Advertisement

ಪಾಕ್‌ ಚಾಂಪಿಯನ್ಸ್‌ ಟ್ರೋಫಿ ಗೆದ್ದಿದ್ದಕ್ಕೆ ಇಂಜಿಗೆ 1 ಕೋಟಿ ರೂ.

02:45 AM Jul 08, 2017 | Team Udayavani |

ಕರಾಚಿ: ಪಾಕಿಸ್ತಾನ ಕ್ರಿಕೆಟ್‌ ತಂಡ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಜಯಸಾಧಿಸಿರುವ ಹಿನ್ನೆಲೆಯಲ್ಲಿ ಆಯ್ಕೆ ಸಮಿತಿಯ ಮುಖ್ಯಸ್ಥ ಇಂಜಮಾಮ್‌ ಉಲ್‌ ಹಕ್‌ಗೆ ಪಿಸಿಬಿ 1 ಕೋಟಿ ರೂ. ಬಹುಮಾನ ನೀಡಿದೆ (ಭಾರತೀಯ ರೂಪಿಯಲ್ಲಿ 60 ಲಕ್ಷ ರೂ.). ಇಂಜಮಾಮ್‌ಗೆ ಇಷ್ಟು ದುಬಾರಿ ಮೊತ್ತ ನೀಡಿರುವುದಕ್ಕೆ ಅಪಸ್ವರವೂ ಕೇಳಿ ಬಂದಿದೆ. 

Advertisement

ಇಂಗ್ಲೆಂಡ್‌ನ‌ಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿಯ ಫೈನಲ್‌ನಲ್ಲಿ ಪಾಕ್‌ ತಂಡ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಭರ್ಜರಿ ಜಯ ಸಾಧಿಸಿ ಮೊದಲ ಬಾರಿಗೆ ಟ್ರೋಫಿ ಎತ್ತಿತ್ತು. ಹೀಗಾಗಿ ಪಾಕ್‌ ಸರ್ಕಾರ ಆಟಗಾರರಿಗೆ 1 ಕೋಟಿ ರೂ. ಮತ್ತು ಕೋಚ್‌, ಸಿಬ್ಬಂದಿಗೆ 50 ಲಕ್ಷ ರೂ. ಬಹುಮಾನ ನೀಡಿದೆ. ಇದೀಗ ಪಿಸಿಬಿ ಆಯ್ಕೆ ಮಂಡಳಿಯ ಮುಖ್ಯಸ್ಥರಾದ ಇಂಜಮಾಮ್‌ಗೆ 1 ಕೋಟಿ ರೂ. ಮತ್ತು ಆಯ್ಕೆ ಮಂಡಳಿಯ ಇತರೆ ಸದಸ್ಯರಿಗೆ 50 ಲಕ್ಷ ರೂ. ನೀಡಲಾಗಿದೆ.

ಅಪಸ್ವರ ಏಕೆ?: ಆಯ್ಕೆ ಮಂಡಳಿಯ ಮುಖ್ಯ ಕೋಚ್‌ ಆಗಿರುವ ಇಂಜಮಾಮ್‌ಗೆ 1 ಕೋಟಿ ರೂ. ನೀಡಲಾಗಿದೆ. ಆದರೆ ಇತರೆ ಸದಸ್ಯರಿಗೆ ಮತ್ತು ಸಿಬ್ಬಂದಿಗೆ ಕೇವಲ 50 ಲಕ್ಷ ರೂ. ಮಾತ್ರ ನೀಡಲಾಗಿದೆ. ಇದು ತಾರತಮ್ಯ ಎಂದು ಹಲವರು ಅಪಸ್ವರ ಎತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next