Advertisement
ತಂಡ ಎಷ್ಟೇ ದುರ್ಬಲವಾಗಿರಲಿ, ಆದ್ರೇ ಆ ತಂಡದ ನಾಯಕ ಧೋನಿ ಆಗಿದ್ದರೆ ಸಾಕು. ಗೆಲುವು ಹುಡುಕಿಕೊಂಡು ಬರುತ್ತದೆ. ಎಂಬ ಮಾತುಗಳು ಜೋರಾಗಿಯೇ ಕೇಳಿಬಂದಿವೆ. ವಾಸ್ತವವಾಗಿ ಈ ಬಾರಿ ಆರ್‌ಸಿಬಿ, ಕಿಂಗ್ಸ್ ಇಲೆವೆನ್ ಪಂಜಾಬ್, ಕೋಲ್ಕತಾ ನೈಟ್ ರೈಡರ್, ಸನ್ ರೈಸರ್ ಹೈದರಾಬಾದ್ ತಂಡಗಳಿಗೆ ಹೋಲಿಸಿದರೆ, ಚೆನ್ನೈ ಸೂಪರ್ ಸಿಂಗ್ಸ್ “ಕಿಂಗ್’ ಆಗಿ ಕಾಣಿಸುತ್ತಿರಲಿಲ್ಲ. ಹೀಗಾಗಿ, ಆರಂಭದಲ್ಲಿ ಕ್ರೀಡಾ ವಿಶ್ಲೇಷಕರು ಕೂಡ ಚೆನ್ನೈ ತಂಡದ ಮೇಲೆ ನಿರೀಕ್ಷೆ ಇಟ್ಟಿರಲಿಲ್ಲ. ಆದರೆ, ಅಲ್ಲಿ ನಾಯಕನಾಗಿ ಧೋನಿ ಇದ್ದಾನೆ. ಆ ತಂಡವನ್ನು ಯಾವ ಕಾರಣಕ್ಕೂ ಸುಲಭವಾಗಿ ಕಡೆಗಣಿಸುವುದು ಬೇಡ ಅನ್ನುವಂತಹ ಮಾತುಗಳೂ ನುಸುಳಿಬರುತ್ತಿದ್ದವು. ಅಂತಿಮವಾಗಿ ಆ ನುಸುಳಿದ ಪದಗಳಿಗೇ ಗೆಲುವು ಸಿಕ್ಕಿದೆ.
Related Articles
Advertisement
ಕನ್ನಡಿಗರ ಕಥೆ ಏನು?ಕಳೆದ 10 ಆವೃತ್ತಿಗಳಿಗೆ ಹೋಲಿಸಿದರೆ, 11ನೇ ಆವೃತ್ತಿಯಲ್ಲಿ ಕನ್ನಡಿಗರು ಹೆಚ್ಚಿನ ಪ್ರಮಾಣದಲ್ಲಿ ಮಿಂಚಿದ್ದಾರೆ. ತಾವು ಪ್ರತಿನಿಧಿಸಿದ್ದ ತಂಡಗಳ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಪಂಜಾಬ್ ತಂಡದಲ್ಲಿ ಆಡಿದ ಕೆ.ಎಲ್.ರಾಹುಲ್ (659 ರನ್), ಕರುಣ್ ನಾಯರ್ (301 ರನ್), ಕೋಲ್ಕತಾ ತಂಡದಲ್ಲಿ ಆಡಿದ ರಾಬಿನ್ ಉತ್ತಪ್ಪ (351 ರನ್), ಹೈದರಾಬಾದ್‌ನಲ್ಲಿ ಆಡಿದ ಮನೀಶ್ ಪಾಂಡೆ (284 ರನ್) ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಬೌಲಿಂಗ್‌ನಲ್ಲಿ ರಾಜಸ್ಥಾನ್ ತಂಡವನ್ನು ಪ್ರತಿನಿಧಿಸಿದ ಶ್ರೇಯಸ್ ಗೋಪಾಲ್ (11 ವಿಕೆಟ್), ಕೆ.ಗೌತಮ್ (11 ವಿಕೆಟ್) ಕಡಿಮೆ ವಿಕೆಟ್ ಪಡೆದರೂ ಕೆಲವು ಪಂದ್ಯಗಳಲ್ಲಿ ಮಹತ್ವದ ವಿಕೆಟ್ ಕಬಳಿಸಿ ಪಂದ್ಯಕ್ಕೆ ತಿರುವು ನೀಡಿದ ಖ್ಯಾತಿಗೆ ಪಾತ್ರರಾಗಿದ್ದಾರೆ. ಮಿಂಚಿದ ಯುವ ಪ್ರತಿಭೆಗಳು
ಈ ಬಾರಿಯ ವಿಶೇಷ ಅಂದರೆ, ಭಾರತದ ಹಳೆ ಹುಲಿಗಳಿಗಿಂತ ಹೊಸ ಪ್ರತಿಭೆಗಳೇ ದೊಡ್ಡ ಪ್ರಮಾಣದಲ್ಲಿ ಮಿಂಚಿದ್ದು. ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ನಿತೀಶ್ ರಾಣಾ, ಇಶಾನ್ ಕಿಶಾನ್ ಅವರಂತಹ ಪ್ರತಿಭೆಗಳು ತಮ್ಮ ಬ್ಯಾಟಿಂಗ್ ಕೈಚಳಕ ತೋರಿಸಿದ್ದಾರೆ. ಆದರೆ ಬೌಲಿಂಗ್‌ನಲ್ಲಿ ಒಬ್ಬಿಬ್ಬರನ್ನು ಬಿಟ್ಟರೆ ಉಳಿದ ಹೊಸ ಪ್ರತಿಭೆಗಳು ಮಿಂಚುವಲ್ಲಿ ವಿಫಲರಾಗಿದ್ದಾರೆ. ಅಗ್ರ 5 ಬ್ಯಾಟ್ಸ್‌ಮನ್‌ಗಳು:
ಹೆಸರು ತಂಡ ರನ್
ಕೇನ್ ವಿಲಿಯಮ್ಸನ್ ಹೈದರಾಬಾದ್ 735
ರಿಷಭ್ ಪಂತ್ ಡೆಲ್ಲಿ 684
ಕೆ.ಎಲ್.ರಾಹುಲ್ ಪಂಜಾಬ್ 659
ಅಂಬಟಿ ರಾಯುಡು ಚೆನ್ನೈ 602
ಶೇನ್ ವಾಟ್ಸನ್ ಚೆನ್ನೈ 555 ಅಗ್ರ 5 ಬೌಲರ್‌ಗಳು:
ಹೆಸರು ತಂಡ ವಿಕೆಟ್
ಆ್ಯಂಡ್ರೋ ಟೈ ಪಂಜಾಬ್ 24
ರಶೀದ್ ಖಾನ್ ಹೈದರಾಬಾದ್ 21
ಸಿದ್ಧಾರ್ಥ್ ಕೌಲ್ ಹೈದರಾಬಾದ್ 21
ಉಮೇಶ್ ಯಾದವ್ ಆರ್‌ಸಿಬಿ 20
ಟ್ರೆಂಟ್ ಬೌಲ್ಟ್ ಡೆಲ್ಲಿ 18