Advertisement
ವಾರ್ನರ್ ಸಾರಥ್ಯದ ಹೈದರಾಬಾದ್ ತಂಡ ಶುಕ್ರವಾರದ ಪಂದ್ಯದಲ್ಲಿ ಚೆನ್ನೈ ವಿರುದ್ಧ ಆರಂಭಿಕ ಆಘಾತ ಎದುರಿಸಿದ್ದರೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಪ್ರಿಯಮ್ ಗರ್ಗ್ ಮತ್ತು ಅಭಿಷೇಕ್ ಶರ್ಮ ಜವಾಬ್ದಾರಿಯುತ ಆಟವಾಡಿ ತಂಡದ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವಹಿದ್ದರು ಹೀಗಾಗಿ ಈ ಪಂದ್ಯದಲ್ಲಿಯೂ ಇವರ ಮೇಲೆ ತಂಡ ಹೆಚ್ಚು ಭರವಸೆ ಇರಿಸಿದೆ. ಕಳೆದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಸ್ನಾಯು ಸೆಳೆತಕ್ಕೆ ಸಿಲುಕಿ ಪಂದ್ಯದಿಂದ ಹೊರನಡೆದಿದ್ದರು ಈ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ. ವಾರ್ನರ್, ಬೇರ್‌ಸ್ಟೊ, ಮನೀಷ್ ಪಾಂಡೆ ಹಿಂದಿನ ಐಪಿಎಲ್‌ನಲ್ಲಿ ತೋರಿದ ಚಾರ್ಮ್ ತೋರುವಲ್ಲಿ ಈ ಬಾರಿ ಸಂಪೂರ್ಣ ವಿಫಲರಾಗುತ್ತಿದ್ದಾರೆ. ಈ ಪಂದ್ಯದಲ್ಲಿ ಸಿಡಿದು ನಿಲ್ಲುವ ಅನಿವಾರ್ಯ ಇವರ ಮೇಲಿದೆ.
ಮುಂಬೈ ಮೇಲ್ನೋಟಕ್ಕೆ ಹೈದರಾ ಬಾದ್‌ಗಿಂತ ಬಲಿಷ್ಠ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ಬ್ಯಾಟಿಂಗ್‌ನಲ್ಲಿ ನಾಯಕ ರೋಹಿತ್ ಶರ್ಮ, ಕ್ವಿಂಟನ್ ಡಿ ಕಾಕ್, ಪೊಲಾರ್ಡ್, ಪಾಂಡ್ಯ ಬ್ರದರ್ಸ್, ಕಿಶನ್ , ಬೌಲಿಂಗ್‌ನಲ್ಲಿ ಬುಮ್ರಾ, ರಾಹುಲ್ ಚಹರ್, ಜೇಮ್ಸ್ ಪ್ಯಾಟಿನ್ಸನ್, ಟ್ರೆಂಟ್ ಬೌಲ್ಟ್ ಅವರೆಲ್ಲ ಮುಂಬೈ ತಂಡಕ್ಕೆ ಶಕ್ತಿ ತುಂಬಿದ್ದಾರೆ.