Advertisement
ಆರ್ ಸಿಬಿ ಹಾಗೂ ಮುಂಬೈ ಎರಡು ತಂಡಗಳು ಈ ಬಾರಿಯ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು. ಇಂದಿನ ಪಂದ್ಯ ಜಿದ್ದಾಜಿದ್ದಿಯ ಹೋರಾಟದೊಂದಿಗೆ ಸಾಗುವ ನಿರೀಕ್ಷೆಯಿದೆ. ಎರಡು ತಂಡಗಳಿಗೂ ಪ್ಲೇ ಆಫ್ ಬಾಗಿಲು ಸುಗಮವಾಗಿದ್ದು, ಅಧಿಕೃತವಾಗಿ ಒಂದು ಗೆಲುವಿನ ದೂರದಲ್ಲಿದೆ.
ಆರ್‌ಸಿಬಿ ಮತ್ತು ಮುಂಬೈ 7 ಜಯದೊಂದಿಗೆ 14 ಅಂಕ ಹೊಂದಿವೆ. ಈ ಋತುವಿನ ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ ಆರ್‌ಸಿಬಿ ಸೂಪರ್ ಓವರ್‌ನಲ್ಲಿ ಗೆಲುವು ದಾಖಲಿಸಿತ್ತು. ಮುಂಬೈ ಇದಕ್ಕೆ ಸೇಡು ತೀರಿಸಿಕೊಂಡೀತೇ ಎಂಬುದೊಂದು ಪ್ರಶ್ನೆ ಹಾಗೂ ನಿರೀಕ್ಷೆ.
ಸ್ನಾಯು ಸೆಳೆತದಿಂದ ಕಳೆದೆರಡು ಪಂದ್ಯದಲ್ಲಿ ಆಡದಿದ್ದ ಮುಂಬೈ ನಾಯಕ ರೋಹಿತ್ ಶರ್ಮ ಈ ಪಂದ್ಯದಲ್ಲೂ ಆಡುವುದು ಅನುಮಾನ. ಹೀಗಾಗಿ ಪೊಲಾರ್ಡ್ ಅವರೇ ಸತತ 3ನೇ ಪಂದ್ಯದಲ್ಲಿ ಮುಂಬೈಯನ್ನು ಮುನ್ನಡೆಸಬೇಕಾಗುತ್ತದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಮುಂಬೈ ಮೇಲ್ನೋಟಕ್ಕೆ ಬಲಿಷ್ಠವಾಗಿ ಗೋಚರಿಸುತ್ತಿದೆ. ಎಲ್ಲ ಕ್ರಮಾಂಕದಲ್ಲಿಯೂ ತಂಡಕ್ಕೆ ಆಸರೆಯಾಗಬಲ್ಲ ಬ್ಯಾಟ್ಸ್‌ಮನ್‌ಗಳೇ ತುಂಬಿದ್ದಾರೆ. ಕ್ವಿಂಟನ್ ಡಿ ಕಾಕ್ (374 ರನ್), ಇಶಾನ್ ಕಿಶನ್ (298 ರನ್) ತಂಡಕ್ಕೆ ಉತ್ತಮ ಆರಂಭ ನೀಡಿದರೆ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ (283 ರನ್), ಪಾಂಡ್ಯ ಬ್ರದರ್ಸ್ ಮತ್ತು ಕೈರನ್ ಪೊಲಾರ್ಡ್ (214 ನ್) ಸಿಡಿದು ನಿಂತು ತಂಡದ ಮೊತ್ತವನ್ನು 200ರ ಸನಿಹಕ್ಕೆ ತಲುಪಿಸುವಲ್ಲಿ ಸೈ ಎನಿಸಿಕೊಂಡಿದ್ದಾರೆ.
Related Articles
Advertisement
ಆರ್‌ಸಿಬಿ ಗೆ ಕೊಹ್ಲಿ, ಎಬಿಡಿ ಬೆನ್ನೆಲುಬು : ಆರ್‌ಸಿಬಿ ತಂಡಕ್ಕೆ ನಾಯಕ ವಿರಾಟ್ ಕೊಹ್ಲಿ (415 ರನ್) ಮತ್ತು ಎಬಿ ಡಿ ವಿಲಿಯರ್ (324 ರನ್) ಅವರೇ ಬೆನ್ನೆಲುಬಾಗಿದ್ದಾರೆ. ಆಸೀಸ್ ಹಿಟ್ಟರ್ ಆರನ್ ಫಿಂಚ್ (236 ರನ್) ಮತ್ತು ದೇವದತ್ ಪಡಿಕ್ಕಲ್ (343 ರನ್) ಹೆಚ್ಚು ಕಾಲ ಕ್ರೀಸ್ ಆಕ್ರಮಿಸಿಕೊಳ್ಳುವ ಅನಿವಾರ್ಯತೆ ಎಂದಿಗಿಂತ ಹೆಚ್ಚೇ ಇದೆ. ತಂಡದ ಕೆಳ ಹಂತದ ಬ್ಯಾಟಿಂಗ್ ನಂಬಲರ್ಹವಲ್ಲ. ಆರ್‌ಸಿಬಿ ಬೌಲಿಂಗ್ ಈ ಬಾರಿ ಹೆಚ್ಚು ಘಾತಕವಾಗಿ ಮೂಡಿಬಂದಿದೆ. ಮಾರಿಸ್, ಸಿರಾಜ್, ಉದಾನ, ಚಹಲ್ ಉತ್ತಮ ಲಯದಲ್ಲಿದ್ದಾರೆ. ಆದರೆ ಕಳೆದ ಪಂದ್ಯದಲ್ಲಿ ಗಾಯಾಳಾ ಸೈನಿ ಆಡುವುದು ಅನುಮಾನ. ರಾಯಲ್ ಚಾಲೆಂಜರ್ಸ್ ಬೆಂಗಳೂರು ( ಪ್ಲೇಯಿಂಗ್ ಇಲೆವೆನ್): ದೇವದತ್ ಪಡಿಕ್ಕಲ್, ಜೋಶ್ ಫಿಲಿಪ್ (ಕೀಪರ್), ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ಗುರ್ಕೀರತ್ ಸಿಂಗ್ ಮನ್, ಶಿವಮ್ ದುಬೆ, ಕ್ರಿಸ್ ಮೋರಿಸ್, ವಾಷಿಂಗ್ಟನ್ ಸುಂದರ್, ಡೇಲ್ ಸ್ಟೇನ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್ ಮುಂಬೈ ಇಂಡಿಯನ್ಸ್ ( ಪ್ಲೇಯಿಂಗ್ ಇಲೆವೆನ್): ಇಶಾನ್ ಕಿಶನ್, ಕ್ವಿಂಟನ್ ಡಿ ಕಾಕ್ (ಕೀಪರ್), ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್ (ನಾಯಕ), ಕೃನಾಲ್ ಪಾಂಡ್ಯ, ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ