Advertisement
ಕಳೆದ ಸಲದಂತೆ ಒಟ್ಟು 8 ತಂಡಗಳು ಐಪಿಎಲ್ ಚಾಂಪಿಯನ್‌ಶಿಪ್‌ಗಾಗಿ ಜಿದ್ದಾಜಿದ್ದಿ ಹೋರಾಟ ನಡೆಸಲಿವೆ. ಪಾಕಿಸ್ಥಾನ ಹೊರತುಪಡಿಸಿ ಕ್ರಿಕೆಟ್ ಜಗತ್ತಿನ ದೊಡ್ಡ ದೇಶಗಳ ಸ್ಟಾರ್ ಆಟಗಾರರ ಉಪಸ್ಥಿತಿ ಈ ಕೂಟದ ವಿಶೇಷ. ದ್ವಿಪಕ್ಷೀಯ ಹಾಗೂ ಇತರ ಐಸಿಸಿ ಸರಣಿಗಳ ವೇಳೆ ಬೇರೆ ಬೇರೆಯಾಗಿ ಆಡುವ ಆಟಗಾರರು ಇಲ್ಲಿ ಒಂದೇ ಸೂರಿನಡಿ ಆಡುವ ಮೂಲಕ ಒಗ್ಗಟ್ಟು ಪ್ರದರ್ಶಿಸುವ ಅಪರೂಪದ ದೃಶ್ಯವನ್ನೂ ಕಾಣಬಹುದು.
ಈ ವರ್ಷದ ಐಪಿಎಲ್ 2 ಕಾರಣಗಳಿಂದ ಹೆಚ್ಚು ಸುದ್ದಿಯಲ್ಲಿದೆ. ಒಂದು, ಲೋಕಸಭಾ ಚುನಾವಣೆ ಘೋಷಣೆಯಾದರೂ ಇಡೀ ಪಂದ್ಯಾವಳಿ ತವರಿನಲ್ಲೇ ನಡೆಯುವುದು. ಹಿಂದಿನೆರಡು ಚುನಾವಣೆಗಳ ವೇಳೆ ಈ ಕೂಟವನ್ನು ದಕ್ಷಿಣ ಆಫ್ರಿಕಾ, ಯುಎಇಯಲ್ಲಿ ಆಡಿಸಲಾಗಿತ್ತು. ಮತ್ತೂಂದು, ಈ ಚುಟುಕು ಕ್ರಿಕೆಟಿಗೆ ಏಕದಿನ ವಿಶ್ವಕಪ್ ಅಭ್ಯಾಸದ ಮಹತ್ವ ಲಭಿಸಿರುವುದು. ಹಿಂದಿನೆರಡು ಸಲ, ಅಂದರೆ 2011 ಮತ್ತು 2015ರಲ್ಲಿ ವಿಶ್ವಕಪ್ ಮುಗಿದ ಮೇಲೆ ಐಪಿಎಲ್ ನಡೆದಿತ್ತು. ಇದೇ ಮೊದಲ ಬಾರಿಗೆ ಐಪಿಎಲ್ ಬಳಿಕ ಏಕದಿನ ವಿಶ್ವಕಪ್ ಪಂದ್ಯಾವಳಿ ನಡೆಯಲಿದೆ. ಹೀಗಾಗಿ ವಿಶ್ವಕಪ್‌ನಲ್ಲಿ ಆಡಲಿರುವ ಸಂಭಾವ್ಯ ಆಟಗಾರರು ತಮ್ಮ ಫಾರ್ಮ್ ಪ್ರದರ್ಶನಕ್ಕೆ, ಲೋಪದೋಷಗಳನ್ನು ತಿದ್ದಿಕೊಳ್ಳಲಿಕ್ಕೆ ಐಪಿಎಲ್‌ನ ಮೊರೆಹೋಗುವುದು ಸ್ಪಷ್ಟ.
Related Articles
ಬಲಾಬಲದ ಲೆಕ್ಕಾಚಾರದಲ್ಲಿ ಎಲ್ಲ 8 ತಂಡಗಳೂ ತಮ್ಮ ತಮ್ಮ ಮಟ್ಟಿಗೆ ಬಲಾಡ್ಯ ತಂಡಗಳೇ ಆಗಿವೆ. ಆದರೆ ಕಪ್ ಗೆಲ್ಲಲು ತಾಕತ್ತೂಂದೇ ಸಾಲದು, ಅದೃಷ್ಟವೂ ಬೇಕೆಂಬುದನ್ನು ಐಪಿಎಲ್ ಕಾಲ ಕಾಲಕ್ಕೆ ಸಾಬೀತುಪಡಿಸುತ್ತಲೇ ಬಂದಿದೆ. ಅದೃಷ್ಟ ವಿಷಯದಲ್ಲಿ ಮುಂಬೈ, ಚೆನ್ನೈ ಹಾಗೂ ಇದರ ನಾಯಕರಾದ ರೋಹಿತ್ ಶರ್ಮ, ಮಹೇಂದ್ರ ಸಿಂಗ್ ಧೋನಿ ಎಲ್ಲರಿಗಿಂತ ಮುಂದಿದ್ದಾರೆ. ಇಬ್ಬರೂ ತಲಾ 3 ಸಲ ತಮ್ಮ ತಂಡಗಳಿಗೆ ಐಪಿಎಲ್ ಕಪ್ ತಂದಿತ್ತಿದ್ದಾರೆ. ಕೆಕೆಆರ್‌ನ 2 ಗೆಲುವುಗಳಲ್ಲಿ ನಾಯಕ ಗೌತಮ್ ಗಂಭೀರ್ ಅವರ ಅದೃಷ್ಟದ ಪಾಲು ದೊಡ್ಡದಿತ್ತು. ಹಾಗೆಯೇ ಶೇನ್ ವಾರ್ನ್, ಆ್ಯಡಂ ಗಿಲ್‌ಕ್ರಿಸ್ಟ್, ಡೇವಿಡ್ ವಾರ್ನರ್ ಕೂಡ ಒಮ್ಮೊಮ್ಮೆ ಕಪ್ ಎತ್ತಿದ ಅದೃಷ್ಟಶಾಲಿ ನಾಯಕರು.
Advertisement
6 ಸ್ಟಾರ್ ಆಟಗಾರರ ಗೈರುಐಪಿಎಲ್ ಅಂದರೆ ಹೊಡಿಬಡಿ ಆಟ. ಇಂಥ ಮನೋರಂಜನೆ ನೀಡುವಲ್ಲಿ ಕೆಲವು ಆಟಗಾರರು ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ ಈ ಬಾರಿಯ ಐಪಿಎಲ್‌ಗೆ ಕೆಲವು ಬಿಗ್ ಹಿಟ್ಟರ್‌ಗಳ ಕೊರತೆ ಕಾಡಲಿದೆ. ಅಂತಹ ಕೆಲವು ವಿದೇಶಿ ಆಟಗಾರರು ಈ ಬಾರಿಯ ಐಪಿಎಲ್‌ನಲ್ಲಿ ಕಾಣಸಿಗದಿರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಈ ಕ್ರಿಕೆಟಿಗರೆಂದರೆ ಗ್ಲೆನ್ ಮ್ಯಾಕ್ಸ್ ವೆಲ್, ಆರನ್ ಫಿಂಚ್, ಜಾಸನ್ ರಾಯ್, ಇಯಾನ್ ಮಾರ್ಗನ್, ಜೋ ರೂಟ್ ಮತ್ತು ಬ್ರೆಂಡನ್ ಮೆಕಲಮ್. ಏಕೈಕ ವಿದೇಶಿ ನಾಯಕ
ಈ ಕೂಟದ ಏಕೈಕ ವಿದೇಶಿ ನಾಯಕನೆಂದರೆ ಸನ್‌ರೈಸರ್ ಹೈದರಾಬಾದ್ ತಂಡದ ಕೇನ್ ವಿಲಿಯಮ್ಸನ್. ಕಳೆದ ಸಲ ಫೈನಲ್ ತನಕ ಸಾಗಿದ ವಿಲಿಯಮ್ಸನ್ ಪಡೆ ಅಲ್ಲಿ ಚೆನ್ನೈಗೆ ಶರಣಾಗಿತ್ತು. ಡೇವಿಡ್ ವಾರ್ನರ್ ಮರಳಿದರೂ ವಿಲಿಯಮ್ಸನ್ ಅವರನ್ನೇ ನಾಯಕನನ್ನಾಗಿ ಮುಂದುವರಿಸಲು ಹೈದರಾಬಾದ್ ಫ್ರಾಂಚೈಸಿ ನಿರ್ಧ ರಿಸಿದೆ. ವಿರಾಟ್ ಕೊಹ್ಲಿಗೆ ಲಕ್ ಇಲ್ಲ!
ದುರದೃಷ್ಟದ ವಿಷಯದಲ್ಲಿ ವಿರಾಟ್ ಕೊಹ್ಲಿ ಎಲ್ಲರಿಗಿಂತ ಮುಂದಿದ್ದಾರೆ. ಟೀಮ್ ಇಂಡಿಯಾದ ನಾಯಕನಾಗಿ ಭರಪೂರ ಯಶಸ್ಸು ಕಾಣುತ್ತಲೇ ಬಂದಿರುವ ಕೊಹ್ಲಿ, ಐಪಿಎಲ್‌ನಲ್ಲಿ ಮಾತ್ರ “ಅನ್ ಲಕ್ಕಿ’ಯೇ ಆಗಿದ್ದಾರೆ. ಕಳೆದ 7 ವರ್ಷಗಳಿಂದ ಆರ್‌ಸಿಬಿ ನಾಯಕನಾಗಿದ್ದರೂ ಕೊಹ್ಲಿಗೆ ಒಮ್ಮೆಯೂ ಕಪ್ ಒಲಿದಿಲ್ಲ. 2016ರಲ್ಲಿ ಇನ್ನೇನು ಕಪ್ ಒಲಿದೇ ಬಿಟ್ಟಿತು ಎನ್ನುವಾಗಲೇ ಹೈದರಾಬಾದ್ ವಿರುದ್ಧ ಕೇವಲ 8 ರನ್ನಿನಿಂದ ಎಡವಿತು. ಈ ಸಲವಾದರೂ ಆರ್‌ಸಿಬಿ ಮತ್ತು ಕೊಹ್ಲಿಯ ನಸೀಬು ಬದಲಾದೀತೇ ಎಂಬುದು ಅಭಿಮಾನಿಗಳ ಪ್ರಶ್ನೆ. ಆರ್. ಅಶ್ವಿನ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ ಅವರೆಲ್ಲ ಈ ಕೂಟದಲ್ಲಿ ಕಾಣಿಸಿಕೊಳ್ಳುವ ಭಾರತೀಯ ನಾಯಕರು. ಇವರಲ್ಲಿ ಯಾರಿಗೆಲ್ಲ ಲಕ್ ಇದೆ ಎಂಬುದನ್ನು ಕಾದು ನೋಡಬೇಕು. ಧೋನಿಯ ಟ್ಯಾಕ್ಟಿಕ್ಸ್, ಬುಮ್ರಾ ಯಾರ್ಕರ್, ಕೊಹ್ಲಿ ಸ್ಟ್ರೆಟಜಿ, ಕುಲದೀಪ್ ಗೂಗ್ಲಿ, ಸ್ಮಿತ್ ಫುಟ್‌ವರ್ಕ್, ಗೇಲ್ ಅಬ್ಬರ, ಎಬಿಡಿ 360 ಡಿಗ್ರಿ… ಎಲ್ಲವೂ ಒಂದೇ ನಾಡಿನಲ್ಲಿ ಗರಿಗೆದರುವುದನ್ನು ಕಾಣುವ ಅಪೂರ್ವ ಅವಕಾಶಕ್ಕೆ ಐಪಿಎಲ್ ಮತ್ತೂಮ್ಮೆ ಸಾಕ್ಷಿಯಾಗಲಿದೆ.