Advertisement

ಧೋನಿಗೆ ಚಿನ್ನದ ಕ್ಯಾಪ್‌, ಜಡೇಜಾಗೆ ಚಿನ್ನದ ಖಡ್ಗ!

10:19 PM Sep 18, 2020 | mahesh |

ಅಬುಧಾಬಿ: ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯಲ್ಲಿ ಗೋಲ್ಡನ್‌ ಬೂಟ್‌, ಗೋಲ್ಡನ್‌ ಬಾಲ್‌, ಗೋಲ್ಡನ್‌ ಗ್ಲೌಸ್‌ ನೀಡುವ ಸಂಪ್ರದಾಯ ಗೊತ್ತು. ಇದಿನ್ನು ಕ್ರಿಕೆಟ್‌ನಲ್ಲೂ ಆರಂಭವಾದರೆ ಆಶ್ಚರ್ಯವಿಲ್ಲ. ಹಾಗೆಯೇ ಇದಕ್ಕೆ ಐಪಿಎಲ್‌ ಕೂಟವೇ ನಾಂದಿ ಹಾಡಿದರೆ ಅಚ್ಚರಿಯಿಲ್ಲ.

Advertisement

ಐಪಿಎಲ್‌ ಆರಂಭದ ಪೂರ್ವಭಾವಿಯಾಗಿ ಗುರುವಾರ ರಾತ್ರಿ ಚೆನ್ನೈ ಸೂಪರ್‌ ಕಿಂಗ್ಸ್‌ ಫ್ರಾಂಚೈಸಿ ವಿಶೇಷ ಭೋಜನ ಕೂಟವೊಂದನ್ನು ಏರ್ಪಡಿಸಿತ್ತು. ಈ ಸಂದರ್ಭದಲ್ಲಿ ತಂಡದ ಸಾಧಕರಿಗೆ ಬಂಗಾರದ ಉಡುಗೊರೆಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ತಂಡದ ಯಶಸ್ವಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರಿಗೆ ಗೋಲ್ಡನ್‌ ಕ್ಯಾಪ್‌ ಪಡೆದರೆ, ಯಶಸ್ವಿ ಎಡಗೈ ಸ್ಪಿನ್ನರ್‌ ರವೀಂದ್ರ ಜಡೇಜ ಅವರಿಗೆ ಚಿನ್ನದ ಖಡ್ಗ ನೀಡಲಾಯಿತು.

ತಂಡದ ಉಳಿದೆಲ್ಲ ಸದಸ್ಯರಿಗೂ ಸ್ಮರಣೀಯ ಉಡುಗೊರೆ ನೀಡಲಾಯಿತು. ಮುಂದೆ ಈ ಸಂಪ್ರದಾಯ ಕೂಟದ ಯಶಸ್ವಿ ಸಾಧಕರಿಗೆ ನೀಡುವ ಪರಿಪಾಠ ಆರಂಭವಾಗಲೂಬಹುದು!

Advertisement

Udayavani is now on Telegram. Click here to join our channel and stay updated with the latest news.

Next