Advertisement

ಪ್ಲೇಆಫ್ ಹೋರಾಟದಲ್ಲಿ ಪಂಜಾಬ್‌ ಮೇಲುಗೈ

11:48 PM Oct 26, 2020 | mahesh |

ಶಾರ್ಜಾ: ಪ್ಲೇಆಫ್ ಗೆರಲು ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಕಿಂಗ್ಸ್‌ ಇಲವೆನ್‌ ಪಂಜಾಬ್‌ ತಂಡ ಕೋಲ್ಕತ ನೈಟ್‌ ರೈಡರ್ಸ್‌ ವಿರುದ್ಧ ಸೋಮವಾರ 8 ವಿಕೆಟ್‌ಗಳಿಂದ ಸಲೀಸಾಗಿ ಗೆದ್ದಿದೆ. ಇದರಿಂದ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದಿದೆ. ಕೋಲ್ಕತ 5ನೇ ಸ್ಥಾನಕ್ಕೆ ಕುಸಿದಿದೆ. ಸದ್ಯ ಪ್ಲೇಆಫ್ ಹೋರಾಟದಲ್ಲಿ ಪಂಜಾಬ್‌ ಮೇಲುಗೈ ಸಾಧಿಸಿದೆ. ಈ ಎರಡೂ ತಂಡಗಳಿಗೆ ತಲಾ ಎರಡು ಪಂದ್ಯಗಳು ಬಾಕಿಯಿವೆ. ಎರಡನ್ನೂ ಗೆದ್ದ ತಂಡ ಪ್ಲೇಆಫ್ ಗೆರಲಿದೆ.

Advertisement

ಮೊದಲು ಬ್ಯಾಟಿಂಗ್‌ ಮಾಡಿದ ಕೋಲ್ಕತ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 149 ರನ್‌ ಗಳಿಸಿತ್ತು. ಇದನ್ನು ಹಿಂಬಾಲಿಸಿದ ಪಂಜಾಬ್‌ 18.5 ಓವರ್‌ಗಳಲ್ಲಿ 2 ವಿಕೆಟ್‌ಗೆ 150 ರನ್‌ ಗಳಿಸಿತು.

ರನ್‌ ಬೆನ್ನತ್ತಲು ಹೊರಟ ಪಂಜಾಬ್‌ಗ ಕ್ರಿಸ್‌ ಗೇಲ್‌ ಮತ್ತು ಮನ್‌ದೀಪ್‌ ಸಿಂಗ್‌ ತಮ್ಮ ಅದ್ಭುತ ಬ್ಯಾಟಿಂಗ್‌ ಮೂಲಕ ನೆರವಾದರು. ನಾಯಕ ರಾಹುಲ್‌ ಬೇಗನೆ ಔಟಾದರೂ ಈ ಇಬ್ಬರು ತಂಡವನ್ನು ದಡ ಹತ್ತಿಸಿದರು. ಗೇಲ್‌ 29 ಎಸೆತದಲ್ಲಿ 2 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ 51 ರನ್‌ ಚಚ್ಚಿದರು. ಸ್ವಲ್ಪ ನಿಧಾನವಾಗಿ ಆಡಿದರೂ ಸ್ಥಿರವಾಗಿ ಆಡಿದ ಮನ್‌ದೀಪ್‌ 56 ಎಸೆತದಲ್ಲಿ 8 ಬೌಂಡರಿ, 2 ಸಿಕ್ಸರ್‌ಗಳ ಮೂಲಕ 66 ರನ್‌ ಗಳಿಸಿದರು. ಅವರು ತಂದೆಯ ಸಾವಿನ ದುಃಖದಲ್ಲಿದ್ದಾರೆ ಎನ್ನುವುದನ್ನು ಮರೆಯಬಾರದು.

ಕುಸಿದ ಕೋಲ್ಕತ: ಮೊದಲು ಬ್ಯಾಟಿಂಗ್‌ ಮಾಡಿದ ಕೋಲ್ಕತ ತೀವ್ರ ಕುಸಿತ ಅನುಭವಿಸಿತು. ಆದರೆ ಆರಂಭಕಾರ ಶುಬ¾ನ್‌ ಗಿಲ್‌ ಹಾಗೂ ನಾಯಕ ಇಯಾನ್‌ ಮಾರ್ಗನ್‌ ಜವಾಬ್ದಾರಿಯುತ ಬ್ಯಾಟಿಂಗ್‌ ಸಾಹಸದಿಂದ ಹೀನಾಯ ಕುಸಿತದಿಂದ ಪಾರಾಯಿತು. ಗಿಲ್‌ ಬಹುಮೂಲ್ಯ 57 ರನ್‌ ಬಾರಿಸಿದರು. 45 ಎಸೆತಗಳ ಈ ಇನಿಂಗ್ಸ್‌ನಲ್ಲಿ 4 ಸಿಕ್ಸರ್‌, 3 ಬೌಂಡರಿ ಸೇರಿತ್ತು. ಮಾರ್ಗನ್‌ ಗಳಿಕೆ 25 ಎಸೆತಗಳಿಂದ 40 ರನ್‌ (5 ಬೌಂಡರಿ, 2 ಸಿಕ್ಸರ್‌).

ಮೊದಲು ಬೌಲಿಂಗ್‌ ಆಯ್ದುಕೊಳ್ಳುವ ಪಂಜಾಬ್‌ ಕಪ್ತಾನ ಕೆ.ಎಲ್‌.ರಾಹುಲ್‌ ನಿರ್ಧಾರ ಮೊದಲ ಓವರಿನಿಂದಲೇ ಯಶಸ್ಸು ಪಡೆಯುತ್ತ ಹೋಯಿತು. ಕೆಕೆಆರ್‌ 10 ರನ್ನಿಗೆ 3 ವಿಕೆಟ್‌ ಕಳೆದುಕೊಂಡು ತೀವ್ರ ಸಂಕಟಕ್ಕೆ ಸಿಲುಕಿತು. ಈ ಹಂತದಲ್ಲಿ ಆರಂಭಕಾರ ಗಿಲ್‌ ಮತ್ತು ಮಾರ್ಗನ್‌ 81 ರನ್ನುಗಳ ಬಿರುಸಿನ ಜತೆಯಾಟವೊಂದನ್ನು ನಡೆಸಿದರು. ಮಾರ್ಗನ್‌ ಔಟಾದ ಬಳಿಕ ಮತ್ತೆ ಕೋಲ್ಕತ ಕುಸಿಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next