Advertisement

ಐಪಿಎಲ್‌-2019 ಧವನ್‌ಗೆ ತೆರೆಯಿತು ಡೆಲ್ಲಿ ಬಾಗಿಲು

06:25 AM Nov 16, 2018 | Team Udayavani |

ಹೊಸದಿಲ್ಲಿ: ಮುಂದಿನ ಋತುವಿನ ಐಪಿಎಲ್‌ ಟಿ20 ಕ್ರಿಕೆಟ್‌ ಲೀಗ್‌ನಲ್ಲಿ ಶಿಖರ್‌ ಧವನ್‌ ತಮ್ಮ ತವರಾದ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ಪರ ಆಡಲಿದ್ದಾರೆ. ಧವನ್‌ ಹಿಂದಿನ ಆವೃತ್ತಿಗಳಲ್ಲಿ ಸನ್‌ರೈಸರ್ ಹೈದರಾಬಾದ್‌ ತಂಡವನ್ನು ಪ್ರತಿನಿಧಿಸಿದ್ದರು.

Advertisement

ಸನ್‌ರೈಸರ್ ಜತೆ  ಶಿಖರ್‌ ಧವನ್‌ ವೇತನ ಸಂಬಂಧಿತ ವಿಷಯದಲ್ಲಿ ಅಸಮಾಧಾನ ಹೊಂದಿದ್ದರು. ಹೀಗಾಗಿ ಅವರನ್ನು ಬಿಡುಗಡೆ ಮಾಡಲು ಸನ್‌ರೈಸರ್ ನಿರ್ಧರಿಸಿತ್ತು. ಮೊದಲು ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಧವನ್‌ ಆಡುತ್ತಾರೆ ಎನ್ನಲಾಗಿತ್ತು. ಬಳಿಕ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡವನ್ನು ಸೇರಲಿದ್ದಾರೆ ಎನ್ನುವ ಸುದ್ದಿ ಕೂಡ ಹಬ್ಬಿತ್ತು. ಇದೀಗ ಧವನ್‌ ಡೆಲ್ಲಿ ಸೇರುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆಬಿದ್ದಿದೆ. ಧವನ್‌ ಅವರನ್ನು ಭಾರೀ ಮೊತ್ತ ನೀಡಿ ಡೆಲ್ಲಿ ತನ್ನೆಡೆಗೆ ಸೆಳೆದುಕೊಂಡಿದೆ ಎನ್ನಲಾಗಿದೆ. ಆದರೆ ಆ ಮೊತ್ತವೆಷ್ಟು ಎನ್ನುವುದನ್ನು ತಂಡದ ಆಡಳಿತ ಮಂಡಳಿ ಬಹಿರಂಗಪಡಿಸಿಲ್ಲ.

ಮುಂಬೈ: 10 ಮಂದಿ ಹೊರಕ್ಕೆ
ಕೆಲವು ತಂಡಗಳು ಮುಂದಿನ ಆವೃತ್ತಿ ಐಪಿಎಲ್‌ನಲ್ಲಿ ಉಳಿಕೆ ಆಗಿರುವ ಹಾಗೂ ಹೊರ ಹೋಗಿರುವ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಹಿಂದಿನ ಆವೃತ್ತಿಯಲ್ಲಿ ಆರ್‌ಸಿಬಿ ಪರ ಆಡಿದ್ದ ವಿಕೆಟ್‌ ಕೀಪರ್‌ ಕಮ್‌ ಬ್ಯಾಟ್ಸ್‌ಮನ್‌ ಕ್ವಿಂಟನ್‌ ಡಿ ಕಾಕ್‌ ಅವರನ್ನು ಮುಂಬೈ ಇಂಡಿಯನ್ಸ್‌ ಖರೀದಿಸಿದೆ. ಮುಂಬೈ ತಂಡದಿಂದ ಮುಸ್ತಾಫಿಜುರ್‌ ರೆಹಮಾನ್‌, ಶ್ರೀಲಂಕಾದ ಅಖೀಲ ಧನಂಜಯ ಸೇರಿದಂತೆ 10 ಆಟಗಾರರನ್ನು ಕೈಬಿಡಲಾಗಿದೆ.

ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡ  ಮಾರ್ಕಸ್‌ ಸ್ಟೊಯಿನಿಸ್‌ ಬದಲು ಆರ್‌ಸಿಬಿಯ ಮನ್‌ದೀಪ್‌ ಸಿಂಗ್‌ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಆದರೆ ಸ್ಟೊಯಿನಿಸ್‌ ಅವರನ್ನು ಬಿಡಲು ಪಂಜಾಬ್‌ಗ ಈಗಲೂ ಇಷ್ಟವಿಲ್ಲ. ಮುಂದೆ ರೈಟ್‌ ಟು ಮ್ಯಾಚ್‌ ಕಾರ್ಡ್‌ ಬಳಸಿ ಅವರನ್ನು ಉಳಿಸಿಕೊಳ್ಳಲು ಚಿಂತನೆ ನಡೆಸಿದೆ ಎನ್ನಲಾಗಿದೆ.

ಕೆಕೆಆರ್‌ ಮಿಚೆಲ್‌ ಸ್ಟಾರ್ಕ್‌ ಅವರನ್ನು ಬಿಡುಗಡೆ ಮಾಡಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ 21 ಆಟಗಾರರನ್ನು ಉಳಿಸಿಕೊಂಡಿದೆ. ಮಾರ್ಕ್‌ವುಡ್‌, ಕಾನಿಷ್‌R ಸೇತ್‌ ಹಾಗೂ ಕ್ಷಿತಿಜ್‌ ಶರ್ಮ ಹೊರಬಿದ್ದ ಆಟಗಾರರಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next