Advertisement

ಸೈನಾ ತಂದೆಗೆ ಕ್ರೀಡಾ ಗ್ರಾಮ ಪ್ರವೇಶಕ್ಕೆ ಅವಕಾಶ

07:00 AM Apr 04, 2018 | Team Udayavani |

ಗೋಲ್ಡ್‌ಕೋಸ್ಟ್‌: ಕ್ರೀಡಾ ಗ್ರಾಮಕ್ಕೆ ತಂದೆಯ ಪ್ರವೇಶ ನಿರಾಕರಣೆಯ ಬಗ್ಗೆ ಭಾರತದ ಸ್ಟಾರ್‌ ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ಅವರಿಂದ ವ್ಯಕ್ತವಾಗಿದ್ದ ಬೇಸರ ಅಂತ್ಯಗೊಂಡಿದೆ. ಮಂಗಳವಾರ ಸಂಜೆ ಭಾರತೀಯ ಒಲಿಂಪಿಕ್‌ ಸಮಿತಿ ಗೋಲ್ಡ್‌ ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌ ಕ್ರೀಡಾ ಗ್ರಾಮಕ್ಕೆ ಸೈನಾ ಅವರ ತಂದೆ ಹರ್ವೀರ್‌ ಸಿಂಗ್‌ ಅವರಿಗೂ ಪ್ರವೇಶ ದೊರಕಿಸಿಕೊಟ್ಟಿದೆ. 

Advertisement

ಈ  ಬಗ್ಗೆ  ಸೈನಾ, “ಸಂಕ್ಷಿಪ್ತ ಸೂಚನೆಯ ಮೂಲಕ ಕ್ರೀಡಾ ಗ್ರಾಮಕ್ಕೆ ತಂದೆಯ ಪ್ರವೇ ಶವನ್ನು ಮಾನ್ಯಗೊಳಿಸಿದ ಭಾರತೀಯ ಒಲಿಂ ಪಿಕ್‌ ಸಮಿತಿಗೆ ಅನಂತ ಧನ್ಯವಾದಗಳು. ಈ ಪ್ರಕ್ರಿಯೆ ನನ್ನ ಪ್ರದರ್ಶನಕ್ಕೆ ಸಹಾಯಕವಾಗಲಿದೆ. ಈ ಹಿಂದೆ ಬೇಸರ ವ್ಯಕ್ತಪಡಿಸಿದ್ದಕ್ಕೆ ನನ್ನನ್ನು ಕ್ಷಮಿಸಿ’ ಎಂದು ಟ್ವೀಟ್‌ ಮಾಡಿದ್ದಾರೆ.

ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ತಂಡದ ಅಧಿಕಾರಿಗಳ ಪಟ್ಟಿಯಲ್ಲಿ ತನ್ನ ತಂದೆ ಹರ್ವೀರ್‌ ಅವರ ಹೆಸರನ್ನು ತೆಗೆದು ಹಾಕಿರುವ ಬಗ್ಗೆ  ಸೈನಾ ನೆಹ್ವಾಲ್‌ ಸೋಮವಾರ ಬೇಸರ ವ್ಯಕ್ತಪಡಿಸಿದ್ದರು. ಸೈನಾರ ಪ್ರತಿಯೊಂದು ಪ್ರಮುಖ ಪಂದ್ಯದ ಸಂದರ್ಭವೂ ಅವರ ತಂದೆ ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದುದರಿಂದ ಸೈನಾರ ಬೇಸರ ಅವರ ಗೇಮ್ಸ್‌ ಪ್ರದರ್ಶನದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿತ್ತು.

Advertisement

Udayavani is now on Telegram. Click here to join our channel and stay updated with the latest news.

Next