Advertisement

INX ಪ್ರಕರಣ; ಕೇಂದ್ರ ಮಾಜಿ ಸಚಿವ ಚಿದಂಬರಂ ಬಂಧನ

10:49 AM Aug 23, 2019 | Team Udayavani |

ನವದೆಹಲಿ : ಐಎನ್ ಎಕ್ಸ್ ಮೀಡಿಯಾ ಅವ್ಯವಹಾರ ಪ್ರಕರಣದ ವಿಚಾರಕ್ಕೆ ಸಂಬಂಧಿಸಿ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಬಂಧನವಾಗಿದೆ.

Advertisement

ಬಂಧನ ಭೀತಿಯಿಂದ ಪಾರಾಗಲು ಸಾಕಷ್ಟು ನಾಟಕಗಳು ನಡೆದರೂ ಯಾವುದೇ ಪ್ರಯೋಜನವಾಗಲಿಲ್ಲ ಕೊನೆಗೂ ಸಿಬಿಐ ಅಧಿಕಾರಿಗಳ ಬಲೆಗೆ ಬೀಳಬೇಕಾಯಿತು.

ಬಂದಿನಕ್ಕೊಳಗಾಗಿರುವ ಪಿ.ಚಿದಂಬರಂ ಅವರನ್ನು ದೆಹಲಿಯ ರಾಮ್‌ಮನೋಹರ್ ಲೋಹಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಅವರನ್ನು ಸಿಬಿಐ ಕೇಂದ್ರ ಕಚೇರಿಗೆ ಕರೆದುಕೊಂಡು ಹೋಗಲಾಯಿತು.

ಸಿಬಿಐ ಕೇಂದ್ರ ಕಚೇರಿಯಲ್ಲಿ ವಿಚಾರಣೆ ನಾಳೆ ಕೋರ್ಟಿಗೆ ಹಾಜರುಪಡಿಸಲಿರುವ ಅಧಿಕಾರಿಗಳು.

ಇತ್ತ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಚೆನ್ನೈ ನಲ್ಲಿದ್ದ ಕಾರ್ತಿ ದೆಹಲಿಗೆ ಪ್ರಯಾಣವನ್ನು ಬೆಳೆಸಿದ್ದಾರೆ.

Advertisement

ಬಂಧನಕ್ಕೆ ಮುನ್ನ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿ.ಚಿದಂಬರಂ ನನ್ನ ಮೇಲೆ ಸಿಬಿಐ ಈ ವರೆಗೂ ಚಾರ್ಜ್ ಶೀಟ್ ದಾಖಲು ಮಾಡಿಲ್ಲ, ಎಫ್ಐಆರ್ ನಲ್ಲೂ ನನ್ನ ಹೆಸರನ್ನು ಉಲ್ಲೇಖ ಮಾಡಿಲ್ಲ, ಕಳೆದ 27 ಗಂಟೆಗಳಲ್ಲಿ ಗೊಂದಲಗಳಿಗೆ ಕಾರಣವಾಗಿವೆ ಈ ಪ್ರಕರಣದಲ್ಲಿ ನಾನು ಆರೋಪಿಯಲ್ಲ ಎಂದು ತಿಳಿಸಿದರು.

ಇದನ್ನೆಲ್ಲ ಟ್ರಂಪ್‌ ಮಾಡುತ್ತಿಲ್ಲ; ಬಿಜೆಪಿಯವರೇ ಮಾಡುತ್ತಿದ್ದಾರೆ!
ಐಎನ್‌ಎಕ್ಸ್‌ ಮೀಡಿಯಾ ಹಗರಣದಲ್ಲಿ ಕೇಂದ್ರದ ಮಾಜಿ ಗೃಹ ಸಚಿವ ಪಿ.ಚಿದಂಬರಂ ಅವರನ್ನು ಸಿಬಿಐ ಬಂಧಿಸಿದ್ದಕ್ಕೆ ಅವರ ಪುತ್ರ, ಕಾರ್ತಿ ಚಿದಂಬರಂ ಕೆಂಡಾಮಂಡಲವಾಗಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಇಷ್ಟೆಲ್ಲ ಡ್ರಾಮಾ ಮಾಡಿ ಬಂಧಿಸುವಂಥದ್ದು ಏನೂ ಇರಲಿಲ್ಲ. ಇದನ್ನೆಲ್ಲ ರಾಜಕೀಯ ದ್ವೇಷದಿಂದಲೇ ಮಾಡಲಾಗುತ್ತಿದೆ. ಇದನ್ನು ಮಾಡುತ್ತಿರುವವರು ಬಿಜೆಪಿಯವರು ಹೊರತು ಅಮೆರಿಕದ ಡೊನಾಲ್ಡ್‌ ಟ್ರಂಪ್‌ ಏನೂ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.

ಸಂಜೆಯ ಬಳಿಕ ಏನೇನಾಯಿತು :

– ನಾಪತ್ತೆಯಾಗಿದ್ದ ಪಿ.ಚಿದಂಬರಂ ದಿಢೀರ್ ಆಗಿ ದೆಹಲಿಯ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಪ್ರತ್ಯಕ್ಷ.

– ಸುದ್ದಿಗೋಷ್ಠಿ ಬಳಿಕ ತಮ್ಮ ನಿವಾಸಕ್ಕೆ ತೆರಳಿದ ಚಿದು.

– ತಮ್ಮ ನಿವಾಸದ ಎರಡನೇ ಮಹಡಿಯ ಕೊಠಡಿಗೆ ಬೀಗ ಹಾಕಿ ಕುಳಿತ ಚಿದಂಬರಂ.

– ಚಿದಂಬರಂ ಮನೆಯತ್ತ ತೆರಳುವ ವಿಷಯ ತಿಳಿದ ಸಿಬಿಐ, ಇಡಿ ಅಧಿಕಾರಿಗಳು ಮನೆಯತ್ತ ದೌಡಾಯಿಸಿದ್ದಾರೆ.

– ಸಿಬಿಐ ಅಧಿಕಾರಿಗಳು ನಿವಾಸದ ಬಳಿ ತೆರಳಿದ ಸಂದರ್ಭ ಗೇಟ್ ಬೀಗ ಹಾಕಿದ ಸಂದರ್ಭ ಸಿಬಿಐ ಅಧಿಕಾರಿಗಳು ನಿವಾದ ಕಾಂಪೌಂಡ್ ಗೋಡೆಯನ್ನು ಹಾರಿ ಒಳಗೆ ಹೋಗಬೇಕಾಯಿತು.

– ಪಿ.ಚಿದಂಬರಂ ನಿವಾಸದ ಬಳಿ ಭಾರಿ ಡ್ರಾಮಾ ನಡೆಯುತ್ತಿದ್ದು ಸಿಬಿಐ ಅಧಿಕಾರಿಗಳಿಂದ ಚಿದಂಬರಂ ವಿಚಾರಣೆ.

– ಮುನ್ನೆಚ್ಚರಿಕೆಯಾಗಿ ಹೆಚ್ಚಿನ ಪೊಲೀಸ್ ಭದ್ರತೆಯನ್ನು ಕೋರಿದ ಸಿಬಿಐ ಅಧಿಕಾರಿಗಳು.

– ನಿವಾಸದ ಬಳಿ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ಘರ್ಷಣೆ

– ಚಿದಂಬರಂ ನಿವಾಸಕ್ಕೆ ತೆರಳಿದ 3 ಸಿಬಿಐ ತಂಡಗಳು.

– ಎಲ್ಲಾ ನಾಟಕಗಳ ಬಳಿಕ ಚಿದಂಬರಂ ಅವರನ್ನು ವಶಕ್ಕೆ ಪಡೆದ ಸಿಬಿಐ ಅಧಿಕಾರಿಗಳು.

– ವಿಷಯ ತಿಳಿದ ಕಾರ್ತಿ ಚಿದಂಬರಂ ಚೆನ್ನೈ ನಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

– ಸಿಬಿಐ ಅಧಿಕಾರಿಗಳ ತೀವ್ರ ವಿಚಾರಣೆಯ ಬಳಿಕ ಬಂಧನ ಸಾಧ್ಯತೆ.

– ನಾಳೆ ಸಿಬಿಐ ಕೋರ್ಟಿಗೆ ಹಾಜರುಪಡಿಸುವ ಸಾಧ್ಯತೆ .

Advertisement

Udayavani is now on Telegram. Click here to join our channel and stay updated with the latest news.

Next