Advertisement

ಕೆ.ಎಲ್.ರಾಹುಲ್ ಭವಿಷ್ಯದಲ್ಲಿ ಭಾರತ ತಂಡದ ಕ್ಯಾಪ್ಟನ್ ಆಗಬಹುದು : ಗಾವಸ್ಕರ್

02:12 PM Sep 19, 2020 | Suhan S |

ನವದೆಹಲಿ : ಈ ಬಾರಿಯ ಐಪಿಎಲ್ ನಲ್ಲಿ ಕೆ.ಎಲ್. ರಾಹುಲ್ ಖಂಡಿತವಾಗಿ ಒಳ್ಳೆ ಪ್ರದರ್ಶನ ನೀಡುವ ವಿಶ್ವಾಸವಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕನಾಗಿ ಜವಬ್ದಾರಿ ನಿಭಾಯಿದ್ರೆ ಅವರು ಮುಂದೆ ಭಾರತ ತಂಡದ ಉಪನಾಯಕನಾಗಿ ಕರ್ತವ್ಯ ನಿಭಾಯಿಸಬಹುದು ಎಂದು ಭಾರತದ ಮಾಜಿ ಕ್ರಿಕೆಟಿಗ ಸುನೀಲ್ ಗಾವಸ್ಕರ್ ಹೇಳಿದ್ದಾರೆ.

Advertisement

ರಾಹುಲ್ ಗೆ ಇದೊಂದು ಒಳ್ಳೆಯ ಅವಕಾಶ, ರನ್ ಗಳಿಸುವುದರ ಜೊತೆ ಜೊತೆಗೆ ತಂಡವನ್ನು ಹೇಗೆ ಮುನ್ನೆಡಿಸಿಕೊಂಡು ಹೋಗುವ ಅವರ ಸಾಮಾರ್ಥ್ಯವನ್ನು ಕಾಣಬಹುದು. ರಾಹುಲ್ ತನ್ನ ಆಟ ಹಾಗೂ ಕಪ್ತಾನನ ಜವಾಬ್ದಾರಿ ಎರಡನ್ನೂ ಸಮಬಲವಾಗಿ ನಿಭಾಯಿದ್ರೆ ಅವರು ಮುಂದೆ ಭಾರತ ತಂಡದ ಉಪನಾಯಕನ ಸ್ಥಾನದಲ್ಲಿ ಕಾಣಬಹುದೆಂದು ಗಾವಸ್ಕರ್ ಹೇಳಿದ್ದಾರೆ.

ಕಿಂಗ್ಸ್ ಇಲೆವೆನ್ ತಂಡದ ಮುಖ್ಯ ತರಬೇತುದಾರ ಅನಿಲ್ ಕುಂಬ್ಳೆ ಅಂಥ ಅನುಭವಿಯ ಬೆಂಬಲೂ ರಾಹುಲ್ ಗೆ ಇರುವುದರಿಂದ ಮುಂದೆ ಭಾರತ ತಂಡ ಕಪ್ತಾನನಾಗಿಯೂ ಕಾಣಿಸಿಕೊಂಡರೆ ಅಚ್ಚರಿಪಡಬೇಕಿಲ್ಲ ಎಂದಿದ್ದಾರೆ. ವಿರಾಟ್ ಕೊಹ್ಲಿ,ರೋಹಿತ್ ಶರ್ಮಾ,ಅಜಿಂಕ್ಯಾ ರಹಾನೆ ಯಂಥ ಆಟಗಾರರು ಇದ್ದಾರೆ ಆದರೆ ಇವರ ಮುಂದೆ ಸಮಿತಿಗೆ ರಾಹುಲ್ ಆಯ್ಕೆಯಾಗಿ ನಿಲ್ಲಬಹುದು ಆದ್ದರಿಂದ ಈ ಬಾರಿಯ ಐಪಿಎಲ್ ನಾಯಕಾಗಿ ಜವಬ್ದಾರಿ ನಿಭಾಯಿಸುವ ರಾಹುಲ್ ಗೆ ಮುಖ್ಯವಾದದ್ದು ಎಂದು ಹೇಳಿದ್ದಾರೆ.

ಕಿಂಗ್ಸ್ ಇಲೆವೆನ್ ಈ ಬಾರಿ ತನ್ನ ಮೊದಲ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಪ್ಪೆಂಬರ್ 20ರಂದು  ಆಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next