Advertisement

‘ಕಾಲೇಜು ರಂಗೋತ್ಸವ’ಕ್ಕೆ ಕಾಲೇಜುಗಳಿಂದ ಅರ್ಜಿ ಆಹ್ವಾನ

12:42 PM Jan 20, 2018 | Team Udayavani |

ಮಹಾನಗರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ರಂಗಾಯಣ ವಲಯಕ್ಕೆ ಸೇರಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಕಾಲೇಜು ರಂಗೋತ್ಸವಕ್ಕೆ ಕಲಾ ತಂಡಗಳಿಂದ ಅರ್ಜಿ ಅಹ್ವಾನಿಸಲಾಗಿದೆ.

Advertisement

ಜಿಲ್ಲಾ ವ್ಯಾಪ್ತಿಯ ಆರು ಕಾಲೇಜುಗಳು ಮಾತ್ರ ಜಿಲ್ಲಾ ಮಟ್ಟದ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಆಸಕ್ತ ಕಾಲೇಜಿನ ಪ್ರಾಂಶುಪಾಲರು ಅರ್ಜಿ ಸಲ್ಲಿಸಬಹುದು. ನಾಟಕ ಮತ್ತು ಜಾನಪದ ನೃತ್ಯ ವಿಭಾಗಗಳಿಗೆ ಅಥವಾ ಯಾವುದಾದರೂ ಒಂದು ವಿಭಾಗಕ್ಕೆ ಮಾತ್ರ ಅರ್ಜಿ ಸಲ್ಲಿಸಬಹುದು. ನಾಟಕದ ಆಯ್ಕೆ, ನಾಟಕದ ನಿರ್ದೇಶಕರು, ಜನಪದ ಪ್ರಕಾರದ ಆಯ್ಕೆ, ತರಬೇತುದಾರರು ಮುಂತಾದ ವಿವರಗಳನ್ನು ಪರಿಗಣಿಸಿ ಕಾಲೇಜು ರಂಗೋತ್ಸವಕ್ಕೆ ತಂಡಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಕಾಲೇಜುಗಳು ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕಿದೆ.

ಆಸಕ್ತ ಕಾಲೇಜುಗಳು ಸ್ವಇಚ್ಛೆಯಿಂದ ಖರ್ಚು ವೆಚ್ಚಗಳನ್ನು ಭರಿಸಿ ನಾಟಕ ಮತ್ತು ಜನಪದ ನೃತ್ಯ ತಂಡಗಳನ್ನು ಸಿದ್ಧಗೊಳಿಸಿಕೊಂಡಲ್ಲಿ ಅಂತಹ ತಂಡಗಳಿಗೆ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು.

ನಾಟಕ ಮತ್ತು ಜನಪದ ಪ್ರಕಾರದಲ್ಲಿ ಭಾಗವಹಿಸುವ ಕಲಾವಿದ ಮತ್ತು ಸಂಗೀತಗಾರ ವಿದ್ಯಾರ್ಥಿ/ನಿಯರ, ನೇಪಥ್ಯಗಾರ ಸಂಖ್ಯೆ ಕನಿಷ್ಠ 10 ಮತ್ತು 20 ಮೀರಬಾರದು. ಒಂದೇ ಕಾಲೇಜಿನವರಾಗಿರಬೇಕು. ಗುರುತಿನ ಚೀಟಿ ಕಡ್ಡಾಯ. ನೇಪಥ್ಯಗಾರ ಸೇವೆಯನ್ನು ಎರವಲು ಪಡೆಯಬಹುದು. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ
ತಂಡವು ವಲಯ ಮಟ್ಟಕ್ಕೆ ಆಯ್ಕೆಗೊಂಡಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳೇ ವಲಯ ಮಟ್ಟದಲ್ಲೂ ಭಾಗವಹಿಸಬೇಕು.

ಸ್ಪರ್ಧೆಯಲ್ಲಿ ಭಾಗವಹಿಸುವ ನಾಟಕದ ಅವಧಿ ಕನಿಷ್ಠ 60 ನಿಮಿಷ ಗರಿಷ್ಠ 90 ನಿಮಿಷ ಜಾನಪದ ನೃತ್ಯಕ್ಕೆ ಕಾಲಾವಕಾಶ ಕನಿಷ್ಠ 10 ನಿಮಿಷ, ಗರಿಷ್ಠ 20 ನಿಮಿಷ. ಆಸಕ್ತ ಕಾಲೇಜುಗಳು ಅರ್ಜಿಗಳನ್ನು ಜ. 21ರೊಳಗೆ ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತುಳು ಭವನ ಉರ್ವ ಸ್ಟೋರ್‌ ಅಶೋಕನಗರ ಅಂಚೆ, ಮಂಗಳೂರು- 575006 ಇಲ್ಲಿಗೆ ಕಳುಹಿಸಿಕೊಡಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಹಾಸ ರೈ ಬಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next