ಮುಂಬಯಿ : ಅರಬ್ಬರ ನಾಡಲ್ಲಿ ಐಪಿಎಲ್ ಅಬ್ಬರ ಆರಂಭವಾಗಿದೆ. ಅಬುಧಾಬಿಯ ಶೇಕ್ ಝಾಯೆದ್ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ – ಚನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ಪಂದ್ಯಾಟದಲ್ಲಿ ಚನ್ನೈ ತಂಡ ಮೇಲುಗೈ ಸಾಧಿಸಿದ್ದು ಆ ಮೂಲಕ ಈ ಬಾರಿಯ ಐಪಿಎಲ್ ಗೆ ರೋಚಕ ಆರಂಭ ಸಿಕ್ಕಂತಾಗಿದೆ.
ಭಾರತ ತಂಡದ ಮಾಜಿ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್ ಮೊದಲ ಐಪಿಎಲ್ ಪಂದ್ಯದ ಬಳಿಕ ಟ್ಚೀಟ್ ವೊಂದನ್ನು ಮಾಡಿದ್ದು ಸದ್ಯ ಆ ಟ್ವೀಟ್ ವೈರಲ್ ಆಗಿದೆ. ಸೆಹ್ವಾಗ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಒಂದಲ್ಲ ಒಂದು ವಿಷಯಕ್ಕೆ ಅವರ ಟ್ವೀಟ್ ಗಳು ವೈರಲ್ ಆಗಿದ್ದುಂಟು.ನಿನ್ನೆ ನಡೆದ ಐಪಿಎಲ್ ನ ಮೊದಲ ಪಂದ್ಯದ ಬಳಿಕ ಸೆಹ್ವಾಗ್ ಪಂದ್ಯದ ಕುರಿತು ಮಾತಾಡುತ್ತಾ ಟ್ವೀಟ್ ವೊಂದನ್ನು ಮಾಡಿದ್ದಾರೆ.
ಐಪಿಎಲ್ ಗೆ ಅಮೋಘ ಆರಂಭ ಸಿಕ್ಕಿದೆ. ಐಪಿಎಲ್ ಉದ್ದಕ್ಕೂ ಇದೇ ರೀತಿಯ ರೋಚಕ ಮುಂದುವರೆಯುವ ಸಾಧ್ಯತೆಯಿದೆ. ರಾಯುಡ್ ಹಾಗೂ ಡುಪ್ಲೆಸಿಸ್ ಅದ್ಭುತವಾಗಿ ಆಡಿದ್ದಾರೆ. ಆದರೆ ಕಡೆಯಲ್ಲಿ ಬಂದ ಸ್ಯಾಮ್ ಕರನ್ ಆಟ ಭಿನ್ನವಾಗಿತ್ತು ಎಂದು ಪ್ರಶಂಸೆ ಮಾಡಿ. ಕೊನೆಯಲ್ಲಿ “Idli beats Vada Pav again” ಎಂದು ಟ್ವೀಟ್ ಮಾಡಿದ್ದಾರೆ.ಸದ್ಯ ಸೆಹ್ವಾಗ್ ಅವರ ಈ ಟ್ವೀಟ್ ವೈರಲ್ ಆಗಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ್ದ ಚೆನ್ನೈ ತಂಡಕ್ಕೆ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ 163 ರ ಗುರಿಯನ್ನು ಬಿಟ್ಟು ಕೊಟ್ಟಿತ್ತು. ಗುರಿ ಬೆನ್ನಟ್ಟಿದ್ದ ಚೆನ್ನೈ ತಂಡ 19.2 ಓವರ್ ನಲ್ಲಿ 5 ವಿಕೆಟ್ ನಷ್ಟದೊಂದಿಗೆ 166 ರನ್ ಪೇರಿಸಿ ಗೆಲುವು ಸಾಧಿಸಿತ್ತು.