Advertisement

ಆರ್‌ಸಿಬಿಗೆ ಪ್ರೀತಿಯ ಜಯ

07:25 AM Apr 15, 2018 | |

ಬೆಂಗಳೂರು: ಕೊನೆಯ ಓವರ್‌ನವರೆಗೆ ಅಭಿಮಾನಿಗಳು ಕಾದು ಕೂರುವಂತೆ ಮಾಡಿದ ಪಂದ್ಯ ಶುಕ್ರವಾರ ರಾತ್ರಿ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಿತು. ಕನ್ನಡಿಗ ತಾರೆಯರಾದ ಕೆ.ಎಲ್‌.ರಾಹುಲ್‌, ಕರುಣ್‌ ನಾಯರ್‌, ಮಾಯಾಂಕ್‌ ಅಗರ್ವಾಲ್‌ ಇದ್ದ ಪಂಜಾಬ್‌ ಕಿಂಗ್ಸ್‌ ಮತ್ತು ಕೊಹ್ಲಿ ನಾಯಕತ್ವದ ಆರ್‌ಸಿಬಿ ನಡುವಿನ ಸೆಣಸಾಟದಲ್ಲಿ ಕಡೆಯ ಹಂತದವರೆಗೆ ರೋಚಕತೆ, ಕುತೂಹಲವಿತ್ತು. ಕಡೆಗೂ ಆರ್‌ಸಿಬಿ ಗೆದ್ದರೂ ದುರ್ಬಲ ಬೌಲಿಂಗ್‌ ಪಡೆಯನ್ನಿಟ್ಟುಕೊಂಡು ಕೊಹ್ಲಿ, ಮೆಕಲಂರಂತಹ ದಿಗ್ಗಜರನ್ನು ಕಟ್ಟಿ ಹಾಕಿದ ಶ್ರೇಯಸ್ಸು ಪಂಜಾಬ್‌ ನದ್ದಾಯಿತು! ಟಾಸ್‌ ಸೋತು ಬ್ಯಾಟಿಂಗ್‌ಗಿಳಿದ ಪಂಜಾಬ್‌ 19.2 ಓವರ್‌ ಗಳಲ್ಲಿ 155ಕ್ಕೆ ಆಲೌಟಾಯಿತು. ಇದನ್ನು ಬೆನ್ನತ್ತಿ ಹೊರಟ ಆರ್‌ಸಿಬಿ 19.3 ಓವರ್‌ನಲ್ಲಿ 6 ವಿಕೆಟ್‌ ಕಳೆದುಕೊಂಡು 159 ರನ್‌ ಗಳಿಸಿತು.

Advertisement

ಕೊಹ್ಲಿ ವೈಫ‌ಲ್ಯ, ಮೆರೆದ ಡಿವಿಲಿಯರ್ಸ್‌:
ಅಭಿಮಾನಿಗಳೆಲ್ಲ ಕೊಹ್ಲಿ ಬ್ಯಾಟಿಂಗ್‌ ನೋಡಲು ಕಾದು ಕುಳಿತ್ತಿದ್ದರೂ ಮಿಂಚಿದ್ದು ಮಾತ್ರ ಡಿವಿಲಿಯರ್ಸ್‌. 1ನೇ ಓವರ್‌ನಲ್ಲಿ ಮೆಕಲಂ, 5ನೇ ಓವರ್‌ನಲ್ಲಿ ಕೊಹ್ಲಿ ಔಟಾದ ನಂತರ ಡಿವಿಲಿಯರ್ಸ್‌ ತಂಡದ ಭಾರವನ್ನು ಹೊತ್ತುಕೊಂಡರು. ಕೆಲವೊಮ್ಮೆ ನಿಧಾನವಾಗಿ,ಇನ್ನೊಮ್ಮೆ ವೇಗವಾಗಿ ಆಡಿ ಪಂಜಾಬಿನ ಬೌಲಿಂಗನ್ನು ಹಳಿ ತಪ್ಪಿಸಿದರು. ಅದರಲ್ಲೂ17ನೇ ಓವರ್‌ನಲ್ಲಿ ಅವರು ಸತತ 2 ಸಿಕ್ಸರ್‌,18ನೇ ಓವರ್‌ನಲ್ಲಿ ಮತ್ತೂಂದು ಸಿಕ್ಸರ್‌ ಬಾರಿಸಿದ್ದು ಪಂಜಾಬ್‌ ಅವಕಾಶವನ್ನು ಕಸಿಯಿತು.

ಪಂಜಾಬ್‌ ನೆರವಿಗೆ ನಿಂತ ಕನ್ನಡಿಗ ರಾಹುಲ್‌:
ಕೆ.ಎಲ್‌.ರಾಹುಲ್‌, ಕರುಣ್‌ ನಾಯರ್‌… ಈ ಇಬ್ಬರೇ ಪಂಜಾಬನ್ನು ಕೈಹಿಡಿದು ಮೇಲೆತ್ತಿದ್ದು.ಇವರ ಹೊರತು ಪಂಜಾಬ್‌ ಸ್ಥಿತಿ ದಯನೀಯವಾಗುತ್ತಿದ್ದರಲ್ಲಿ ಸಂಶಯವಿರಲಿಲ್ಲ. ಮೊದಲ ಓವರ್‌ನಿಂದಲೇ ಚಚ್ಚಲಾರಂಭಿಸಿದ ರಾಹುಲ್‌ ಸತತ 2 ಸಿಕ್ಸರ್‌ ಬಾರಿಸಿ ಆರ್‌ಸಿಬಿಗೆ ಎಚ್ಚರಿಕೆ ನೀಡಿದ್ದರು. ರಾಹುಲ್‌-ಕರುಣ್‌ ನಾಯರ್‌ ಇಬ್ಬರು ತಂಡದ ಮೊತ್ತವನ್ನು 100ಮುಟ್ಟಿಸಿದರು. ಆಗ ರಾಹುಲ್‌ ಔಟಾಗುವುದರೊಂದಿಗೆ ಪಂಜಾಬ್‌ ಕುಸಿತ ತೀವ್ರವಾಯಿತು.

– ಕೆ.ಪೃಥ್ವಿಜಿತ್‌

Advertisement

Udayavani is now on Telegram. Click here to join our channel and stay updated with the latest news.

Next