Advertisement

ಇಂದು ಸೋಲುಂಡವರ ಗುದ್ದಾಟ

06:15 AM Apr 17, 2018 | Team Udayavani |

ಮುಂಬೈ: ಇನ್ನೂ ಗೆಲುವಿನ ಖಾತೆ ತೆರೆಯದ ಮುಂಬೈ ಇಂಡಿಯನ್ಸ್‌. ಇನ್ನೊಂದೆಡೆ ರಾಜಸ್ಥಾನ್‌ ವಿರುದ್ಧ ಸೋಲುಂಡ ರಾಯಲ್‌ ಚಾಲೆಂಜರ್ ಬೆಂಗಳೂರು (ಆರ್‌ಸಿಬಿ). ಇದೀಗ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಮಂಗಳವಾರ ಸೆಣಸಲು ಸಜ್ಜಾಗಿವೆ.

Advertisement

ಸದ್ಯ ಎರಡೂ ತಂಡಗಳು ಹಿಂದಿನ ಪಂದ್ಯಗಳಲ್ಲಿ ಸೋಲಿನ ಸುಳಿಗೆ ಸಿಲುಕಿ ಮುಳುಗಿದ್ದೇ ಆಗಿರುವುದರಿಂದ ಸಮಾನ ಮನಸ್ಕರು ಎನ್ನಬಹುದು. ಆದರೆ ಆರ್‌ಸಿಬಿ ಆಡಿರುವ ಮೂರು ಪಂದ್ಯಗಳಲ್ಲಿ ಒಂದನ್ನು ಗೆದ್ದಿದೆ ಎನ್ನುವುದೇ ಬೆಂಗಳೂರು ಅಭಿಮಾನಿಗಳಿಗೆ ಕೊಂಚ ಸಮಾಧಾನದ ವಿಷಯ. ಆದರೆ ಹಾಲಿ ಚಾಂಪಿಯನ್ನರ ಪರಿಸ್ಥಿತಿ ಹಾಗಿಲ್ಲ. ರೋಹಿತ್‌ ಪಡೆ ಇನ್ನೂ ಗೆಲುವಿನ ಖಾತೆಯನ್ನೇ ತೆರೆದಿಲ್ಲ. ಆಡಿರುವ ಮೂರೂ ಪಂದ್ಯಗಳನ್ನು ಸೋತಿದೆ. ಕೊನೆಯ ಕ್ಷಣದಲ್ಲಾಗುವ ಎಡವಟ್ಟುಗಳಿಂದ ಮುಂಬೈ ಸೋಲು ಅನುಭವಿಸುತ್ತಿದೆ. ಹೀಗಾಗಿ ಮುಂಬೈ ಇಂಡಿಯನ್ಸ್‌ ಗೆಲುವಿನ ಲಯಕ್ಕೆ ಬರಲೇಬೇಕಿದೆ. ಜತೆಗೆ ತವರಿನಲ್ಲಿ ಆಡುವುದರಿಂದ ಮುಂಬೈಗೆ ಒತ್ತಡವೂ ಹೆಚ್ಚಿದೆ.

ಕೊಹ್ಲಿ ಪಡೆಗೆ ಬೌಲಿಂಗ್‌ನದ್ದೇ ಚಿಂತೆ: ಬೆಂಗಳೂರು ತಂಡಕ್ಕೆ ಬ್ಯಾಟಿಂಗ್‌ಗಿಂತ ಬೌಲಿಂಗ್‌ನದ್ದೇ ದೊಡ್ಡ ಚಿಂತೆಯಾಗಿದೆ. ಖ್ಯಾತ ಬೌಲರ್‌ಗಳು ಇಲ್ಲದಿರುವುದೇ ಆರ್‌ಸಿಬಿ ಒತ್ತಡಕ್ಕೆ ಕಾರಣ. ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಉಮೇಶ್‌ ಯಾದವ್‌ ಮಿಂಚಿನ ದಾಳಿಯಿಂದ ತಂಡಕ್ಕೆ ನೆರವಾಗಿದ್ದರು. ಆದರೆ ರಾಜಸ್ಥಾನ್‌ ವಿರುದ್ಧ ಇವರ ಬೌಲಿಂಗ್‌ ನಡೆದಿರಲಿಲ್ಲ. ಸಂಜು ಸಿಡಿಲಬ್ಬರಕ್ಕೆ ಆರ್‌ಸಿಬಿ ಬೌಲರ್‌ಗಳೆಲ್ಲ ಬಿಲ ಸೇರಿಕೊಂಡಿದ್ದರು. ಮುಂಬೈ ವಿರುದ್ಧ ಎಚ್ಚತ್ತು ಬೌಲಿಂಗ್‌ ಪ್ರದರ್ಶನ ನೀಡದಿದ್ದೆರೆ ಮತ್ತೂಂದು ದೊಡ್ಡ ರನ್‌ ಬಿಟ್ಟುಕೊಡಬೇಕಾಗಿ ಬರಬಹುದು. ಹೀಗಾಗಿ ಕೊಹ್ಲಿ ಪಡೆ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಾದ ಅವಶ್ಯಕತೆಯಿದೆ.

ಮುಖಾಮುಖೀ
ಒಟ್ಟು ಪಂದ್ಯ: 23
ಮುಂಬೈ ಗೆಲುವು: 15
ಬೆಂಗಳೂರು ಗೆಲುವು: 08

ಆರ್‌ಸಿಬಿ ಬಲ
– ಕೊಹ್ಲಿ, ಎಬಿಡಿ, ಡಿ ಕಾಕ್‌ರಂತಹ ಅಗ್ರ ಬ್ಯಾಟ್ಸ್‌ಮನ್‌ಗಳು ದೌರ್ಬಲ್ಯ
– ಒಟ್ಟಾರೆ ಬೌಲಿಂಗ್‌ನಲ್ಲಿ ದುರ್ಬಲವಾದ ಪ್ರದರ್ಶನ

Advertisement

ಮುಂಬೈಬಲ
– ಸೂರ್ಯಕುಮಾರ್‌ ಯಾದವ್‌, ಇಶಾನ್‌ ಕಿಶಾನ್‌ ಬ್ಯಾಟಿಂಗ್‌ ಫಾರ್ಮ್ನಲ್ಲಿರುವುದು

ದೌರ್ಬಲ್ಯ:
– ಕೊನೆಯ ಕ್ಷಣದಲ್ಲಿ ಒತ್ತಡಕ್ಕೆ ಒಳಗಾಗಿ ಪಂದ್ಯವನ್ನು ಕಳೆದುಕೊಳ್ಳುತ್ತಿರುವುದು.

ಅಂಕಣ ಹೇಗಿದೆ?
ರನ್‌ ಮಳೆ ಸುರಿಸುವುದು ಈ ಪಿಚ್‌ನಲ್ಲಿ ಕಷ್ಟವಾಗಲಾರದು. 160-190 ರನ್‌ ನಿರೀಕ್ಷಿಸಬಹುದು. ಟಾಸ್‌ ಗೆದ್ದ ತಂಡ ಮೊದಲು ಫೀಲ್ಡಿಂಗ್‌ ಆಯ್ದುಕೊಂಡರೆ ಉತ್ತಮ ನಿರ್ಧಾರ ಎನಿಸಿಕೊಳ್ಳಲಿದೆ.

ಅಗ್ರ ತಾರೆಯರು
ಆರ್‌ಸಿಬಿ:
ವಿರಾಟ್‌ ಕೊಹ್ಲಿ, ಎಬಿಡಿ ವಿಲಿಯರ್, ಬ್ರೆಂಡನ್‌ ಮೆಕಲಂ
ಮುಂಬೈ: ರೋಹಿತ್‌ ಶರ್ಮ, ಕೈರನ್‌ ಪೋಲಾರ್ಡ್‌, ಜಸ್‌ಪ್ರೀತ್‌ ಬುಮ್ರಾ

ಸ್ಥಳ: ಮುಂಬೈ, ಸಮಯ: ರಾತ್ರಿ:8.00ಕ್ಕೆ,
ನೇರ ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್ 1, ಸುವರ್ಣ ಪ್ಲಸ್‌ (ಕನ್ನಡ)

Advertisement

Udayavani is now on Telegram. Click here to join our channel and stay updated with the latest news.

Next