Advertisement

ಕೆಕೆಆರ್‌ ಎಚ್ಚರಿಕೆ ಆಟ; ರಾಯಲ್ಸ್‌ಗೆ 175 ರನ್‌ ಗುರಿ

11:56 PM Sep 30, 2020 | mahesh |

ಅಬುಧಾಬಿ: ರಾಜಸ್ಥಾನ್‌ ರಾಯಲ್ಸ್‌ ದಾಳಿಯನ್ನು ಬಹಳ ಎಚ್ಚರಿಕೆಯಿಂದ ನಿಭಾಯಿಸಿದ ಕೋಲ್ಕತಾ ನೈಟ್‌ರೈಡರ್ ಬುಧವಾರದ ಐಪಿಎಲ್‌ ಮುಖಾಮುಖಿಯಲ್ಲಿ 6 ವಿಕೆಟಿಗೆ 174 ರನ್‌ ಪೇರಿಸಿ ಸವಾಲೊಡ್ಡಿದೆ.

Advertisement

ಕೋಲ್ಕತಾ ಬ್ಯಾಟಿಂಗ್‌ ಅಬ್ಬರದಿಂದೇನೂ ಕೂಡಿರಲಿಲ್ಲ. ಯಾರಿಂದಲೂ ಅರ್ಧ ಶತಕ ದಾಖಲಾಗಲಿಲ್ಲ. 47 ರನ್‌ ಮಾಡಿದ ಶುಭಮನ್‌ ಗಿಲ್‌ ಅವರದೇ ಹೆಚ್ಚಿನ ಗಳಿಕೆ. ಇಯಾನ್‌ ಮಾರ್ಗನ್‌ ಅಜೇಯ 34 ರನ್‌ ಮಾಡಿದರು.

ಜೋಫ್ರ ಆರ್ಚರ್‌ ಮೊದಲ ಓವರಿನಲ್ಲಿ ಕೇವಲ ಒಂದು ರನ್‌ ನೀಡಿ ಕಡಿವಾಣ ಹಾಕುವ ಸೂಚನೆ ನೀಡಿದರು. ಸುನೀಲ್‌ ನಾರಾಯಣ್‌ ಹಿಂದಿನ ಚಾರ್ಮ್ ತೋರುವಲ್ಲಿ ವಿಫ‌ಲರಾದರು. 5ನೇ ಓವರ್‌ನಲ್ಲಿ ಇವರ ವಿಕೆಟ್‌ ಬೀಳುವಾಗ ಕೆಕೆಆರ್‌ ಕೇವಲ 36 ರನ್‌ ಮಾಡಿತ್ತು. ನಾರಾಯಣ್‌ ಗಳಿಕೆ 14 ಎಸೆತಗಳಿಂದ 15 ರನ್‌.

ಅನಂತರ ಬಂದ ನಿತೀಶ್‌ ರಾಣಾ ಕೂಡ ಪ್ರತಾಪ ತೋರಿಸಲಿಲ್ಲ. 17 ಎಸೆತಗಳಿಂದ 22 ರನ್‌ (2 ಬೌಂಡರಿ, 1 ಸಿಕ್ಸರ್‌) ಮಾಡಿದ ಅವರನ್ನು ತೆವಾತಿಯಾ ತಮ್ಮ ಮೊದಲ ಓವರಿನಲ್ಲೇ ವಾಪಸ್‌ ಕಳುಹಿಸಿದರು. ಆದರೆ ಕಳೆದ ಪಂದ್ಯದ ಹೀರೋ ಶುಭಮನ್‌ ಗಿಲ್‌ ಇನ್ನೊಂದು ಬದಿಯಲ್ಲಿ ಕ್ರೀಸ್‌ ಆಕ್ರಮಿಸಿಕೊಂಡಿದ್ದರು.

ಗಿಲ್‌ ಆಟ 12ನೇ ಓವರ್‌ ತನಕ ಸಾಗಿತು. ಆಗ ದ್ವಿತೀಯ ಸ್ಪೆಲ್‌ ದಾಳಿಗಿಳಿದ ಆರ್ಚರ್‌, ಕೆಕೆಆರ್‌ ಆರಂಭಿಕನ ರಿಟರ್ನ್ ಕ್ಯಾಚ್‌ ಪಡೆಯುವಲ್ಲಿ ಯಶಸ್ವಿಯಾದರು. 34 ಎಸೆತ ಎದುರಿಸಿದ ಗಿಲ್‌ 5 ಬೌಂಡರಿ, ಒಂದು ಸಿಕ್ಸರ್‌ ನೆರವಿನಿಂದ 47 ರನ್‌ ಹೊಡೆದರು. ಪವರ್‌ ಪ್ಲೇಯಲ್ಲಿ ಒಂದಕ್ಕೆ 42 ರನ್‌ ಮಾಡಿದ ಕೋಲ್ಕತಾ, 13ನೇ ಓವರಿನಲ್ಲಿ ನೂರರ ಗಡಿ ಮುಟ್ಟಿತು.

Advertisement

ಇದನ್ನೂ ಓದಿ: ಕೈಕೊಟ್ಟ ಬ್ಯಾಟಿಂಗ್ : ನೈಟ್ ರೈಡರ್ಸ್ ವಿರುದ್ಧ 37 ರನ್ನಿನಿಂದ ಸೋತ ರಾಜಸ್ಥಾನ ರಾಯಲ್ಸ್

ಆರ್ಚರ್‌ ಆಕ್ರಮಣ
ಆರ್ಚರ್‌ 2 ಓವರ್‌ಗಳಲ್ಲಿ ಕೇವಲ 2 ರನ್‌ ನೀಡಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದರು. 3ನೇ ಓವರಿನಲ್ಲಿ ದಿನೇಶ್‌ ಕಾರ್ತಿಕ್‌ ವಿಕೆಟ್‌ ಹಾರಿಸುವ ಮೂಲಕ ಇದನ್ನು ನಿಜಗೊಳಿಸಿದರು. ಕೆಕೆಆರ್‌ ಕಪ್ತಾನನ ಗಳಿಕೆ ಕೇವಲ ಒಂದು ರನ್‌. ಈ ವರೆಗೆ ಸಿಡಿಯಲು ವಿಫ‌ಲರಾಗಿದ್ದ ಆ್ಯಂಡ್ರೆ ರಸೆಲ್‌ ಇಲ್ಲಿ ತಮ್ಮ ಮೊದಲ ಸಿಕ್ಸರ್‌ ಎತ್ತುವಲ್ಲಿ ಯಶಸ್ವಿಯಾದರು. ಆದರೆ ಕ್ರೀಸ್‌ ಆಕ್ರಮಿಸಿಕೊಳ್ಳಲು ಸಾಧ್ಯವಾಗಲಿಲ್ಲ. 4ನೇ ಸಿಕ್ಸರ್‌ ಬಾರಿಸುವ ಯತ್ನದಲ್ಲಿ ಬೌಂಡರಿ ಲೈನ್‌ನಲ್ಲಿದ್ದ ಉನಾದ್ಕತ್‌ಗೆ ಕ್ಯಾಚ್‌ ನೀಡಿ 24 ರನ್ನಿಗೆ ಆಟ ಮುಗಿಸಿದರು (14 ಎಸೆತ, 3 ಸಿಕ್ಸರ್‌). ಈ ವಿಕೆಟ್‌ ರಜಪೂತ್‌ ಬುಟ್ಟಿಗೆ ಬಿತ್ತು. 6ನೇ ಕ್ರಮಾಂಕದಲ್ಲಿ ಆಡಲು ಬಂದ ಮಾರ್ಗನ್‌ 23 ಎಸೆತಗಳಿಂದ 34 ರನ್‌ ಮಾಡಿ ಔಟಾಗದೆ ಉಳಿದರು (1 ಬೌಂಡರಿ, 2 ಸಿಕ್ಸರ್‌).

Advertisement

Udayavani is now on Telegram. Click here to join our channel and stay updated with the latest news.

Next