Advertisement
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಂಗಳವಾರ ಕೂಟದ ಮೊದಲ ಎರಡು ವಾರಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ವಾರಗಳಲ್ಲಿ ಒಟ್ಟು 17 ಪಂದ್ಯಗಳು ನಡೆಯಲಿವೆ. 2019ರ ಲೋಕಾಸಭಾ ಚುನಾವಣೆಯ ದಿನಾಂಕ ಪ್ರಕಟಗೊಳ್ಳುವವರೆಗೆ ಈ ವೇಳಾಪಟ್ಟಿ ಹೀಗೆಯೇ ಇರಲಿದ್ದು, ಚುನಾವಣಾ ದಿನಾಂಕ ಪ್ರಕಟಗೊಂಡ ಬಳಿಕ ವೇಳಾಪಟ್ಟಿಯಲ್ಲಿ ಮಾಡಬೇಕಾದ ಬದಲಾವಣೆ ಹಾಗೂ ಉಳಿದ ಪಂದ್ಯಗಳ ವೇಳಾಪಟ್ಟಿಗಳನ್ನು ಬಿಸಿಸಿಐ ಪ್ರಕಟಿಸಲಿದೆ.ಮೊದಲ 17 ಪಂದ್ಯಗಳ ಆಯೋಜನೆಗೆ ಅನುಮತಿ ದೊರಕಿದ್ದು, ಒಟ್ಟು 8 ಮೈದಾನಗಳಲ್ಲಿ ಈ 17 ಪಂದ್ಯಗಳು ನಡೆಯಲಿವೆ. 7 ಮೈದಾನಗಳಲ್ಲಿ ತಲಾ 2 ಪಂದ್ಯಗಳು ನಡೆದರೆ, ಆತಿಥೇಯ ದಿಲ್ಲಿಯಲ್ಲಿ 3 ಪಂದ್ಯಗಳನ್ನು ಆಡಲಾಗುತ್ತದೆ. ಎಲ್ಲ ತಂಡಗಳು ಕನಿಷ್ಠ 4 ಪಂದ್ಯಗಳನ್ನು ಆಡಲಿವೆ. ದಿಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಜಾಲೆಂಜರ್ ಬೆಂಗಳೂರು ತಲಾ 5 ಪಂದ್ಯಗಳನ್ನು ಆಡಲಿವೆ. ಪ್ರತಿಯೊಂದು ತಂಡಗಳು ತವರಿನಲ್ಲಿ ಕನಿಷ್ಠ 2 ಮತ್ತು ಬೇರೆ ಮೈದಾನಗಳಲ್ಲಿ 2 ಪಂದ್ಯಗಳನ್ನು ಆಡಲಿವೆ. ದಿಲ್ಲಿ ಕ್ಯಾಪಿಟಲ್ಸ್ ತವರಿನಲ್ಲಿ 3 ಪಂದ್ಯಗಳನ್ನಾಡಿದರೆ, ಬೆಂಗಳೂರು ತವರಿನ ಹೊರಗೆ 3 ಪಂದ್ಯಗಳನ್ನು ಆಡಲಿದೆ.