Advertisement

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

12:11 AM Apr 27, 2024 | Team Udayavani |

ಹೈದರಾಬಾದ್‌: ಹೈದರಾಬಾದ್‌ ಎದುರಿನ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ವಿಶಿಷ್ಟ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆಸಿಕೊಂಡರು. 21 ರನ್‌ ಮಾಡಿದ ವೇಳೆ ಅವರು ಈ ಸೀಸನ್‌ನಲ್ಲಿ 400 ರನ್‌ ಪೂರ್ತಿಗೊಳಿಸಿದರು. ಇದರೊಂದಿಗೆ ಐಪಿಎಲ್‌ ಇತಿಹಾಸದಲ್ಲಿ ಅತ್ಯಧಿಕ 10 ಸೀಸನ್‌ಗಳಲ್ಲಿ 400 ರನ್‌ ಬಾರಿಸಿದ ಮೊದಲ ಕ್ರಿಕೆಟಿಗನೆಂಬ ದಾಖಲೆ ಸ್ಥಾಪಿಸಿದರು.

Advertisement

ಇದಕ್ಕೂ ಮುನ್ನ ಈ ದಾಖಲೆ ಸುರೇಶ್‌ ರೈನಾ, ಶಿಖರ್‌ ಧವನ್‌ ಮತ್ತು ಡೇವಿಡ್‌ ವಾರ್ನರ್‌ ಹೆಸರಲ್ಲಿತ್ತು. ಇವರೆಲ್ಲರೂ 9 ಸೀಸನ್‌ಗಳಲ್ಲಿ 400 ಪ್ಲಸ್‌ ರನ್‌ ಬಾರಿಸಿದ್ದರು. ಕೊಹ್ಲಿ 2024ರ ಐಪಿಎಲ್‌ನಲ್ಲಿ 400 ರನ್‌ ಬಾರಿಸಿದ ಮೊದಲ ಕ್ರಿಕೆಟಿಗ ಕೂಡ ಹೌದು.

2016ರ ಸೀಸನ್‌ನಲ್ಲಿ 4 ಶತಕ ಸೇರಿದಂತೆ 973 ರನ್‌ ಪೇರಿಸಿದ ವಿರಾಟ್‌ ಕೊಹ್ಲಿ ದಾಖಲೆ ಅಜೇಯವಾಗಿ ಉಳಿದಿದೆ. ಈ ಪಂದ್ಯದಲ್ಲಿ ಕೊಹ್ಲಿ ಗಳಿಕೆ 51 ರನ್‌. ಇದು ಅವರ 53ನೇ ಐಪಿಎಲ್‌ ಅರ್ಧ ಶತಕ. ಈ ಹಾದಿಯಲ್ಲಿ ಅವರು ಆರಂಭಿಕನಾಗಿ 4 ಸಾವಿರ ರನ್‌ ಪೂರ್ತಿಗೊಳಿಸಿದ ಐಪಿಎಲ್‌ ದಾಖಲೆಯನ್ನೂ ಬರೆದರು.

Advertisement

Udayavani is now on Telegram. Click here to join our channel and stay updated with the latest news.

Next