Advertisement

ಪಂಚಾಬ್‌ ಗೆಲುವಿನ ಗುರಿ ಮರುನಿಗದಿ ನಿರ್ಧಾರ ಪ್ರಶ್ನಿಸಿದ ಕಾರ್ತಿಕ್‌

06:20 AM Apr 23, 2018 | Team Udayavani |

ಕೋಲ್ಕತಾ: ಮಳೆಯಿಂದ ತೊಂದರೆಗೊಳಗಾದ ಶನಿವಾರದ ಪಂದ್ಯದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಗೆಲುವಿಗೆ ನೀಡಲಾದ ಗುರಿಯ ಬಗ್ಗೆ ಕೋಲ್ಕತಾ ನೈಟ್‌ರೈಡರ್ ನಾಯಕ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Advertisement

ಗೆಲ್ಲಲು 192 ರನ್‌ ಗಳಿಸುವ ವೇಳೆ ಪಂಜಾಬ್‌ 8.2 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 96 ರನ್‌ ಗಳಿಸಿದ ವೇಳೆ ಮಳೆ ಸುರಿಯಿತು. ಸುಮಾರು 90 ನಿಮಷಗಳ ಆಟ ನಷ್ಟಗೊಂಡ ಬಳಿಕ ಪಂಜಾಬ್‌ ಗೆಲುವಿಗೆ 13 ಓವರ್‌ಗಳಲ್ಲಿ 125 ರನ್‌ ಗಳಿಸುವ ಗುರಿಯನ್ನು ನಿಗದಿಗೊಳಿಸಲಾಯಿತು. ಅಂದರೆ ಪಂಜಾಬ್‌ ತಂಡ ಇನ್ನುಳಿದ 28 ಎಸೆತಗಳಿಂದ ಕೇವಲ 29 ರನ್‌ ಗಳಿಸುವ ಅವಕಾಶ ಪಡೆದಿತ್ತು. ಹೊಸ ಗುರಿಯನ್ನು ಡಕ್‌ವರ್ತ್‌ ಲೂವಿಸ್‌ ಸ್ಟೆರ್ನ್ ನಿಯಮದಡಿ ನಿಗದಿಪಡಿಸಲಾಗಿತ್ತು.

ಆ ಹಂತದಲ್ಲಿ ನಾವು ಎರಡು ವಿಕೆಟನ್ನು ಪಡೆಯುವ ಅಗತ್ಯವಿತ್ತು ಎಂದು ಕಾರ್ತಿಕ್‌ ತಿಳಿಸಿದರು. ಕ್ರಿಸ್‌ ಗೇಲ್‌ ಮತ್ತು ರಾಹುಲ್‌ ಅವರ ಅಮೋಘ ಆಟದಿಂದಾಗಿ ಪಂಜಾಬ್‌ ಇನ್ನೂ 11 ಎಸೆತ ಇರುವಾಗಲೇ 9 ವಿಕೆಟ್‌ಗಳ ಜಯ ಸಾಧಿಸಿತ್ತು. ಅವರಿಬ್ಬರ (ಗೇಲ್‌, ರಾಹುಲ್‌) ವಿಕೆಟನ್ನು ಬೇಗನೇ ಪಡೆಯುವುದು ನಮ್ಮ ಬಯಕೆಯಾಗಿತ್ತು. ಆದರೆ ಇದು ಸಾಧ್ಯವಾಗಲಿಲ್ಲ. ಅವರಿಬ್ಬರು ನಿಜವಾಗಿಯೂ ಉತ್ತಮ ಹೊಡೆತಗಳ ಭರ್ಜರಿ ಆಟ ಪ್ರದರ್ಶಿಸಿದರು ಎಂದು ಕಾರ್ತಿಕ್‌ ತಿಳಿಸಿದರು.

ಮಳೆಯಿಂದ ಪಂದ್ಯ ನಿಂತಾಗ ಏನಾಗಬಹುದೆಂದು ಊಹಿಸಲು ಕಷ್ಟವಾಗಿತ್ತು. ಯಾಕೆಂದರೆ ಆಗ ಪಂಜಾಬ್‌ ಗೆಲ್ಲಲು ಓವರೊಂದರಕ್ಕೆ 8 ರನ್‌ ಗಳಿಸಬೇಕಾಗಿತ್ತು. ಆದರೆ ಡಿಎಲ್‌ಎಸ್‌ ನಿಯಮದ ಪ್ರಕಾರ ಹಠಾತ್‌ ಪಂಜಾಬ್‌ ಓವರೊಂದಕ್ಕೆ ಆರು ರನ್‌ ಗಳಿಸುವ ಗುರಿ ಪಡೆಯಿತು. ಇದು ನನಗೆ ಆಶ್ಚರ್ಯ ತಂದಿದೆ ಎಂದರು ಕಾರ್ತಿಕ್‌.

Advertisement

Udayavani is now on Telegram. Click here to join our channel and stay updated with the latest news.

Next