Advertisement

2018ರ ಕಾಮನ್‌ವೆಲ್ತ್‌ ಗೇಮ್ಸ್‌: ಭಾರತೀಯ ದಂಡಿಗೆ ಸಿಸೋಡಿಯ ಮುಖ್ಯಸ್ಥ

10:31 AM Jan 31, 2018 | Team Udayavani |

ಹೊಸದಿಲ್ಲಿ: ಆಸ್ಟ್ರೇಲಿಯದ ಗೋಲ್ಟ್ಕೋಸ್ಟ್‌ ನಲ್ಲಿ ನಡೆಯಲಿರುವ 21ನೇ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾಗವಹಿಸುವ ಭಾರತೀಯ ದಂಡಿನ ಮುಖ್ಯಸ್ಥರಾಗಿ ವಿಕ್ರಮ್‌ ಸಿಂಗ್‌ ಸಿಸೋಡಿಯ ಅವರನ್ನು ಮಂಗಳವಾರ ಭಾರತೀಯ ಒಲಿಂಪಿಕ್‌ ಅಸೋಸಿಯೇಶನ್‌ (ಐಒಎ) ನೇಮಕ ಮಾಡಿದೆ. ಗೇಮ್ಸ್‌ ಎಪ್ರಿಲ್‌ 4ರಿಂದ 15ರ ವರೆಗೆ ನಡೆಯಲಿದೆ.

Advertisement

ಐಒಎಯ ಜಂಟಿ ಕಾರ್ಯದರ್ಶಿಯಾಗಿರುವ ಸಿಸೋಡಿಯ ಅವರಿಗೆ ನೆರವಾಗಲು ಮೂವರು ತಂಡ ವ್ಯವಸ್ಥಾಪಕರನ್ನು ಕೂಡ ನೇಮಕ ಮಾಡಲಾಗಿದೆ. ಭಾರ ತೀಯ ಮಾಡರ್ನ್ ಪೆಂಟತ್ಲಾನ್‌ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ನಾಮದೇವ್‌ ಶಿರ್‌ಗಾಂಕರ್‌, ಏಶ್ಯನ್‌ ಸೈಲಿಂಗ್‌ ಫೆಡರೇಶನ್‌ನ ಇವೆಂಟ್‌ ಸಮಿತಿಯ ಚೇರ್ಮನ್‌ ಕ್ಯಾ| ಅಜಯ್‌ ನಾರಂಗ್‌ ಮತ್ತು ಅಂಡಮಾನ್‌ ಮತ್ತು ನಿಕೋಬಾರ್‌ ರಾಜ್ಯ ಒಲಿಂಪಿಕ್‌ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ವಿಎ ಶಿಯಾದ್‌ ಅವರನ್ನು ತಂಡ ವ್ಯವಸ್ಥಾಪಕರಾಗಿ ಐಒಎ ನೇಮಕ ಮಾಡಿದೆ. 

ಐಒಎ ನೇಮಕ ಮಾಡಿದ ಅಧಿಕಾರಿಗಳು ಈ ಅವಕಾಶ ವನ್ನು ಸಮರ್ಥವಾಗಿ ನಿಭಾಯಿಸುವ ಭರವಸೆ ನನಗಿದೆ. ಗೇಮ್ಸ್‌ ವೇಳೆ ಭಾರತೀಯ ದಂಡಿನ ಎಲ್ಲ ಆ್ಯತ್ಲೀಟ್‌ಗಳ ಬಗ್ಗೆ ಕಾಳಜಿ ವಹಿಸುವ ನಿರೀಕ್ಷೆಯಿದೆ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸುವೆ ಎಂದು ಐಒಎ ಅಧ್ಯಕ್ಷ ನರೀಂದರ್‌ ದ್ರುವ್‌ ಬಾತ್ರ ಹೇಳಿದ್ದಾರೆ. 

ಸಿಸೋಡಿಯ ಮತ್ತು ಇತರ ತಂಡ ವ್ಯವಸ್ಥಾಪಕರಿಗೆ ಈ ಕೆಲಸ ಹೊಸತಾಗಿರಬಹುದು. ಆದರೆ ಆಡಳಿತಗಾರರಾಗಿ ಅವರು ಸಮರ್ಥರಾಗಿದ್ದಾರೆ ಮತ್ತು ಎಲ್ಲ ಕರ್ತವ್ಯಗಳನ್ನು ಅವರು ಒಳ್ಳೆಯ ರೀತಿಯಲ್ಲಿ ನಡೆಸಿಕೊಡಲಿದ್ದಾರೆ ಎಂದು ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್‌ ಮೆಹ¤ ತಿಳಿಸಿದರು. ಆ್ಯತ್ಲೀಟ್‌ಗಳ ಪ್ರತಿ ದಿನದ ಕೆಲಸ ಕಾರ್ಯಗಳನ್ನು ಸಿಸೋಡಿಯ ಮತ್ತು ಮೂವರು ತಂಡ ವ್ಯವಸ್ಥಾಪಕರು ನೋಡಿಕೊಳ್ಳಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next