Advertisement

ಕೊಹ್ಲಿಯನ್ನು RCB ನಾಯಕ ಸ್ಥಾನದಿಂದ ಕೆಳಗಿಳಿಸುವುದು ಪರಿಹಾರವಲ್ಲ: ಸೆಹ್ವಾಗ್ ಹೇಳಿದ್ದೇನು ?

07:27 PM Nov 07, 2020 | Mithun PG |

ನವದೆಹಲಿ: ಈ ಬಾರಿಯೂ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆಯದಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.  ಮಾತ್ರವಲ್ಲದೆ ಕೊಹ್ಲಿ ನಾಯಕತ್ವದ ಕುರಿತು ಹಲವರು ಪ್ರೆಶ್ನೆಯೆತ್ತಿದ್ದಾರೆ.

Advertisement

ಏತನ್ಮಧ್ಯೆ ಮಾಜಿ ಟೀಂ ಇಂಡಿಯಾ ಆಟಗಾರ ಗೌತಮ್ ಗಂಭೀರ್ ಕೂಡ, ಐಪಿಎಲ್ ಕೂಟದಲ್ಲಿ ಇದುವರೆಗೆ ಎಂಟು ಬಾರಿ ಆರ್ ಸಿಬಿ ತಂಡವನ್ನು ಮುನ್ನಡೆಸಿರುವ ವಿರಾಟ್ ಕೊಹ್ಲಿ,  ಒಂದೂ ಕಪ್ ಗೆದ್ದಿಲ್ಲ. ಹೀಗಾಗಿ ಆರ್ ಸಿಬಿಯ ನಾಯಕತ್ವವನ್ನು ವಿರಾಟ್ ತ್ಯೆಜಿಸಬೇಕು ಎಂದು ತಿಳಿಸಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ವಿರೇಂದ್ರ ಸೆಹ್ವಾಗ್, ಕೊಹ್ಲಿ ಒಬ್ಬ ಉತ್ತಮ ನಾಯಕ. ಆದರೇ ಅವರು ಆರ್ ಸಿಬಿ ಎಂಬ ಸಮತೋಲನವಿಲ್ಲದ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅವರನ್ನು ನಾಯಕತ್ವದಿಂದ ಹೊರಗಿಡುವುದು ಶಾಶ್ವತ ಪರಿಹಾರವಲ್ಲ. ಮಾತ್ರವಲ್ಲದೆ ಆರ್ ಸಿಬಿ ಆಡಳಿತ ಮಂಡಳಿ ಇನ್ನೂ ಅತ್ಯುತ್ತಮ ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸುವುದರತ್ತ ಗಮನ ಹರಿಸಬೇಕು ಎಂದಿದ್ದಾರೆ.

ಇದನ್ನೂ ಓದಿ: ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಉಳಿದಿರುವುದು ಇದೊಂದೆ ಮಾರ್ಗ: ಕೊಹ್ಲಿಗೆ ಗೌತಮ್ ‘ಗಂಭೀರ’ ಸಲಹೆ

ವಿರಾಟ್ ಭಾರತೀಯ ಕ್ರಿಕೇಟ್ ತಂಡದ ನಾಯಕರಾಗಿ, ಏಕದಿನ, ಟಿ-ಟ್ವೆಂಟಿ, ಟೆಸ್ಟ್ ಪಂದ್ಯವನ್ನೂ ಗೆಲ್ಲಿಸಿಕೊಟ್ಟಿದ್ದಾರೆ. ಆದರೇ ಆರ್ ಸಿಬಿಯ  ನೇತೃತ್ವ ವಹಿಸಿದ ಮೇಲೆ, ಅವರ ತಂಡ ಉತ್ತಮ ಪ್ರದರ್ಶನ ತೋರುತ್ತಿಲ್ಲ. ನಾಯಕನೊಬ್ಬ ಉತ್ತಮ ತಂಡವನ್ನು ಹೊಂದಿದ್ದಾಗ ಮಾತ್ರ ಗೆಲ್ಲಲು ಸಾಧ್ಯ. ಹೀಗಾಗಿ ಆರ್ ಸಿಬಿ ಆಡಳಿತ ಮಂಡಳಿ, ನಾಯಕತ್ವ ಬದಲಾವಣೆಯತ್ತ ಗಮನಹರಿಸದೆ, ತಂಡವನ್ನು ಬಲಾಢ್ಯವಾಗಿಸುವತ್ತ ಚಿಂತನೆ ನಡೆಸಬೇಕಾಗಿದೆ ಎಂದು ತಿಳಿಸಿದ್ದಾರೆ.

Advertisement

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಕ್ರವಾರ(ನ.6) ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮುಗ್ಗರಿಸಿ ಐಪಿಎಲ್ 13ನೇ ಆವೃತ್ತಿಯ ಕೂಟದಿಂದಲೇ ಹೊರಬಿದ್ದಿತ್ತು. ಆರಂಭದ 10 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಬೆಂಗಳೂರು 7ರಲ್ಲಿ ಜಯಗಳಿಸಿತ್ತು. ನಂತರದಲ್ಲಿ ಸತತ 5 ಪಂದ್ಯ ಸೋಲುವ ಮೂಲಕ ಕಳಪೆ ಪ್ರದರ್ಶನ ನೀಡಿತ್ತು.

ಇದನ್ನೂ ಓದಿ: ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ದೀಪಾವಳಿ ಸಂಭ್ರಮ; ಈ ಬಾರಿ ಬೆಳಗಲಿದೆ 5 ಲಕ್ಷ ದೀಪಗಳು

Advertisement

Udayavani is now on Telegram. Click here to join our channel and stay updated with the latest news.

Next