ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವವನ್ನು ಐಪಿಎಸ್‌ನಲ್ಲಾದರೂ ನೋಡಬಹುದು ಎಂದಿದ್ದ ಅಭಿಮಾನಿಗಳಿಗೆ ನಿರಾಸೆ ಎಂಬಂತೆ ಪ್ರಸಕ್ತ ಸಾಲಿನ ಐಪಿಎಲ್ ಸರಣಿಗೆ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ನಾಯಕತ್ವದಿಂದ ಕೈಬಿಡಲಾಗಿದೆ.
ಧೋನಿ ಅವರ ಬದಲಾಗಿ ತಂಡದ ಇನ್ನೊಬ್ಬ ಆಟಗಾರ ಆಸಿಸ್ ನಾಯಕ ಸ್ಟಿವ ಸ್ಮಿತ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ.
ತಂಡದ ಮಾಲಿಕರು ಧೋನಿ ಅವರ ನಾಯಕತ್ವದಲ್ಲಿ ಸಂತುಷ್ಟರಾಗದೆ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ. ಧೋನಿ ತಂಡದ ಮಾಲಿಕರ ನಿರ್ಧಾರವನ್ನು ಸ್ವಾಗತಿಸಿದ್ದು, ತಂಡದ ಯಶಸ್ಸಿಗೆ ಸಂಪೂರ್ಣ ವಾಗಿ ಸಹಕರಿಸುವುದಾಗಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಕಳೆದ ಐಪಿಎಲ್‌ನಲ್ಲಿ ಪುಣೆ ತಂಡ ಧೋನಿ ನಾಯಕತ್ವದಲ್ಲಿ ಆಡಿದ 14 ಪಂದ್ಯಗಳಲ್ಲಿ 5 ರಲ್ಲಿ ಮಾತ್ರ ಜಯಗಳಿಸಿತ್ತು.