Advertisement

IPL 2020: ಪ್ಲೇಯಿಂಗ್ 11 ತಂಡದ ಆಟಗಾರನಿಗೆ ಸೋಂಕು ಇದ್ದರೆ ಬದಲಿ ಆಟಗಾರನಿಗೆ ಅವಕಾಶ

09:43 PM Aug 02, 2020 | Hari Prasad |

ಮುಂಬಯಿ: ಯುಎಇಯಲ್ಲಿ ನಡೆಯಲಿರುವ 2020ನೇ ಐಪಿಎಲ್‌ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಮಹತ್ವದ ಆಡಳಿತ ಮಂಡಳಿ ಸಭೆ ರವಿವಾರ ಏರ್ಪಟ್ಟಿತು.

Advertisement

ಕೆಲವು ಮಹತ್ವದ ಸಂಗತಿಗಳ ಕುರಿತು ಸಭೆಯಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.

ಇದರಲ್ಲಿ ಮುಖ್ಯವಾದುದು ಬದಲಿ ಆಟಗಾರನ ಸೇರ್ಪಡೆ. ಕೋವಿಡ್ 19 ಸೊಂಕಿನಿಂದಾಗಿ ಈ ಪಂದ್ಯಾವಳಿ ಭಾರತದಾಚೆ ಸಾಗುತ್ತಿದೆ.

ಅಕಸ್ಮಾತ್‌ ಪಂದ್ಯದ ವೇಳೆ ಆ ದಿನದ ಪ್ಲೇಯಿಂಗ್ 11 ತಂಡದಲ್ಲಿರುವ ಆಟಗಾರನಲ್ಲಿ ಕೋವಿಡ್ 19 ಪಾಸಿಟಿವ್‌ ದೃಢಪಟ್ಟಲ್ಲಿ ಬದಲಿ ಆಟಗಾರನನ್ನು ಆಡಿಸುವ ನಿರ್ಧಾರಕ್ಕೆ ಬರಲಾಯಿತು.

ಚೀನ ಮೊಬೈಲ್‌ ಕಂಪೆನಿ ‘ವಿವೋ’ ಟೈಟಲ್‌ ಸ್ಪಾನ್ಸರ್‌ಶಿಪ್‌ ಬಗ್ಗೆ ಎಲ್ಲೆಡೆಯಿಂದ ವಿರೋಧ ವ್ಯಕ್ತವಾದರೂ ಇದನ್ನು ಮುಂದುವರಿಸಲು ನಿರ್ಧರಿಸಿದ್ದು ಸಭೆಯ ದಿಟ್ಟ ನಿರ್ಧಾರಗಳಲ್ಲಿ ಒಂದಾಗಿದೆ. ಜತೆಗೆ ಉಳಿದ ಪ್ರಾಯೋಜಕರನ್ನೂ ಉಳಿಸಿಕೊಳ್ಳಲಾಗಿದೆ.

Advertisement

ಇದೇ ವೇಳೆ ಕೂಟದ ಫೈನಲ್‌ ಪಂದ್ಯವನ್ನು ಎರಡು ದಿನ ಮುಂದೂಡಲು ನಿರ್ಧರಿಸಲಾಯಿತು. ಮೊದಲು ಪ್ರಕಟಿಸಿದಂತೆ ಸೆ. 19ರಿಂದ ಆರಂಭಗೊಳ್ಳಲಿರುವ ಐಪಿಎಲ್‌, ನ. 8ರಂದು ಮುಗಿಯುವುದೆಂದಿತ್ತು. ಈಗ ಫೈನಲ್‌ ಪಂದ್ಯವನ್ನು ನ. 10ರಂದು ನಡೆಸಲು ತೀರ್ಮಾನಿಸಲಾಗಿದೆ. ಐಪಿಎಲ್‌ ಇತಿಹಾಸದಲ್ಲಿ ರವಿವಾರದಂದು ಫೈನಲ್‌ ತಪ್ಪಿದ ಅಪರೂಪದ ನಿದರ್ಶನ ಇದಾಗಿದೆ.

ತಂಡವೊಂದರ ಆಟಗಾರರ ಸಂಖ್ಯೆಯನ್ನು 24ಕ್ಕೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ. ಆಟಗಾರರೆಲ್ಲ ಪ್ರತ್ಯೇಕ ಖಾಸಗಿ ವಿಮಾನಗಳಲ್ಲಿ ಆ. 26ರ ಒಳಗೆ ಯುಎಇ ತಲುಪಬೇಕಿದೆ.

ವೀಕ್ಷಕರಿಗೆ ಅವಕಾಶ?
ಪಂದ್ಯಗಳಿಗೆ ವೀಕ್ಷಕರಿಗೆ ಅವಕಾಶ ಕಲ್ಪಿಸುವುದು ಯುಎಇ ಕ್ರಿಕೆಟ್‌ ಮಂಡಳಿಗೆ ಬಿಟ್ಟ ವಿಚಾರವಾದರೂ, ಕೂಟದ ಆರಂಭದಲ್ಲಿ ಪ್ರೇಕ್ಷಕರಿಗೆ ನಿರ್ಬಂಧ ಮುಂದುವರಿಯುವ ಸಾಧ್ಯತೆಯಿದ್ದು, ಒಂದು ಹಂತದ ಬಳಿಕ ಸೀಮಿತ ವೀಕ್ಷಕರಿಗೆ ಅವಕಾಶವನ್ನು ಕಲ್ಪಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next