Advertisement

ಡೆಲ್ಲಿ ಡೇರ್ ಡೆವಿಲ್ಸ್ ನಾಯಕತ್ವಕ್ಕೆ ಗೌತಮ್ ಗಂಭೀರ್ ಗುಡ್ ಬೈ!

04:17 PM Apr 25, 2018 | Sharanya Alva |

ನವದೆಹಲಿ: ಐಪಿಎಲ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಕಳಪೆ ಪ್ರದರ್ಶನ ನೀಡಿದ್ದ ಹಿನ್ನೆಲೆಯಲ್ಲಿ ತಂಡದ ನಾಯಕತ್ವಕ್ಕೆ ಗೌತಮ್ ಗಂಭೀರ್ ಬುಧವಾರ ಗುಡ್ ಬೈ ಹೇಳಿದ್ದಾರೆ.

Advertisement

ಗೌತಮ್ ಗಂಭೀರ್ ತೊರೆದ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕತ್ವನ್ನು ಮುಂಬೈ ಮೂಲದ ಆಟಗಾರ ಶ್ರೇಯಸ್ ಅಯ್ಯರ್(23ವರ್ಷ) ಅವರಿಗೆ ವಹಿಸಲಾಗಿದೆ. ಐದು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಡೆಲ್ಲಿ ಡೇವಿಲ್ಸ್ ಜಯ ಸಾಧಿಸಿತ್ತು.

ಈ ಹಿನ್ನೆಲೆಯಲ್ಲಿ ಸೋಲಿನ ಹೊಣೆ ಹೊತ್ತ ಗೌತಮ್ ಗಂಭೀರ ನಾಯಕತ್ವಕ್ಕೆ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next