Advertisement
ಕ್ವಾರಂಟೈನ್ ಅವಧಿಯಲ್ಲಿ ಕ್ರಿಕೆಟಿಗರಿಗೆ, ತಂಡದ ಸಹಾಯಕ ಸಿಬಂದಿ ಮತ್ತು ಅಧಿಕಾರಿಗಳಿಗೆ 3 ಸುತ್ತಿನ ಕೋವಿಡ್-19 ಟೆಸ್ಟ್ ನಡೆಸಲಾಗಿತ್ತು. ಎಲ್ಲರ ವರದಿಯೂ ನೆಗೆಟಿವ್ ಬಂದಿದೆ. ಈ 6 ದಿನಗಳ ಕಾಲ ಯಾವ ಕ್ರಿಕೆಟಿಗರೂ ತಮ್ಮ ಕೊಠಡಿಯಿಂದ ಹೊರಗೆ ಕಾಲಿಟ್ಟಿರಲಿಲ್ಲ.
ಮಂಗಳವಾರವಷ್ಟೇ ಆಗಮಿಸಿದ ರಾಜಸ್ಥಾನ್ ರಾಯಲ್ಸ್ ತಂಡದ ಡೇವಿಡ್ ಮಿಲ್ಲರ್ ಮಾತ್ರ ಅಭ್ಯಾಸದಿಂದ ಹೊರಗುಳಿದರು. ಅವರು 6 ದಿನಗಳ ಕ್ವಾರಂಟೈನ್ ಅವಧಿಯನ್ನು ಪೂರೈಸಬೇಕಿದೆ. ಕಳೆದ ವರ್ಷ ಪಂಜಾಬ್ ತಂಡದಲ್ಲಿದ್ದ ಮಿಲ್ಲರ್ ಈ ಬಾರಿ ರಾಜಸ್ಥಾನ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ದಕ್ಷಿಣ ಆಫ್ರಿಕಾ ಮತ್ತೋರ್ವ ಕ್ರಿಕೆಟಿಗ, ಪಂಜಾಬ್ ತಂಡದ ಸದಸ್ಯ ಹಾರ್ಡಸ್ ವಿಲ್‌ಜೊನ್ ಕೂಡ 6 ದಿನಗಳ ಕ್ವಾರಂಟೈನ್‌ನಲ್ಲಿದ್ದಾರೆ. ಆರ್‌ಸಿಬಿ, ಮುಂಬೈ ಮತ್ತು ಚೆನ್ನೈ ಕ್ರಿಕೆಟಿಗರ ಕ್ವಾರಂಟೈನ್ ಅವಧಿ ಗುರುವಾರಕ್ಕೆ ಕೊನೆಗೊಳ್ಳಲಿದ್ದು, ಅನಂತರ ಅಭ್ಯಾಸಕ್ಕೆ ಇಳಿಯಲಿದ್ದಾರೆ. ಈ ತಂಡಗಳ ಆಟಗಾರರು ಶುಕ್ರವಾರ ಯುಎಇಗೆ ಆಗಮಿಸಿದ್ದರು.