Advertisement
ಅಜೇಯ ಶತಕದಾಟದ ಮೂಲಕ ಮಿಂಚಿದ್ದ ರಾಹುಲ್ ತಮ್ಮ ತಂಡ 206 ರನ್ ಗಳ ಬೃಹತ್ ಮೊತ್ತ ಕಲೆಹಾಕುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು.
Related Articles
Advertisement
ರಾಹುಲ್ ಒಬ್ಬರೇ ಬಾರಿಸಿದಷ್ಟು ರನ್ RCB ತಂಡ ಬಾರಿಸಲಾಗದ್ದು ಚಾಲೆಂಜರ್ಸ್ ಬ್ಯಾಟಿಂಗ್ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿತ್ತು.
ಬೃಹತ್ ಮೊತ್ತವನ್ನು ಬೆನ್ನಟ್ಟಲಾರಂಭಿಸಿದ RCB ಬ್ಯಾಟ್ಸ್ ಮನ್ ಗಳು ಯಾವುದೇ ಹಂತದಲ್ಲೂ ಪ್ರತಿರೋಧವನ್ನು ತೋರಲೇ ಇಲ್ಲ. ಕಳೆದ ಪಂದ್ಯದ ಹೀರೋ ದೇವದತ್ತ ಪಡಿಕ್ಕಲ್ ಇಂದು ಎರಡೇ ಎಸೆತ ಎದುರಿಸಿ ಔಟಾದರು. ಅವರ ಕೊಡುಗೆ 01 ರನ್. ಬಳಿಕ ಜೋಸ್ ಫಿಲಿಪ್ (0), ವಿರಾಟ್ ಕೊಹ್ಲಿ (01) ಬೆನ್ನು ಬೆನ್ನಿಗೇ ಔಟಾದಾಗ RCB ಮೊತ್ತ 4 ರನ್!
ಈ ಹಂತದಲ್ಲಿ ಜೊತೆಯಾದ ಅರೋನ್ ಫಿಂಚ್ (20) ಹಾಗೂ ಸ್ಪೆಷಲಿಸ್ಟ್ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ (28) ತಂಡಕ್ಕೆ ಬಲ ತುಂಬುವ ಪ್ರಯತ್ನ ಮಾಡಿದರು. ಇವರಿಬ್ಬರ ಜೊತೆಯಾಟದಲ್ಲಿ 50 ರನ್ ಹರಿದು ಬಂತು.
ಆದರೆ, 8ನೇ ಓವರ್ ನಲ್ಲಿ ಫಿಂಚ್ ಔಟಾಗುವುದರೊಂದಿಗೆ RCB ರನ್ ಚೇಸಿಂಗ್ ಗೆ ಮತ್ತೆ ಗ್ರಹಣ ಹಿಡಿಯಿತು. ನಾಲ್ಕು ರನ್ ಗಳ ಅಂತರದಲ್ಲಿ ಎಬಿಡಿ ಸಹ ಔಟಾದರು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್ (30) ಹಾಗೂ ಶಿವಂ ದುಬೆ (12) ಸ್ವಲ್ಪ ಪ್ರತಿರೋಧ ತೋರಿದರಾದರೂ ಬೆಟ್ಟದಷ್ಟಿದ್ದ ಗುರಿಯ ಮುಂದೆ ಇದು ಸಾಲದಾಯಿತು. ಅಂತಿಮವಾಗಿ RCB 17 ಓವರ್ ಗಳಲ್ಲಿ 109 ರನ್ ಗಳನ್ನು ಗಳಿಸಲಷ್ಟೇ ಶಕ್ತವಾಗಿ 97 ರನ್ ಗಳಿಂದ ಸೋಲೊಪ್ಪಿಕೊಂಡಿತು. ಕಿಂಗ್ಸ್ ಪಂಜಾಬ್ ಪರ ರವಿ ಬಿಷ್ಣೊಯ್ ಮತ್ತು ಮುರುಗನ್ ಅಶ್ವಿನ್ ತಲಾ 3 ವಿಕೆಟ್ ಪಡೆದು ಮಿಂಚಿದರು. ಸೆಲ್ಯೂಟ್ ಬೌಲರ್ ಶೆಲ್ಡನ್ ಕಾಟ್ರೆಲ್ 2 ವಿಕೆಟ್ ಪಡೆದರು. ಮಹಮ್ಮದ್ ಶಮಿ ಮತ್ತು ಮ್ಯಾಕ್ಸ್ ವೆಲ್ ತಲಾ 1 ವಿಕೆಟ್ ಉರುಳಿಸಿದರು.