ಬಿಸಿಸಿಐ

11:34 PM Mar 20, 2021 | Team Udayavani |

ಹೊಸದಿಲ್ಲಿ: ಮುಂದಿನ ತಿಂಗಳು ಆರಂಭವಾಗಲಿರುವ 14ನೇ ಐಪಿಎಲ್ ವೇಳೆ ಆಟಗಾರರಿಗೆ ಒಂದು ಬಯೋ ಬಬಲ್‌ನಿಂದ ಇನ್ನೊಂದು ಬಯೋ ಬಬಲ್‌ಗೆ ನೇರವಾಗಿ ಪ್ರವೇಶಿಸಲು ಬಿಸಿಸಿಐ ಅನುಮತಿ ನೀಡಿದೆ.

Advertisement

ಅದರಂತೆ ಆಟಗಾರರು ಅವರವರ ರಾಷ್ಟ್ರೀಯ ತಂಡಗಳ ಜೈವಿಕ ಸುರಕ್ಷಾ ವಲಯದಿಂದ ಐಪಿಎಲ್‌ ಫ್ರಾಂಚೈಸಿಗಳ ಜೈವಿಕ ಸುರಕ್ಷಾ ವಲಯವನ್ನು ಪ್ರವೇಶಿಸಬಹುದಾಗಿದೆ. ಪ್ರಸ್ತುತ ನಡೆಯುತ್ತಿರುವ ಭಾರತ-ಇಂಗ್ಲೆಂಡ್‌ ಸರಣಿ ಮುಕ್ತಾಯದ ಬಳಿಕ ಎರಡೂ ತಂಡಗಳ ಐಪಿಎಲ್‌ ಆಟಗಾರರು ಕ್ವಾರಂಟೈನ್‌ ಪಾಲಿಸದೆಯೇ ಸೀದಾ ಅವರವರ ಐಪಿಎಲ್‌ ಬಯೋ ಬಬಲ್‌ಗೆ ಹೋಗಬಹುದು ಎಂದು ಬಿಸಿಸಿಐ ತಿಳಿಸಿದೆ.

ಆದರೆ ರಾಷ್ಟ್ರೀಯ ತಂಡದ ಜೈವಿಕ ಸುರಕ್ಷಾ ವಲಯದಲ್ಲಿ ಇಲ್ಲದ ಆಟಗಾರರು, ಮಾಲಕರು, ಫ್ರಾಂಚೈಸಿ ಸದಸ್ಯರು, ವೀಕ್ಷಕ ವಿವರಣೆಗಾರರು ಹಾಗೂ ಇತರ ಸಿಬಂದಿಗೆ 7 ದಿನಗಳ ಕಡ್ಡಾಯ ಕ್ವಾರಂಟೈನ್‌ ಪಾಲಿಸಬೇಕೆಂದು ಬಿಸಿಸಿಐ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next